ETV Bharat / state

ಮೈಸೂರು ಜಿಲ್ಲೆಗೆ 500 ಕೋಟಿ ಬಿಡುಗಡೆ ಮಾಡಿ: ಸಿಎಂಗೆ ಧ್ರುವನಾರಾಯಣ್​ ಆಗ್ರಹ

ಪ್ರವಾಹಕ್ಕೆ ತುತ್ತಾಗಿ ಜಲಾವೃತಗೊಂಡ ಬಡವಾಣೆಗಳಿಗೆ ಮಾಜಿ ಸಂಸದ ಆರ್.ಧ್ರುವನಾರಾಯಣ್ ಭೇಟಿ ನೀಡಿ ಪರಿಶೀಲನೆ ನಡೆಸಿ 500 ಕೋಟಿ ಪರಿಹಾರ ಧನವನ್ನು ಜಿಲ್ಲೆಗೆ ನೀಡುವಂತೆ ಮುಖ್ಯಮಂತ್ರಿಯವರಿಗೆ ಆಗ್ರಹಿಸಿದರು.

ಮಾಜಿ ಸಂಸದ ಆರ್ ಧ್ರುವ ನಾರಾಯಣ್
author img

By

Published : Aug 12, 2019, 4:38 PM IST

ಮೈಸೂರು: ನಂಜನಗೂಡು ಪಟ್ಟಣದ ನಂಜುಂಡೇಶ್ವರ ದೇವಾಲಯದ ತಗ್ಗು ಪ್ರದೇಶದಲ್ಲಿ ಜಲಾವೃತಗೊಂಡ ಬಡಾವಣೆಗಳಿಗೆ ಮಾಜಿ ಸಂಸದ ಆರ್.ಧ್ರುವನಾರಾಯಣ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕೇರಳದ ವಯನಾಡ್​ನಲ್ಲಿ ಸುರಿದ ಭೀಕರ ಮಳೆಗೆ ನಂಜನಗೂಡಿನ ಕಪಿಲಾ ನದಿಯ ಪ್ರವಾಹ ಉಕ್ಕಿ ಹರಿದು ಪಟ್ಟಣದ ಸಾವಿರಾರು ಕುಟುಂಬಗಳಿಂದು ಪರಿಹಾರ ಕೇಂದ್ರದ ಆಶ್ರಯ ಪಡೆಯುವಂತಹ ಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಕೃತಿ ವಿಕೋಪ ನಿಧಿಯಿಂದ ಸಮಸ್ಯೆಗೆ ಈಡಾಗಿರುವ 16 ಜಿಲ್ಲೆಗಳಿಗೆ ಸರ್ಕಾರದಿಂದ ನೂರು ಕೋಟಿ ಅನುದಾನ ಬಿಡುಗಡೆ ಮಾಡಿದ್ದಾರೆ.

ಮೈಸೂರು ಜಿಲ್ಲೆಗೆ 500 ಕೋಟಿ ಬಿಡುಗಡೆ ಮಾಡುವಂತೆ ಮಾಜಿ ಸಂಸದ ಆರ್.ಧ್ರುವನಾರಾಯಣ್ ಒತ್ತಾಯ

ಮೈಸೂರು ಜಿಲ್ಲೆಯಲ್ಲಿ ನಾಲ್ಕು ತಾಲೂಕುಗಳು ಭೀಕರ ಪ್ರವಾಹದ ನೀರಿಗೆ ತುತ್ತಾಗಿ ಜನರು ಮನೆಗಳನ್ನು ಕಳೆದುಕೊಂಡಿದ್ದಾರೆ. ಜೊತೆಗೆ ಸಾಕಷ್ಟು ಪ್ರಮಾಣದ ಬೆಳೆ ಹಾನಿಯಾಗಿದೆ. ಇಷ್ಟಾದರೂ ಕೂಡಾ ಮುಖ್ಯಮಂತ್ರಿಗಳು ಮೈಸೂರು ಜಿಲ್ಲೆಗೆ ಇದುವರೆಗೂ ಸರ್ಕಾರದ ವತಿಯಿಂದ ಹಣ ಮಂಜೂರು ಮಾಡಿಲ್ಲ ಎಂದು ಆರೋಪಿಸಿದರು.

ಇತರೆ ಜಿಲ್ಲೆಗಳಿಗೆ ಸರ್ಕಾರದ ಅಧೀನ ಕಾರ್ಯದರ್ಶಿಯನ್ನು ಪರಿಶೀಲನಾ ವಿಶೇಷ ಅಧಿಕಾರಿಯನ್ನಾಗಿ ನೇಮಕ ಮಾಡಿದ್ದಾರೆ. ಆದರೆ ಮೈಸೂರು ಜಿಲ್ಲೆಗೆ ವಿಶೇಷ ಅಧಿಕಾರಿಯನ್ನು ನೇಮಕ ಮಾಡಿಲ್ಲ. ಜಿಲ್ಲೆಗೆ ಐದುನೂರು ಕೋಟಿ ಅನುದಾನ ಬಿಡುಗಡೆ ಮಾಡಿ, ಸಂತ್ರಸ್ತರ ಕುಟುಂಬಗಳಿಗೆ ಉತ್ತಮ ಜೀವನ ರೂಪಿಸಿಕೊಳ್ಳಲು ಸರ್ಕಾರದ ಅಧೀನ ಕಾರ್ಯದರ್ಶಿಗಳನ್ನು ಜಿಲ್ಲೆಗೆ ನೇಮಕ ಮಾಡಿ ಎಂದು ಆಗ್ರಹಿಸಿದರು.

