ETV Bharat / state

ಸಿದ್ದರಾಮಯ್ಯ ಭದ್ರಕೋಟೆ ಛಿದ್ರಗೊಳಿಸಿ ಬಾವುಟ ಹಾರಿಸಲಿದ್ದಾರಾ ಸೋಮಣ್ಣ? - ವರುಣಾದಲ್ಲಿ ಜಾತಿ ಲೆಕ್ಕಾಚಾರ

ಈ ಬಾರಿ ವರುಣಾದಲ್ಲಿ ಹಳೆಯ ಸ್ನೇಹಿತರ ಮಧ್ಯೆ ಪೈಪೋಟಿ ಜೋರಾಗಿಯೇ ನಡೆಯುತ್ತಿದೆ. ವರುಣಾ ಕ್ಷೇತ್ರವನ್ನು ಗೆಲ್ಲಲು ಬಿಜೆಪಿ ರಾಷ್ಟ್ರೀಯ ನಾಯಕರು ತಂತ್ರ ರೂಪಿಸಿದ್ದು, ಈ ತಂತ್ರವನ್ನು ಹೇಗೆ ಭೇದಿಸಬೇಕೆಂದು ಸಿದ್ದರಾಮಯ್ಯ ಪ್ರತಿತಂತ್ರ ರೂಪಿಸುತ್ತಿದ್ದಾರೆ. ರಾಜ್ಯದ ಹೈವೋಲ್ಟೆಜ್​ ಕಣವಾಗಿರುವ ವರುಣಾ ಕ್ಷೇತ್ರದಲ್ಲಿ ಚುನಾವಣಾ ಲೆಕ್ಕಾಚಾರಗಳ ಕುರಿತು ಒಂದು ವರದಿ ಇಲ್ಲಿದೆ.

Face to Face battle between  Siddaramaiah and Somanna in Varuna  Varuna assembly constituency  ಸಿದ್ದರಾಮಯ್ಯ ಭದ್ರಕೋಟೆಯನ್ನು ಛಿದ್ರ  ಛಿದ್ರಗೊಳಿಸಿ ಬಾವುಟ ಹಾರಿಸಲಿದ್ದಾರಾ ಸೋಮಣ್ಣ  ವರುಣಾದಲ್ಲಿ ಹಳೆಯ ಸ್ನೇಹಿತರ ಮಧ್ಯೆ ಪೈಪೋಟಿ  ಸಿದ್ದರಾಮಯ್ಯ ಮತ್ತೆ ವರುಣಾದಿಂದ ಸ್ಪರ್ಧೆ  ಬಿಜೆಪಿಯಿಂದ ವಿ ಸೋಮಣ್ಣ ಸ್ಪರ್ಧಿ  ವರುಣಾ ಕ್ಷೇತ್ರ ಹೈ ವೋಲ್ಟೆಜ್ ಕದನ  ವರುಣಾದಲ್ಲಿ ಜಾತಿ ಲೆಕ್ಕಾಚಾರ  ಸೋಮಣ್ಣನವರಿಂದ ಪ್ರಬಲ ಪೈಪೋಟಿ
ಸಿದ್ದರಾಮಯ್ಯ ಭದ್ರಕೋಟೆಯನ್ನು ಛಿದ್ರಗೊಳಿಸಿ ಬಾವುಟ ಹಾರಿಸಲಿದ್ದಾರಾ ಸೋಮಣ್ಣ
author img

By

Published : May 1, 2023, 2:12 PM IST

ಮೈಸೂರು : ಸಿದ್ದರಾಮಯ್ಯ ಮತ್ತೆ ವರುಣಾದಿಂದ ಸ್ಪರ್ಧೆ ಮಾಡಿರುವ ಹಿನ್ನೆಲೆ ಮತ್ತು ಬಿಜೆಪಿಯಿಂದ ವಿ ಸೋಮಣ್ಣ ಸ್ಪರ್ಧಿಸುವುದರಿಂದ ಈಗ ವರುಣಾ ಕ್ಷೇತ್ರ ಹೈ ವೋಲ್ಟೆಜ್ ಕದನವಾಗಿ ರಾಜ್ಯದ ಗಮನ ಸೆಳೆಯುತ್ತಿದೆ. ಸಿದ್ದು ಭದ್ರಕೋಟೆಯಲ್ಲಿ ಸೋಮಣ್ಣ ಹೋರಾಟ ನಡೆಸುತ್ತಿದ್ದಾರೆ.

