ಮೈಸೂರು: ಸರಳ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಆನೆಗಳು ಆರೋಗ್ಯದಿಂದ ಇವೆ. ಯಾವುದೇ ತೊಂದರೆ ಇಲ್ಲ ಎಂದು ಡಿಸಿಎಫ್ ಅಲೆಕ್ಸಾಂಡರ್ ಹೇಳಿದ್ದಾರೆ.
ಅರಮನೆಯಲ್ಲಿ ಮರದ ಅಂಬಾರಿ ತಾಲೀಮಿನ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇವತ್ತು ಮರದ ಅಂಬಾರಿ ತಾಲೀಮು ನಡೆಸಿದ್ದೇವೆ. ನಗರ ಪೊಲೀಸ್ ಕಮಿಷನರ್ ನೇತೃತ್ವದಲ್ಲಿ ಸೋಮವಾರ ಸಿಎಂ ಯಡಿಯೂರಪ್ಪ ಚಾಮುಂಡಿ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂಸವಾರಿಗೆ ಚಾಲನೆ ನೀಡಲಿದ್ದಾರೆ.
ಇಲ್ಲಿಯವರೆಗೆ ಯಾವುದೇ ನ್ಯೂನತೆ ಇಲ್ಲದೆ ಎಲ್ಲ ಕಾರ್ಯಕ್ರಮಗಳೂ ಸರಾಗವಾಗಿ ನಡೆದಿವೆ. ತಾಯಿ ಚಾಮುಂಡೇಶ್ವರಿ ಆಶೀರ್ವಾದದಿಂದ ಕೆಲಸಗಳು ಚೆನ್ನಾಗಿ ನಡೆಯುತ್ತಿದ್ದು, ಇವತ್ತು 500 ಕೆ.ಜಿ ತೂಕ ಹಾಕದೇ ಜಂಬೂಸವಾರಿ ನಡೆಸಿದ್ದೇವೆ ಎಂದರು.