ಮೈಸೂರು: ಕೊರೊನಾ ಬಂದ ಮೇಲೆ ಸಿಡಿ ಪ್ರಕರಣ ಮುಚ್ಚಿ ಹೋಗುತ್ತಿದ್ದು, ಇದರ ಸತ್ಯಾಂಶ ಗೊತ್ತಾಗಬೇಕಾದರೆ ತನಿಖೆಯನ್ನು ಸಿಬಿಐ ವಹಿಸಬೇಕು. ಇಲ್ಲದಿದ್ದರೆ ಹೆಚ್ ಡಿ ಕುಮಾರಸ್ವಾಮಿ ಹೇಳಿದಂತೆ ತನಿಖೆ ಹಳ್ಳ ಹಿಡಿಯಲಿದೆ ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಕೊರೊನಾ ಬಂದು ಸಿಡಿ ಪ್ರಕರಣ ಮುಚ್ಚಿಕೊಂಡಿದೆ: ಮಾಜಿ ಸಂಸದ ಶಿವರಾಮೇಗೌಡ - ಸಿಡಿ ಪ್ರಕರಣ ಬಗ್ಗೆ ಶಿವರಾಮೇಗೌಡ ಪ್ರತಿಕ್ರಿಯೆ
ಕೊರೊನಾ ಬಂದು ಮಾಜಿ ಸಚಿವರ ಸಿಡಿ ಪ್ರಕರಣ ಮುಚ್ಚಿಹೋಗಿದೆ ಎಂದು ಮಾಜಿ ಸಂಸದ ಶಿವರಾಮೇಗೌಡ ಮೈಸೂರಿನಲ್ಲಿ ಹೇಳಿದ್ರು.
ಮಾಜಿ ಸಂಸದ ಶಿವರಾಮೇಗೌಡ ಹೇಳಿಕೆ
ಮೈಸೂರು: ಕೊರೊನಾ ಬಂದ ಮೇಲೆ ಸಿಡಿ ಪ್ರಕರಣ ಮುಚ್ಚಿ ಹೋಗುತ್ತಿದ್ದು, ಇದರ ಸತ್ಯಾಂಶ ಗೊತ್ತಾಗಬೇಕಾದರೆ ತನಿಖೆಯನ್ನು ಸಿಬಿಐ ವಹಿಸಬೇಕು. ಇಲ್ಲದಿದ್ದರೆ ಹೆಚ್ ಡಿ ಕುಮಾರಸ್ವಾಮಿ ಹೇಳಿದಂತೆ ತನಿಖೆ ಹಳ್ಳ ಹಿಡಿಯಲಿದೆ ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಬಿಜೆಪಿಯ ಕೆಲವು ನಾಯಕರು ಸಿಡಿ ಪ್ರಕರಣವನ್ನು ದಿಕ್ಕು ತಪ್ಪಿಸುವ ರಾಜಕಾರಣ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಕೊರೊನಾದ ಎರಡನೇ ಅಲೆ ಭಯ ಉಂಟು ಮಾಡಿದೆ. ರಾಜ್ಯ ಸರ್ಕಾರ ಯಾವುದೆ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಂಸದ ವಾಗ್ದಾಳಿ ನಡೆಸಿದರು.
ಶಾಸಕ ಜಿ.ಟಿ.ದೇವೆಗೌಡ ಅವರಿಗೆ ಜಿಡಿಎಸ್ ಪಕ್ಷ ಅನಿರ್ವಾಯ ಜೆಡಿಎಸ್ಗೂ ಜಿ.ಟಿ.ದೇವೆಗೌಡ ಅನಿರ್ವಾಯ ಸಿದ್ದರಾಮಯ್ಯ ಮೈಸೂರು ಭಾಗದಲ್ಲಿ ರಾಜಕೀಯದಲ್ಲಿ ಇರುವವರೆಗೂ ಜಿಟಿ ದೇವೇಗೌಡರಿಗೆ ಕಾಂಗ್ರೆಸ್ನಲ್ಲಿ ಅವಕಾಶವಿಲ್ಲ. ಇನ್ನೂ ಈಗಾಗಲೇ ಬಿಜೆಪಿಗೆ ಹೋಗಿ ಬಂದಿರುವ ಜಿಟಿಡಿ ಪೂನಃ ಬಿಜೆಪಿಗೆ ಹೋಗಲಾರರು. ನಮ್ಮ ನಡುವೆ ಇರುವ ಸಣ್ಣ ಪುಟ್ಟ ಗೊಂದಲಗಳನ್ನು ಸರಿಪಡಿಸಿಕೊಂಡು ಅವರು ಜೆಡಿಎಸ್‌ನಲ್ಲೇ ಇರುತ್ತಾರೆ. ಈ ಬಾರಿ ನಾಗಮಂಗಲ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಯ ಟಿಕಿಟ್ ಆಕಾಂಕ್ಷಿ ನಾನಾಗಿದ್ದು ಈ ಬಗ್ಗೆ ನಮ್ಮ ನಾಯಕರ ಜೊತೆ ಮಾತನಾಡುತ್ತೇನೆ. ಹಾಲಿ ಜೆಡಿಎಸ್ ಶಾಸಕ ಸುರೇಶ್ ಗೌಡರಿಗೆ ಬದಲಿ ವ್ಯವಸ್ಥೆಯನ್ನು ಪಕ್ಷ ಮಾಡುತ್ತದೆ ಮುಂದಿನ ವಿಧನಾಸಭಾ ಚುನಾವಣೆಯಲ್ಲಿ ಮಂಡ್ಯದ 7 ವಿಧಾನ ಸಭಾ ಕ್ಷೇತ್ರವನ್ನು ಜೆಡಿಎಸ್ ಗೆಲ್ಲುತ್ತದೆ ಎಂದು ಅವರು ಹೇಳಿದ್ದಾರೆ.
ಮಂಡ್ಯದಲ್ಲಿ ಬಿಜೆಪಿ ಕಮಲ ಅರಳಿ ಮುದುಡಿದೆ. ಇನ್ನು ಮಂಡ್ಯದಲ್ಲಿ ಬಿಜೆಪಿ ಕಮಲ ಅರಳಲು ಸಾಧ್ಯವಿಲ್ಲ ಎಂದರು. 2023ಕ್ಕೆ ಕುಮಾರಸ್ವಾಮಿ ಕಾಲನ್ನು ಹಿಡಿಯುವ ಸ್ಥಿತಿ ಮತ್ತೆ ರಾಷ್ಟ್ರೀಯ ಪಕ್ಷಗಳಿಗೆ ಬರುತ್ತದೆ. 2018 ರಲ್ಲಿ ಕುಮಾರಸ್ವಾಮಿ ಮತ್ತೆ ಸಿಎಂ ಆಗುತ್ತಾರೆ ಎಂದು ಹೇಳಿದರೆ ನಗುತ್ತಿದ್ದರು. ಅವರೇ ಕುಮಾರಸ್ವಾಮಿ ಅವರನ್ನು ಹುಡಿಕಿಕೊಂಡು ಬಂದು ಸಿಎಂ ಮಾಡಿದರು. ಈಗ 2023ಕ್ಕೆ ಕುಮಾರಸ್ವಾಮಿಯನ್ನು ಹುಡಿಕಿಕೊಂಡು ಬರಲೇಬೇಕು ಎಂದು ಮಾಜಿ ಸಂಸದ ಶಿವರಾಮೇಗೌಡ ಹೇಳಿದರು.