Face to Face battle between  Siddaramaiah and Somanna in Varuna  Varuna assembly constituency  ಸಿದ್ದರಾಮಯ್ಯ ಭದ್ರಕೋಟೆಯನ್ನು ಛಿದ್ರ  ಛಿದ್ರಗೊಳಿಸಿ ಬಾವುಟ ಹಾರಿಸಲಿದ್ದಾರಾ ಸೋಮಣ್ಣ  ವರುಣಾದಲ್ಲಿ ಹಳೆಯ ಸ್ನೇಹಿತರ ಮಧ್ಯೆ ಪೈಪೋಟಿ  ಸಿದ್ದರಾಮಯ್ಯ ಮತ್ತೆ ವರುಣಾದಿಂದ ಸ್ಪರ್ಧೆ  ಬಿಜೆಪಿಯಿಂದ ವಿ ಸೋಮಣ್ಣ ಸ್ಪರ್ಧಿ  ವರುಣಾ ಕ್ಷೇತ್ರ ಹೈ ವೋಲ್ಟೆಜ್ ಕದನ  ವರುಣಾದಲ್ಲಿ ಜಾತಿ ಲೆಕ್ಕಾಚಾರ  ಸೋಮಣ್ಣನವರಿಂದ ಪ್ರಬಲ ಪೈಪೋಟಿ
ವರುಣಾದಲ್ಲಿ ಸಿದ್ದರಾಮಯ್ಯ ಪ್ರಚಾರ

2008ರಲ್ಲಿ ಮೈಸೂರು, ನಂಜನಗೂಡು ಹಾಗೂ ಟಿ ನರಸೀಪುರ ತಾಲೂಕಿನ ಕೆಲವು ಗ್ರಾಮಗಳನ್ನು ಒಳಗೊಂಡು ಅಸ್ತಿತ್ವಕ್ಕೆ ಬಂದ ನೂತನ ಕ್ಷೇತ್ರವೇ ವರುಣಾ ವಿಧಾನಸಭಾ ಕ್ಷೇತ್ರ. ಈ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರಸಿದ್ಧ ಸುತ್ತೂರು ಮಠ ಹಾಗೂ ಕಪಿಲಾ ನದಿ ಹರಿದು ಹೋಗುತ್ತದೆ. ಕೃಷಿ ಪ್ರಧಾನ ಆಗಿರುವ ಈ ಕ್ಷೇತ್ರವನ್ನು ಕಳೆದ 15 ವರ್ಷಗಳಿಂದ ಸಿದ್ದರಾಮಯ್ಯ ಹಾಗೂ ಅವರ ಮಗ ಯತೀಂದ್ರ ಸಿದ್ದರಾಮಯ್ಯ ಪ್ರತಿನಿಧಿಸುತ್ತ ಬಂದಿದ್ದಾರೆ. 2008 ಹಾಗೂ 2013 ರಲ್ಲಿ ಸಿದ್ದರಾಮಯ್ಯ ಗೆಲುವು ಸಾಧಿಸಿ ಇಲ್ಲಿಂದಲೇ ವಿರೋಧ ಪಕ್ಷದ ನಾಯಕರಾಗಿ ಹೊರಹೊಮ್ಮಿದ್ದರು. 2013 ರಲ್ಲಿ ಮುಖ್ಯಮಂತ್ರಿ ಆಗಿ, 2018ರ ಚುನಾವಣೆಯಲ್ಲಿ ವರುಣಾ ಕ್ಷೇತ್ರವನ್ನು ಮಗ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಬಿಟ್ಟುಕೊಟ್ಟು, ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಸೋಲು ಅನುಭವಿಸಿದರು.

