ETV Bharat / state

ರಾಜ್ಯದಲ್ಲಿ ಆರೋಗ್ಯ ಮಂತ್ರಿ ಯಾರು ಎಂಬುದೇ ದೊಡ್ಡ ಗೊಂದಲ ; ಆರ್‌ ಧ್ರುವ ನಾರಾಯಣ್ - Chamarajanagar Ex MP R. Dhruvanarayan

ರಾಜ್ಯದಲ್ಲಿ ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಯಾವುದೇ ಕ್ರಮಗಳನ್ನು ಸರ್ಕಾರ ತೆಗೆದುಕೊಂಡಿಲ್ಲ. ಕೇರಳದಲ್ಲಿ ಒಬ್ಬರೆ ಆರೋಗ್ಯ ಮಂತ್ರಿ ಎಲ್ಲ ಇಲಾಖೆ ನಿಯಂತ್ರಿಸುತ್ತಿದ್ದಾರೆ. ಕೇರಳದ ಈ ಕ್ರಮವನ್ನ ಸುಪ್ರೀಂಕೋರ್ಟ್ ನ್ಯಾಯಾಧೀಶರೇ ಪ್ರಶಂಸೆ ಮಾಡಿದ್ದಾರೆ. ಕೇರಳದಲ್ಲಿ ಸಾವಿನ ಸಂಖ್ಯೆ ಕೇವಲ 522 ಮಾತ್ರ. ಆದರೆ, ರಾಜ್ಯದಲ್ಲಿ ಸಾವಿನ ಸಂಖ್ಯೆ 8 ಸಾವಿರಕ್ಕೂ ಮೀರಿದೆ..

Ex MP Dhruvanarayan reaction about health minister statement
ಮಾಜಿ ಸಂಸದ ಧ್ರುವ ನಾರಾಯಣ್
author img

By

Published : Sep 26, 2020, 5:04 PM IST

ಮೈಸೂರು : ನಮ್ಮ ರಾಜ್ಯದ ಆರೋಗ್ಯ ಸಚಿವರು ತಮ್ಮ ಹೇಳಿಕೆ ನೀಡುವ ಸ್ವಾತಂತ್ರ ಕಳೆದುಕೊಂಡಿದ್ದಾರೆ. ಹೇಳಿಕೆಗಳನ್ನು ನೀಡಲು ಅವರ ಪಕ್ಷದವರೇ ಅವರನ್ನು ಮುಂದೆ ಬಿಡುತ್ತಿಲ್ಲ. ಅವರ ಬದಲಿಗೆ ಯಾರ್ಯಾರೋ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದರಿಂದ ರಾಜ್ಯದಲ್ಲಿ ಆರೋಗ್ಯ ಸಚಿವರು ಯಾರು ಎಂಬುದೇ ಗೊತ್ತಾಗುತ್ತಿಲ್ಲ ಎಂದು ಮಾಜಿ ಸಂಸದ ಆರ್‌ ಧ್ರುವ ನಾರಾಯಣ್ ಟೀಕಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಆರೋಗ್ಯ ಹಸ್ತ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಕಳೆದ 3 ತಿಂಗಳಿನಿಂದ ವೇತನ ನೀಡಿಲ್ಲ, ಈ ಬಗ್ಗೆ ಕೇಳ ಬೇಕೆಂದ್ರೆ ಇಲ್ಲಿ ಆರೋಗ್ಯ ಮಂತ್ರಿ ಯಾರು ಎಂಬುದೇ ಗೊತ್ತಾಗುತ್ತಿಲ್ಲ. ಪ್ರಾರಂಭದಲ್ಲಿ ಆರೋಗ್ಯ ಮಂತ್ರಿಯಾಗಿ ಶ್ರೀರಾಮುಲು ಇದ್ದರು. ಆದರೆ, ಕೊರೊನಾ ಅಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಈ ಬಗ್ಗೆ ಅವರಿಗೆ ಹೇಳಿಕೆ ನೀಡಲೂ ಸಹ ಬಿಡುತ್ತಿಲ್ಲ.

