ಮೈಸೂರು: ಅಮಾವಾಸ್ಯೆ ಪರಿಣಾಮದಿಂದ ಗಜಪಡೆ ಕ್ಯಾಪ್ಟನ್ ಅರ್ಜುನ ಸೇರಿದಂತೆ 5 ಆನೆಗಳು ಇಂದು ವಿಶ್ರಾಂತಿ ಪಡೆಯುತ್ತಿವೆ.
ಅಗಸ್ಟ್ 26ರ ಸೋಮವಾರ ಅರಮನೆಗೆ ಆಗಮಿಸಿದ ಕ್ಯಾಪ್ಟನ್ ಅರ್ಜುನ, ವಿಜಯ, ಅಭಿಮನ್ಯು, ವರಲಕ್ಷಿ, ಧನಂಜಯ ಹಾಗೂ ಈಶ್ವರ ಆನೆಗಳನ್ನು ಮಂಗಳವಾರ ತೂಕ ಮಾಡಿ, ಬುಧವಾರದಿಂದ ತಾಲೀಮು ಆರಂಭಿಸಲಾಯಿತು. ಇಂದು ಅಮಾವಾಸ್ಯೆ ಇರುವುದರಿಂದ ಆರು ಆನೆಗಳಿಗೆ ಅರಮನೆ ಹೊರಾವರಣದಲ್ಲಿರುವ ಆನೆಗಳ ತೊಟ್ಟಿಯಲ್ಲಿ ಆನೆಗಳಿಗೆ ಎಣ್ಣೆ ಸ್ನಾನ ಮಾಡಿಸಿ, ನಂತರ ಅವುಗಳಿಗೆ ಉಪಾಹಾರ ನೀಡಿ ವಿಶ್ರಾಂತಿ ನೀಡಲಾಗುತ್ತದೆ.
ಅಮಾವಾಸ್ಯೆ ವೇಳೆ ಹೊರಗಡೆ ಕರೆದುಕೊಂಡು ಹೋದರೆ ಆನೆಗಳಿಗೆ ದೃಷ್ಟಿ ತಾಗುತ್ತದೆ ಹಾಗೂ ಆನೆಗಳ ವರ್ತನೆಯೂ ಬದಲಾಗುತ್ತದೆಯೆಂಬ ಕಾರಣದಿಂದ ವಿಶ್ರಾಂತಿ ನೀಡಲಾಗುತ್ತಿದೆ.