ETV Bharat / state

ಹೆತ್ತ ಮಗುವನ್ನೇ ಮಾರಾಟ ಮಾಡಿದ ಆರೋಪ: ತಾಯಿ ಸೇರಿ ಇತರರ ವಿಚಾರಣೆ ಚುರುಕು - ವೀಣಾ ಮತ್ತು ಶಶಿಕಲಾ

ಜ್ಯೋತಿ ಅವರು ಮಗುವಿಗೆ ಜನ್ಮ ನೀಡಿದ್ದ ಕುರಿತು ಮಾಹಿತಿ ಸಂಗ್ರಹಿಸಲು ಬಂದಿದ್ದ ಅಂಗನವಾಡಿ ಕಾರ್ಯಕರ್ತರಿಗೆ ಸರಿಯಾಗಿ ಮಾಹಿತಿ ನೀಡದ ಹಿನ್ನೆಲೆ ಅಂಗನವಾಡಿ ಕಾರ್ಯಕರ್ತೆಯರಾದ ವೀಣಾ ಮತ್ತು ಶಶಿಕಲಾ ಎಂಬುವವರು ಅಧಿಕಾರಿಗಳ ಗಮನಕ್ಕೆ ತಂದಿದ್ದರು.

SP R Chetan
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಆರ್.ಚೇತನ್
author img

By

Published : Jul 28, 2021, 9:34 AM IST

ಮೈಸೂರು: ನಂಜನಗೂಡು ತಾಲೂಕಿನಲ್ಲಿ ಹೆತ್ತ ತಾಯಿಯೇ ಹಸುಗೂಸನ್ನು ಮಾರಾಟ ಮಾಡಿರುವ ಆರೋಪ ಸಂಬಂಧ ತನಿಖೆ ಮತ್ತಷ್ಟು ಚುರುಕುಗೊಂಡಿದೆ. ಪ್ರಕರಣ ಕುರಿತಂತೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಆರ್.ಚೇತನ್ ಮಾತನಾಡಿದ, ಮಗು ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಹಣದ ವ್ಯವಹಾರ ನಡೆದಿರುವುದು ಕಂಡು ಬಂದಿದೆ. ಈ ಜಾಲದ ಬಗ್ಗೆ ತನಿಖೆಯನ್ನ ಮತ್ತಷ್ಟು ಚುರುಕುಗೊಳಿಸಲಾಗಿದೆ ಎಂದಿದ್ದಾರೆ.

ನಂಜನಗೂಡಿನ ನಿವಾಸಿಯಾಗಿರುವ ಶ್ರೀಮತಿ ಎಂಬ ಮಹಿಳೆಯೊಬ್ಬಳು ಹಾಗೂ ಮಗುವಿನ ತಾಯಿ ಜ್ಯೋತಿ ಸೇರಿದಂತೆ ಇತರರನ್ನು ವಿಚಾರಣೆ ನಡೆಯುತ್ತಿದೆ. ತನಿಖೆಯಿಂದ ಮತ್ತಷ್ಟು ಸತ್ಯ ಹೊರಬೀಳಲಿದೆ ಎಂದಿದ್ದಾರೆ.

ಮಗು ಮಾರಾಟ ಜಾಲ ಕುರಿತು ಎಸ್​​ಪಿ ಆರ್.ಚೇತನ್ ಪ್ರತಿಕ್ರಿಯೆ

ಜ್ಯೋತಿ ಅವರು ಮಗುವಿಗೆ ಜನ್ಮ ನೀಡಿದ್ದ ಕುರಿತು ಮಾಹಿತಿ ಸಂಗ್ರಹಿಸಲು ಬಂದಿದ್ದ ಅಂಗನವಾಡಿ ಕಾರ್ಯಕರ್ತರಿಗೆ ಸರಿಯಾಗಿ ಮಾಹಿತಿ ನೀಡದ ಹಿನ್ನೆಲೆ ಅಂಗನವಾಡಿ ಕಾರ್ಯಕರ್ತೆಯರಾದ ವೀಣಾ ಮತ್ತು ಶಶಿಕಲಾ ಎಂಬುವವರು ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಜೊತೆಗೆ ಈ ಸಂಬಂಧ ನಂಜನಗೂಡಿನ ಶಿಶು ಅಭಿವೃದ್ಧಿಯ ಸಹಾಯಕ ಅಧಿಕಾರಿ ನಂಜನಗೂಡು ಠಾಣೆಗೆ ದೂರು ನೀಡಿದ್ದರು.

ಏನಿದು ಪ್ರಕರಣ: ಜುಲೈ 18ರಂದು ಅಂಗನವಾಡಿ ಕಾರ್ಯಕರ್ತೆಯರಾದ ವೀಣಾ ಮತ್ತು ಶಶಿಕಲಾ ಅವರು ತಾಯಿ ಹಾಗೂ ಹೆರಿಗೆ ಆದ ಮಗು ಮಾಹಿತಿ ಪಡೆಯಲು ಜ್ಯೋತಿ ಅವರ ಮನೆಗೆ ಹೋಗಿದ್ದಾರೆ. ಮಗು ಮಾಹಿತಿ ಹೇಳಿದಾಗ ಹುಟ್ಟಿದ ತಕ್ಷಣ ಮಗು ತೀರಿ ಹೋಗಿದೆ, ಅಂತ್ಯಕ್ರಿಯೆ ಮಾಡಲಾಗಿದೆ ಜ್ಯೋತಿ ಎಂದು ಹೇಳಿದ್ದಾರೆ. ಅದಕ್ಕೆ ಮತ್ತೆ ಪ್ರಶ್ನೆ ಮಾಡಿದ ಅಂಗನವಾಡಿ ಕಾರ್ಯಕರ್ತೆಯರು, ಅಂತ್ಯಕ್ರಿಯೆ ಯಾವ ಸ್ಥಳ ಮಾಡಲಾಯಿತು ಎಂದು ತೋರಿಸಿ ಎಂದಾಗ ಜ್ಯೋತಿ ತಬ್ಬಿಬಾಗಿ ಉತ್ತರಿಸಲು ಪರದಾಡಿದ್ದಾರೆ. ಅನುಮಾನಗೊಂಡ ಅಂಗನವಾಡಿ ಕಾರ್ಯಕರ್ತೆಯರು ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ

ಬಳಿಕ ಪ್ರಕರಣ ಸಂಬಂಧ ಶಿಶು ಅಭಿವೃದ್ಧಿ ಯೋಜನಾ ಸಹಾಯಕ ಅಧಿಕಾರಿಗಳು ನಂಜನಗೂಡು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ನವಜಾತ ಶಿಶುವನ್ನು ದತ್ತು ನಿಯಮದ ಪ್ರಕಾರ ನೀಡಿಲ್ಲ. ತಾಯಿ ಜ್ಯೋತಿ ಹಾಗೂ ಮಗು ಮಾರಾಟಕ್ಕೆ ಸಹಾಯ ಮಾಡಿರುವ ಆರೋಪದಡಿ ಶ್ರೀಮತಿ ಇವರಿಬ್ಬರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಓದಿ: ಇಂದು ರಾಜ್ಯದ 20ನೇ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಪ್ರತಿಜ್ಞಾವಿಧಿ ಸ್ವೀಕಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.