ಸಚಿವರಾದ ಸುಧಾಕರ್, ಅಶ್ವತ್ಥ್​ ನಾರಾಯಣ, ಆರ್‌ ಅಶೋಕ್ ಹಾಗೂ ಸುರೇಶ್‌ಕುಮಾರ್ ಅವರು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಹಾಗಾಗಿ, ‌ಇಲ್ಲಿ ಆರೋಗ್ಯ ಮಂತ್ರಿ ಯಾರು ಎಂಬುದೇ ದೊಡ್ಡ ಪ್ರಶ್ನೆಯಾಗಿದೆ ಎಂದು ಕುಟುಕಿದರು.

ರಾಜ್ಯದಲ್ಲಿ ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಯಾವುದೇ ಕ್ರಮಗಳನ್ನು ಸರ್ಕಾರ ತೆಗೆದುಕೊಂಡಿಲ್ಲ. ಕೇರಳದಲ್ಲಿ ಒಬ್ಬರೆ ಆರೋಗ್ಯ ಮಂತ್ರಿ ಎಲ್ಲ ಇಲಾಖೆ ನಿಯಂತ್ರಿಸುತ್ತಿದ್ದಾರೆ. ಕೇರಳದ ಈ ಕ್ರಮವನ್ನ ಸುಪ್ರೀಂಕೋರ್ಟ್ ನ್ಯಾಯಾಧೀಶರೇ ಪ್ರಶಂಸೆ ಮಾಡಿದ್ದಾರೆ. ಕೇರಳದಲ್ಲಿ ಸಾವಿನ ಸಂಖ್ಯೆ ಕೇವಲ 522 ಮಾತ್ರ. ಆದರೆ, ರಾಜ್ಯದಲ್ಲಿ ಸಾವಿನ ಸಂಖ್ಯೆ 8 ಸಾವಿರಕ್ಕೂ ಮೀರಿದೆ. ಇಲ್ಲಿ ಕೊರೊನಾ ತಡೆಗೆ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಇದನ್ನೇ ದುರುಪಯೋಗ ಮಾಡಿಕೊಂಡ ಖಾಸಗಿ ಆಸ್ಪತ್ರೆಗಳು ವ್ಯಾಪಕ ಲೂಟಿಯಲ್ಲಿ ತೊಡಗಿವೆ ಎಂದು ಆರೋಪಿಸಿದರು.

ಮಾಜಿ ಸಂಸದ ಆರ್‌ ಧ್ರುವ ನಾರಾಯಣ್

ಕೊರೊನಾದಿಂದ ಬೆಡ್​, ಆ್ಯಕ್ಸಿಜನ್, ವೆಂಟಿಲೇಟರ್​ಗಳ ಕೊರತೆ ಸಾಕಷ್ಟು ಕಂಡು ಬಂದಿದೆ. ಇದಕ್ಕೆ ಹೆಚ್ಚು ಗಮನ ಕೊಡಬೇಕು, ಈ ವರ್ಷ ನಾಡಹಬ್ಬ ದಸರಾವನ್ನು ಸರ್ಕಾರ ಮಾಡದಿದ್ದರೂ ಪರವಾಗಿಲ್ಲ, ರಾಜಮನೆತನದವರು ಸಾಂಪ್ರದಾಯಿಕವಾಗಿ ಅರಮನೆಯಲ್ಲೇ ದಸರಾ ಮಾಡಿದ್ರೆ ಸಾಕು. ಸರಳ ದಸರಾಗೆ ₹15 ಕೋಟಿ ಖರ್ಚು ಮಾಡುವುದಕ್ಕಿಂತ ಕೋವಿಡ್​ಗೆ ಈ ಹಣ ಖರ್ಚು ಮಾಡಿದ್ರೆ ಒಳ್ಳೆಯದು ಎಂದು ಸಲಹೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.