ಮೈಸೂರು: ರಾಜ್ಯದಲ್ಲಿ ನಡೆಯುತ್ತಿರುವ ಧರ್ಮ ಸಂಘರ್ಷದ ಬಗ್ಗೆ ಎಲ್ಲರೂ ಕುಳಿತು ಮಾತುಕತೆ ನಡೆಸಬೇಕು. ಈ ಮೂಲಕವೇ ಸಮಸ್ಯೆ ಬಗೆಹರಿಸಿಕೊಳ್ಳಬೇಕಾಗಿದೆ. ಎಲ್ಲಾ ಗ್ರಂಥಗಳ ಮೂಲ ಅಹಿಂಸೆ. ಅಹಿಂಸಾ ಪರಮೋ ಧರ್ಮ ಎಂಬುದನ್ನು ಸಾರಿರುವ ದೇಶ ನಮ್ಮ ಭಾರತ ಎಂದು ಗೌರಿಗದ್ದೆ ಆಶ್ರಮದ ಅವಧೂತ ವಿನಯ್ ಗುರೂಜಿ ಹೇಳಿದರು.
ಇಂದು ಮೈಸೂರು ಮೃಗಾಲಯಕ್ಕೆ ಆಗಮಿಸಿದ ವಿನಯ್ ಗುರೂಜಿ ಮಾಧ್ಯಮಗಳ ಜೊತೆ ಮಾತನಾಡಿದರು. ನಾವು ದೇವರಿಗೆ ಚಿನ್ನದ ಹುಲಿ, ಜಿಂಕೆಯನ್ನು ಕೊಡುತ್ತೇವೆ. ಆದರೆ ಬದುಕಿರುವ ಪ್ರಾಣಿಗಳಿಗೆ ಏನನ್ನೂ ನೀಡುವುದಿಲ್ಲ. ಹಾಗಾಗಿ ನಮ್ಮ ಆಶ್ರಮ ಮಾದರಿಯಾಗಲಿ ಎಂದು ಹುಲಿಯನ್ನು ದತ್ತು ಪಡೆಯುತ್ತಿದ್ದೇವೆ. ಜೊತೆಗೆ, ಮೃಗಾಲಯದ ಸಿಬ್ಬಂದಿಗೆ ದಿನಸಿ ಹಾಗೂ ತರಕಾರಿ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಇದನ್ನೂ ಓದಿ:ವಿರೋಧ ನಡುವೆ ಪ್ರೇಮ ವಿವಾಹವಾದ ಜೋಡಿ.. ಈ ಮದುವೆ ಲವ್ ಜಿಹಾದ್ ಎಂದ ಸಿಪಿಎಂ ಕಾರ್ಯಕರ್ತ!