ETV Bharat / state

ಡಿ. 9ರ ನಂತರ ಸವದಿ ಡಿಸಿಎಂ ಸ್ಥಾನದಲ್ಲಿ ಇರಲ್ಲ: ಕುಮಾರಸ್ವಾಮಿ

ಉಪ ಚುನಾವಣೆಯಲ್ಲಿ ನಾಮಪತ್ರ ತೆಗೆಸಲು ವಿಫಲ ಯತ್ನ ನಡೆಸಿದ ಬಿಜೆಪಿಯವರಿಗೆ ಸೋಲಿನ ಅರಿವು ಕಾಣಿಸುತ್ತಿದೆ. ಲೋಕಸಭೆ​ ಚುನಾವಣೆಯಲ್ಲಿ ತಾವು ಹೇಳಿದಂತೆ 25 ಸ್ಥಾನ ಗೆದ್ದಿದ್ದೇವೆ. ಹಾಗೆಯೇ ಉಪ ಚುನಾವಣೆಯಲ್ಲೂ ಆಗುತ್ತೆ ಎಂದು ಯಡಿಯೂರಪ್ಪ ಹೇಳ್ತಾರೆ. ಆದರೆ ಲೋಕಸಭೆ​ ಹಾಗೂ ವಿಧಾನಸಭಾ ಚುನಾವಣೆ ನಡುವೆ ಬಹಳಷ್ಟು ವ್ಯತ್ಯಾಸವಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ರು.

ಕುಮಾರಸ್ವಾಮಿ
author img

By

Published : Nov 21, 2019, 7:24 PM IST

ಮೈಸೂರು: ಉಪ ಚುನಾವಣೆಯಲ್ಲಿ ಅಥಣಿ ಕ್ಷೇತ್ರದಲ್ಲಿ ಲಕ್ಷ್ಮಣ್ ಸವದಿಯವರು ಜೆಡಿಎಸ್ ಅಭ್ಯರ್ಥಿಯಿಂದ ನಾಮಪತ್ರವನ್ನು ಹಿಂತೆಗೆದುಕೊಳ್ಳುವಂತೆ ಮಾಡಿರಬಹುದು. ಆದರೆ ಡಿ. 9ರ ನಂತರ ಸವದಿಯವರು ಡಿಸಿಎಂ ಸ್ಥಾನದಲ್ಲಿ ಇರಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಹುಣಸೂರು ತಾಲೂಕಿನ ಭರತ್ವಾಡಿಯಲ್ಲಿ ಜೆಡಿಎಸ್​​ ಅಭ್ಯರ್ಥಿ ಪರವಾಗಿ ಪ್ರಚಾರ ನಡೆಸಿದ ಅವರು, ಮಾಧ್ಯಮದವರೊಂದಿಗೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದರು. ಗೋಕಾಕ್​​​ನಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಅಶೋಕ್ ಪೂಜಾರಿ ನಾಮಪತ್ರ ವಾಪಸ್ ತೆಗೆಸಲು ಸಾಕಷ್ಟು ಪ್ರಯತ್ನ ಮಾಡಿದ್ದರು. ಅಶೋಕ್ ಪೂಜಾರಿಯನ್ನು ಬೀದಿಗೆ ಬಿಟ್ಟ ಬಿಜೆಪಿಯವರು ಅವರೊಂದಿಗೆ ಆಟವಾಡಿದರು. ಆದರೆ ನಮ್ಮ ಪಕ್ಷದಿಂದ ಉಪ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಆಮಿಷವೊಡ್ಡಿ ವಿಫಲರಾಗಿದ್ದಾರೆ. ಕಳೆದ ಬಾರಿ ಅಶೋಕ್ ಪೂಜಾರಿ 3 ಸಾವಿರ ಮತಗಳಿಂದ ಸೋಲಲು ಉಮೇಶ್ ಕತ್ತಿ ಕಾರಣ ಎಂದರು.

