ETV Bharat / state

ಜಿಲ್ಲಾ ಉಸ್ತುವಾರಿ ಮಂತ್ರಿ ಸೋಮಶೇಖರ್‌ಗೆ ರೈತರಿಂದ ಘೇರಾವ್

author img

By

Published : Nov 20, 2022, 7:16 PM IST

ಕಬ್ಬು ಬೆಳೆಗಾರ ರೈತರ ಕುಂದು ಕೊರತೆಗಳ ಸಭೆಯನ್ನು ಕರೆದು ಚರ್ಚಿಸಿ, ರೈತರ ಬೇಡಿಕೆಗಳನ್ನು ಈಡೇರಿಸದೇ ಇದ್ದರೆ ಮುಂದಿನ ದಿನಗಳಲ್ಲಿ ಪ್ರತಿಭಟಿಸುವುದಾಗಿ ರೈತರು ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಅವರಿಗೆ ಎಚ್ಚರಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಮಂತ್ರಿ ಸೋಮಶೇಖರ್‌ಗೆ ರೈತರಿಂದ ಘೇರಾವ್
ಜಿಲ್ಲಾ ಉಸ್ತುವಾರಿ ಮಂತ್ರಿ ಸೋಮಶೇಖರ್‌ಗೆ ರೈತರಿಂದ ಘೇರಾವ್

ಮೈಸೂರು: ಅಖಿಲ ಭಾರತ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭಕ್ಕೆ ಮೆರವಣಿಗೆ ಮೂಲಕ ಜಿಲ್ಲಾ ಉಸ್ತುವಾರಿ ಮಂತ್ರಿ ಎಸ್ ಟಿ ಸೋಮಶೇಖರ್ ಅವರು ಬರುವಾಗ ರೈತರು ದಿಢೀರ್ ಮುತ್ತಿಗೆ ಹಾಕಿದರು.

ರೈತರನ್ನು ನಿರ್ಲಕ್ಷ್ಯ ಮಾಡಿದ ಉಸ್ತುವಾರಿ ಸಚಿವರಿಗೆ ಧಿಕ್ಕಾರ, ರೈತ ವಿರೋಧಿ ಮಂತ್ರಿಗೆ ಧಿಕ್ಕಾರ, ಜಿಲ್ಲಾ ರೈತರ ಸಭೆ ಕರೆಯದ ಮಂತ್ರಿಗೆ ಧಿಕ್ಕಾರ, ಕಾರ್ಪೊರೇಟ್ ಕಂಪನಿಗಳ ಪರವಾಗಿರುವ ಮಂತ್ರಿಗೆ ಧಿಕ್ಕಾರ ಎಂದು ಕೂಗಿದರು.

ಕಳೆದ ತಿಂಗಳು 31ರಿಂದ ಸುಮಾರು ಹತ್ತು ದಿನಗಳ ಕಾಲ ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಬಳಿ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಮೈಸೂರು ಜಿಲ್ಲಾ ಕಬ್ಬು ಬೆಳೆಗಾರರು ಹಾಗೂ ಬಗರ್ ಹುಕುಂ ಸಾಗುವಳಿದಾರ ರೈತರು, ಜಿಲ್ಲೆಯ ರೈತರ, ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸುವಂತೆ ಆಹೋರಾತ್ರಿ ಧರಣಿ ನಡೆಸುತ್ತಿದ್ದರು ಸಹ ಸೌಜನ್ಯಕ್ಕಾದರೂ ರೈತರನ್ನು ಭೇಟಿ ಮಾಡಲಿಲ್ಲ ಎಂದು ಉಸ್ತುವಾರಿ ಮಂತ್ರಿಗೆ ರೈತರು ಮುತ್ತಿಗೆ ಹಾಕಿದರು.

ಸಚಿವರು ಕೂಡಲೇ ಎಚ್ಚೆತ್ತುಕೊಂಡು ಜಿಲ್ಲೆಯ ಕಬ್ಬು ಬೆಳೆಗಾರ ರೈತರ ಕುಂದು ಕೊರತೆಗಳ ಸಭೆಯನ್ನು ಕರೆದು ಚರ್ಚಿಸಿ, ರೈತರ ಸಭೆಗಳನ್ನು ಬಗೆಹರಿಸದೆ ಇದ್ದರೆ, ಮೈಸೂರು ಜಿಲ್ಲೆಗೆ ಯಾವುದೇ ಕಾರ್ಯಕ್ರಮಕ್ಕೆ ಬಂದರೂ ಇನ್ಮುಂದೆ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ಮೂಲಕ ಬಿಸಿಯನ್ನು ಮುಟ್ಟಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಓದಿ: 33 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ವಿತರಣೆ: ಸಚಿವ ಎಸ್ ಟಿ ಸೋಮಶೇಖರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.