Intro:ಧ್ರುವನಾರಾಯಣBody:ಮಳೆಯಿಂದ ಜಲಾವೃತಗೊಂಡಿರುವ ಪ್ರದೇಶಗಳಿಗೆ ಧ್ರುವನಾರಾಯಣ ಭೇಟಿ
ಮೈಸೂರು: ಜಲಾವೃತಗೊಂಡು ಹಾನಿಗೊಳಗಾದ ಮನೆಗಳಿಗೆ ಭೇಟಿ ನೀಡಿದ ಮಾಜಿ ಸಂಸದ ಆರ್ ಧ್ರುವ ನಾರಾಯಣ್.

ನಂಜನಗೂಡು ಪಟ್ಟಣದ ನಂಜುಂಡೇಶ್ವರನ ದೇವಾಲಯದ ತಗ್ಗು ಪ್ರದೇಶದ ಬಡಾವಣೆಗಳಿಗೆ ಭೇಟಿ ನೀಡಿ ಪರಿಶೀಲನೆ.

ಪಟ್ಟಣದ ಗಂಜಿ ಕೇಂದ್ರಗಳಿಗೆ ತೆರಳಿ ಸಂತ್ರಸ್ತರ ಜೊತೆ ಮಾತುಕತೆ ಆಡಿದ ಮಾಜಿ ಸಂಸದ ಧ್ರುವನಾರಾಯಣ್.

ಕೇರಳದ ವೈನಾಡಿನಲ್ಲಿ ಸುರಿದ ಭೀಕರ ಮಳೆಗೆ ನಂಜನಗೂಡಿನ ಕಪಿಲಾ ನದಿಯ ಪ್ರವಾಹ ಉಕ್ಕಿ ಹರಿದು ಪಟ್ಟಣದ ಸಾವಿರಾರು ಕುಟುಂಬಗಳು ಇಂದು ಗಂಜಿ ಕೇಂದ್ರಕ್ಕೆ ತೆರಳಿ ಆಶ್ರಯ ಹೊಡೆಯುವಂತಹ ಸ್ಥಿತಿ ನಿರ್ಮಾಣವಾಗಿದೆ .

ಈಗಾಗಲೇ ರಾಜ್ಯದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಪ್ರಕೃತಿ ವಿಕೋಪದಿಂದ ಸಮಸ್ಯೆಗೆ ಈಡಾಗಿರುವ 16 ಜಿಲ್ಲೆಗಳಿಗೆ ಸರ್ಕಾರದಿಂದ ಈಗಾಗಲೇ ನೂರು ಕೋಟಿ ಅನುದಾನವನ್ನು ಬಿಡುಗಡೆ ಮಾಡಿದ್ದಾರೆ.

ಮೈಸೂರು ಜಿಲ್ಲೆಯಲ್ಲಿ ನಾಲ್ಕು ತಾಲೂಕುಗಳು ಭೀಕರ ಪ್ರವಾಹದ ನೀರಿಗೆ ತುತ್ತಾಗಿ ವಾಸದ ಮನೆಗಳನ್ನು ಕಳೆದುಕೊಂಡಿದ್ದಾರೆ ಬೆಳೆಹಾನಿ ಇಷ್ಟಾದರೂ ಮುಖ್ಯಮಂತ್ರಿಗಳು ಮೈಸೂರು ಜಿಲ್ಲೆಗೆ ಇದುವರೆಗೂ ಸರ್ಕಾರದ ವತಿಯಿಂದ ಹಣ ಮಂಜೂರು ಮಾಡಿಲ್ಲ ಎಂದು ಗಂಭೀರ ಆರೋಪ ಮಾಡಿದ ಮಾಜಿ ಸಂಸದ ಧ್ರುವನಾರಾಯಣ್.

ಬರೋಬರಿ ಸುಮಾರು ಐದುನೂರು ಕೋಟಿಗಳನ್ನು ಮೈಸೂರು ಜಿಲ್ಲೆ ಬಿಡುಗಡೆ ಮಾಡಬೇಕು ಇತರೆ ಜಿಲ್ಲೆಗಳಿಗೆ ಸರ್ಕಾರದ ಅಧೀನ ಕಾರ್ಯದರ್ಶಿ ಯನ್ನು ಪರಿಶೀಲನ ಅಧಿಕಾರಿಯಾಗಿ ವಿಶೇಷ ಅಧಿಕಾರಿಯಾಗಿ ನೇಮಕ ಮಾಡಿದ್ದಾರೆ.

