ಮೈಸೂರು: ಒಂದು ವಾರದಿಂದ ಧಾರಾಕಾರ ಮಳೆಯ ಆರ್ಭಟಕ್ಕೆ ಮನೆಯ ಗೋಡೆ ಕುಸಿದಿದ್ದು, ಕುಟುಂಬಸ್ಥರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಂಜನಗೂಡು ತಾಲೂಕಿನ ಈರೇಗೌಡನಹುಂಡಿ ಗ್ರಾಮದಲ್ಲಿ ನಡೆದಿದೆ.
ಪುಷ್ಪಲತಾ - ಸಿದ್ದಪ್ಪಾಜಿ ಎಂಬ ದಂಪತಿ ವಾಸಿಸುವ ಮನೆ ಗೋಡೆ ಕುಸಿತವಾಗಿದ್ದರಿಂದ ಕುಟುಂಬಸ್ಥರು ಚಿಂತೆಗೀಡಾಗುವಂತಾಗಿದೆ. ಇತ್ತ ಮಲಗಲು ಸಹ ಜಾಗವಿಲ್ಲದೆ ಎರಡು ಮಕ್ಕಳ ಜೊತೆ ನಾವು ಎಲ್ಲಿಗೆ ಹೋಗಬೇಕು? ಎಂದು ಕಂಗಾಲಾಗಿದ್ದಾರೆ.
ಅನೇಕ ದಿನಗಳಿಂದ ಧಾರಾಕಾರ ಮಳೆಯ ರಭಸಕ್ಕೆ ಎಲ್ಲಿ ನಮ್ಮ ಮೇಲೆ ಮನೆಯ ಗೋಡೆ ಬೀಳುವುದೋ ಎಂದು ಭಯಬೀತರಾಗಿ ರಾತ್ರಿಯಿಡೀ ನಿದ್ರೆಯಿಲ್ಲದೆ ಪರದಾಡಿದ್ದೇವೆ. ಈಗಿರುವ ಮನೆ ಗೋಡೆಯೂ ಯಾವಾಗ ಬೀಳುವುದೆಂದು ಭಯಭೀತರಾಗಿದ್ದೇವೆ. ಬೆಳಗಿನ ಜಾವ ಗೋಡೆ ಕುಸಿದಿದ್ದರಿಂದ ಯಾವುದೇ ಅನಾಹುತವಾಗಿಲ್ಲ. ಸರ್ಕಾರ ಹಾಗೂ ತಾಲೂಕು ಆಡಳಿತ ತಕ್ಷಣ ನೆರವಾಗಬೇಕು, ನಮಗೆ ಮನೆ ನಿರ್ಮಾಣ ಮಾಡಿಕೊಡಬೇಕು ಎಂದು ನೊಂದ ಕುಟುಂಬಸ್ಥರು ಮನವಿ ಮಾಡಿದ್ದಾರೆ.
ಓದಿ: ಪದವಿ ವಿದ್ಯಾರ್ಥಿಗಳಿಗೆ ಹಣಕಾಸು ಶಿಕ್ಷಣ: ಎನ್ ಎಸ್ ಇ ಜೊತೆ ಶಿಕ್ಷಣ ಇಲಾಖೆ ಒಪ್ಪಂದ