ಆದರೆ, 2018ರ ಚುನಾವಣೆಯಲ್ಲಿ ಮಗ ಯತೀಂದ್ರ ಸಿದ್ದರಾಮಯ್ಯ ವರುಣಾದಿಂದ ಗೆಲುವು ಸಾಧಿಸಿದ್ದು, ಈ ಬಾರಿ ಚುನಾವಣೆಯಲ್ಲಿ ತಂದೆಗೆ ಮತ್ತೆ ವರುಣಾ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದಾರೆ. ಈಗ ವರುಣಾದಲ್ಲಿ ಸಿದ್ದರಾಮಯ್ಯ ಹಾಗೂ ಬಿಜೆಪಿ ಸೋಮಣ್ಣನವರ ನಡುವೆ ನೇರ ಪೈಪೋಟಿ ಇದ್ದು. ಗೆಲುವಿಗಾಗಿ ತಂತ್ರ, ಅಬ್ಬರದ ಪ್ರಚಾರ ಹಾಗೂ ಜಾತಿ ಲೆಕ್ಕಾಚಾರ ನಡೆದಿದೆ.

ವರುಣಾದಲ್ಲಿ ಸೋಮಣ್ಣ ಪ್ರಚಾರ

ವರುಣಾದಲ್ಲಿ ಜಾತಿ ಲೆಕ್ಕಾಚಾರ: ಲಿಂಗಾಯತ-ವೀರಶೈವ ಸಮುದಾಯದ 55 ಸಾವಿರ, ದಲಿತರು 55 ಸಾವಿರ, ಕುರುಬ ಜನಾಂಗ 38 ಸಾವಿರ, ನಾಯಕರು 28 ಸಾವಿರ, ಇತರ ಹಿಂದುಳಿದ ವರ್ಗ 18 ಸಾವಿರ, ಒಕ್ಕಲಿಗರು 10 ಸಾವಿರ, ಮುಸ್ಲಿಮರು 5 ಸಾವಿರ, ಬ್ರಾಹ್ಮಣರು 4 ಸಾವಿರ ಸೇರಿದಂತೆ ಒಟ್ಟು 2,34,533 ಮತದಾರರಿದ್ದಾರೆ. ಇಲ್ಲಿಯವರೆಗೆ ನಡೆದ ಮೂರು ಚುನಾವಣೆಯಲ್ಲಿ ಅಂದರೆ 2008 ಹಾಗೂ 2013 ರಲ್ಲಿ ಸಿದ್ದರಾಮಯ್ಯ ಹಾಗೂ 2018 ರಲ್ಲಿ ಯತೀಂದ್ರ ಸಿದ್ದರಾಮಯ್ಯ ವರುಣಾದಿಂದ ಗೆಲುವು ಸಾಧಿಸಿದ್ದರು. ವರುಣಾ ಕಾಂಗ್ರೆಸ್​ನ ಹಾಗೂ ಸಿದ್ದರಾಮಯ್ಯನವರ ಭದ್ರಕೋಟೆ ಆಗಿದೆ.

ಸೋಮಣ್ಣನವರಿಂದ ಪ್ರಬಲ ಪೈಪೋಟಿ : ಸಿದ್ದರಾಮಯ್ಯ ಚುನಾವಣೆ ಘೋಷಣೆಗೂ ಮುನ್ನ ರಾಜ್ಯದ ಹಲವು ಕಡೆ ಸ್ಪರ್ಧೆ ಮಾಡುತ್ತಾರೆ ಎಂಬ ಸುದ್ದಿಯಿತ್ತು. ಆದ್ರೆ ಸಿದ್ದರಾಮಯ್ಯರಿಗೆ ವರುಣಾದಿಂದ ಸ್ಪರ್ಧೆ ಮಾಡಲು ಕಾಂಗ್ರೆಸ್​ ಅವಕಾಶ ಕಲ್ಪಿಸಿತು. ಇನ್ನು ಚುನಾವಣಾ ಚತುರ ವಿ. ಸೋಮಣ್ಣ ಅವರನ್ನು ವರುಣಾ ಹಾಗೂ ಚಾಮರಾಜನಗರ ಎರಡು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವಂತೆ ಹೈಕಮಾಂಡ್ ಟಿಕೆಟ್​ ನೀಡಿತು. ಸೋಮಣ್ಣ ನಾಮಪತ್ರ ಸಲ್ಲಿಸುತ್ತಿದ್ದಂತೆ ವರುಣಾ ಹೈ ವೋಲ್ಟೆಜ್​ ಕ್ಷೇತ್ರವಾಗಿ ರಾಜ್ಯದಲ್ಲಿ ಗಮನ ಸೆಳೆಯುತ್ತಿದೆ.