ಆದರೆ ಮೈಸೂರು ಜಿಲ್ಲೆಗೆ ಸರ್ಕಾರದ ಮಟ್ಟದ ಅಧಿಕಾರಿಯನ್ನು ವಿಶೇಷ ಅಧಿಕಾರಿಯಾಗಿ ನೇಮಕ ಮಾಡಿಲ್ಲ ಮೈಸೂರು ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಎಚ್ ಡಿ ಕೋಟೆ ತಾಲೂಕಿನಲ್ಲಿ ಪ್ರಮುಖವಾಗಿ ಎರಡು ಸೇತುವೆಗಳು ನೆಲಕಚ್ಚಿದೆ ನಂಜನಗೂಡು ಪಟ್ಟಣದಲ್ಲಿ ಒಂದೂವರೆ ಸಾವಿರಕ್ಕೂ ಅಧಿಕ ಮನೆಗಳು ಹಾನಿಗೊಳಗಾಗಿವೆ ಸಾವಿರಾರು ಭೂಮಿಗಳು ಬೆಳೆಸಲಾಗಿದೆ ಆದರೆ ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ಇಪ್ಪತ್ತೈದು ಮೂವತ್ತು ಲಕ್ಷ ರೂ ಗಳನ್ನು ಮಾತ್ರ ಈಗ ತಾತ್ಕಾಲಿಕವಾಗಿ ನೀಡಿದ್ದಾರೆ.

ಆದರೆ ಸರ್ಕಾರದ ಮಟ್ಟದಲ್ಲಿ ಹಣ ಮಂಜೂರು ಮಾಡಿಲ್ಲ ನಾನು ಬಿಎಸ್ ಯಡಿಯೂರಪ್ಪನವರನ್ನು ಮೈಸೂರು ಜಿಲ್ಲೆಗೆ ಐದುನೂರು ಕೋಟಿ ಅನುದಾನವನ್ನು ಬಿಡುಗಡೆ ಮಾಡಿ ಸಾರ್ವಜನಿಕರ ಒಳಗಾದ ಸಂತ್ರಸ್ತರ ಕುಟುಂಬಗಳಿಗೆ ಉತ್ತಮ ಜೀವನ ರೂಪಿಸಿಕೊಳ್ಳಲು ಸರ್ಕಾರದ ಅಧೀನ ಕಾರ್ಯದರ್ಶಿಗಳನ್ನು ಮೈಸೂರು ಜಿಲ್ಲೆ ನೇಮಕ ಮಾಡಿ ಎಂದು ಆಗ್ರಹಿಸುತ್ತಿದ್ದೆನೆ ಎಂದು ಸಂದರ್ಭದಲ್ಲಿ ತಿಳಿಸಿದರು.

ಮೈಸೂರು ಜಿಲ್ಲೆಯಲ್ಲಿಯೇ ಇಂತಹ ಪ್ರವಾಹ ಮತ್ತು ಅವಗಡ ಹಿಂದೆಂದೂ ನಡೆಯದ ಪ್ರಕೃತಿ ವಿಕೋಪ ನಡೆದುಹೋಗಿದೆ.

ಮತ್ತೆ ಗಂಜಿ ಕೇಂದ್ರದಲ್ಲಿರುವ ಸಂತ್ರಸ್ತರು ತಮ್ಮ ಮನೆಗಳಿಗೆ ಮರಳಲು ಈಗಾಗಲೇ ಹೆಚ್ಚು ಪ್ರವಾಹದ ನೀರಿನಿಂದ ಮನೆ ಶೀತಲ ವ್ಯವಸ್ಥೆಯಿಂದ ಕೂಡಿದೆ ಯಾವ ವೇಳೆ ಎಲ್ಲಾದರೂ ಕುಸಿಯುವ ಹಂತ ತಲುಪಿದೆ.

ಸರ್ಕಾರದ ಅಧೀನ ಕಾರ್ಯದರ್ಶಿಯನ್ನು ವಿಶೇಷ ಅಧಿಕಾರಿಯನ್ನಾಗಿ ನಿರ್ಮಿಸಿ ಮನೆಗಳನ್ನು ಸೂಕ್ಷ್ಮತೆಯಿಂದ ಪರಿಶೀಲನೆ ಮಾಡಿ ಅವರಿಗೆ ಉತ್ತಮ ಜೀವನ ರೂಪಿಸಿಕೊಳ್ಳಲು ದಾರಿಯಾಗಬೇಕು ಎಂದು ಸಂದರ್ಭದಲ್ಲಿ ಮಾತನಾಡಿದರು.

ಮಾಜಿ ಸಂಸದರ ಪರಿಶೀಲನಾ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ನೂರಾರು ಮುಖಂಡರುಗಳು ಹಾಜರಿದ್ದರು.Conclusion:ಧ್ರುವನಾರಾಯಣ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.