ಹುಣಸೂರಿನಲ್ಲಿ ಮಾಜಿ ಸಿಎಂ ಹೆಚ್​.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ

ಹೀಗೆ ನಾಮಪತ್ರ ತೆಗೆಸಲು ವಿಫಲ ಯತ್ನ ನಡೆಸಿದ ಬಿಜೆಪಿಯವರಿಗೆ ಸೋಲಿನ ಅರಿವು ಕಾಣಿಸುತ್ತಿದೆ. ಲೋಕಸಭಾ​ ಚುನಾವಣೆಯಲ್ಲಿ ನಾವು ಹೇಳಿದಂತೆ 25 ಸ್ಥಾನ ಗೆದ್ದಿದ್ದೇವೆ. ಹಾಗೆಯೇ ಉಪ ಚುನಾವಣೆಯಲ್ಲಿ ಆಗುತ್ತೆ ಎಂದು ಯಡಿಯೂರಪ್ಪ ಹೇಳ್ತಾರೆ. ಲೋಕಸಭೆ​ ಹಾಗೂ ವಿಧಾನಸಭಾ ಚುನಾವಣೆ ನಡುವೆ ಬಹಳಷ್ಟು ವ್ಯತ್ಯಾಸವಿದೆ. 15 ಕ್ಷೇತ್ರಗಳಲ್ಲೂ ಅನರ್ಹ ಶಾಸಕರು ಜನರಿಂದ ತಿರಸ್ಕಾರಗೊಳ್ಳಲಿದ್ದಾರೆ ಎಂದು ಹೇಳಿದ್ರು.

ಇನ್ನು ನೆರೆ ಹಾವಳಿಯಿಂದ ತತ್ತರಿಸಿರುವ ಜನರಿಗೆ ಸರ್ಕಾರದಿಂದ ಯಾವುದೇ ಸವಲತ್ತು ದೊರೆತಿಲ್ಲ. ಲಕ್ಷಾಂತರ ಎಕರೆ ಪ್ರದೇಶದಲ್ಲಿ ಬೆಳೆ ನಾಶವಾಗಿದೆ. ಆದರೆ ಬಿಜೆಪಿಯವರಿಗೆ ಜನರ ಬದುಕಿಗಿಂತ ಅಧಿಕಾರವೇ ಹೆಚ್ಚಾಗಿದೆ. ನಾನು ಚುನಾವಣೆ ಪೂರ್ವದಲ್ಲಿ ಹೇಳಿದಂತೆಯೇ 14 ತಿಂಗಳ ಕಾಲ ಅಧಿಕಾರ ಅವಧಿಯಲ್ಲಿ ರೈತರ ಬೇಡಿಕೆಗಳಿಗೆ ಸ್ಪಂದಿಸಿದ್ದೇನೆ. ಮತದಾರರು ಅದನ್ನ ಗಮನದಲ್ಲಿಟ್ಟುಕೊಂಡು ತೀರ್ಮಾನ ಕೈಗೊಳ್ಳಬೇಕು ಎಂದು ಕುಮಾರಸ್ವಾಮಿ ಮನವಿ ಮಾಡಿದರು.

ರಮೇಶ್​​ ಜಾರಕಿಹೊಳಿ ಯಾವಾಗ ಯಾರ್ಯಾರ ಕಾಲೆಳೆಯುತ್ತಾರೆಂದು ಗೊತ್ತಿಲ್ಲ. ಮೈತ್ರಿ ಸರ್ಕಾರದ ಪತನಕ್ಕೆ ಪ್ರಮುಖ ಕಾರಣ ಅವರೇ ಆಗಿದ್ದು, ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಗೋಕಾಕ್​ ಕ್ಷೇತ್ರದ ಜನ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಹೆಚ್​ಡಿಕೆ ಹೇಳಿದ್ರು.

Intro:ಲಕ್ಷ್ಮಣ್ ಸವಾದಿ-ಎಚ್.ಡಿ.ಕುಮಾರಸ್ವಾಮಿ

Body:ಲಕ್ಷ್ಮಣ್ ಸವಾದಿ-ಎಚ್.ಡಿ.ಕುಮಾರಸ್ವಾಮಿ

Conclusion:ಡಿ.9ರ ನಂತರ ಲಕ್ಷ್ಮಣ್ ಸವಾದಿ ಡಿಸಿಎಂ ಆಗಿ ಮುಂದುವರಿತ್ತಾರಾ: ಎಚ್.ಡಿ.ಕೆ ಪ್ರಶ್ನೆ
ಮೈಸೂರು: ಸುದ್ದಿಯನ್ನು ನ್ಯೂಸ್ ವ್ರ್ಯಾಪ್ ನಲ್ಲಿ ಕಳುಹಿಸಲಾಗಿದೆ)
ETV Bharat Logo

Copyright © 2024 Ushodaya Enterprises Pvt. Ltd., All Rights Reserved.