ಸೋಮಣ್ಣ ವರುಣಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವಾಗ ಸ್ವತಃ ಸಿ ಎಂ ಬಸವರಾಜ ಬೊಮ್ಮಯಿಯೇ ಆಗಮಿಸಿದ್ದರು. ಮುಖ್ಯಮಂತ್ರಿ ಬೊಮ್ಮಾಯಿ, ಅಮಿತ್ ಶಾ ಸೇರಿದಂತೆ ಹಲವು ರಾಷ್ಟ್ರ ಮಟ್ಟದ, ರಾಜ್ಯ ಮಟ್ಟದ ನಾಯಕರು, ಸಿನಿಮಾ ನಟರು ಸೇರಿದಂತೆ ಹಲವಾರು ಪ್ರಮುಖ ನಾಯಕರು ಸೋಮಣ್ಣ ಪರ ಪ್ರಚಾರ ನಡೆಸಿದ್ದಾರೆ. ವರುಣಾದಲ್ಲಿ ಅಭ್ಯರ್ಥಿ ಸೋಮಣ್ಣ ಗ್ರಾಮ ಗ್ರಾಮಗಳಲ್ಲಿ ಪ್ರಚಾರದ ಮೂಲಕ ಜಾತಿ ಲೆಕ್ಕಾಚಾರದಲ್ಲಿ ಮತ ಸೆಳೆಯಲು ತಂತ್ರಗಳನ್ನು ಮಾಡುತ್ತಿದ್ದಾರೆ. ಹೇಗಾದರೂ ಮಾಡಿ ವರುಣಾದಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸಲು ತಂತ್ರ ರೂಪಿಸುತ್ತಿದ್ದಾರೆ ಎಂದು ಹೇಳಲಾಗ್ತಿದೆ.

ಸಿದ್ದರಾಮಯ್ಯ ಅವರ ಸೊಸೆ ಸ್ಮಿತಾ ರಾಕೇಶ್ ಈಗಾಗಲೇ ತಮ್ಮ ಮಾವನ ಪರವಾಗಿ ಚುನಾವಣಾ ಪ್ರಚಾರ ಕೈಗೊಂಡಿದ್ದಾರೆ. ಮೇ 3 ರಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಮೇ 4 ರಂದು ನಟಿ ರಮ್ಯಾ, ಶಿವರಾಜ್ ಕುಮಾರ್, ದುನಿಯಾ ವಿಜಯ್ ಸಹ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ. ಅನಂತರ ಮತದಾನಕ್ಕೆ ಮುನ್ನ ಎರಡು ದಿನ ಸಿದ್ದರಾಮಯ್ಯ ಕ್ಷೇತ್ರದಲ್ಲಿಯೇ ವಾಸ್ತವ್ಯ ಹೂಡಿ ಪ್ರಚಾರ ನಡೆಸಲಿದ್ದಾರೆ ಎನ್ನಲಾಗಿದೆ.

ಓದಿ: ಏಕರೂಪದ ನಾಗರಿಕ ಸಂಹಿತೆ ಜಾರಿ, BPL ಕುಟುಂಬಕ್ಕೆ ಪ್ರತಿದಿನ ಅರ್ಧ ಲೀಟರ್ ಹಾಲು, 3 ಗ್ಯಾಸ್ ಸಿಲಿಂಡರ್‌ ಫ್ರೀ!- ಬಿಜೆಪಿ ಪ್ರಣಾಳಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.