ಮೈಸೂರು: ರೈಲ್ವೆ ಕಂಬಿಗೆ ಸಿಲುಕಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಕಾಡಾನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.
![Elephant stranded on a railway bar](https://etvbharatimages.akamaized.net/etvbharat/prod-images/kn-mys-04-elephant-save-vis-ka10003_21012021215029_2101f_1611246029_906.jpg)
ಸರಗೂರು ತಾಲೂಕಿನ ಎನ್. ಬೇಗೂರು ಅರಣ್ಯ ವ್ಯಾಪ್ತಿಯಲ್ಲಿ ಗಂಡಾನೆಯೊಂದು ಕಾಡಿನಿಂದ ಹೊರ ಬಂದು ಮರಳಿ ಕಾಡಿನತ್ತ ತೆರಳುವ ಸಂದರ್ಭದಲ್ಲಿ ರೈಲ್ವೆ ಕಂಬಿಯ ಅಡಿಯಲ್ಲಿ ಸಿಲುಕಿಕೊಂಡಿದೆ. ಕೂಡಲೇ ಆನೆ ಸಿಲುಕಿದ ವಿಷಯ ತಿಳಿದ ಎನ್. ಬೇಗೂರು ವ್ಯಾಪ್ತಿಯ ಅರಣ್ಯ ಇಲಾಖೆಯ ಸಿಬ್ಬಂದಿ, ಸ್ಥಳಕ್ಕೆ ಆಗಮಿಸಿ ಬಿರುಸಿನ ಕಾರ್ಯಾಚರಣೆ ಮಾಡಿ ರೈಲ್ವೆ ಕಂಬಿಯನ್ನು ಕಿತ್ತುಹಾಕಿ ಆನೆಯನ್ನು ರಕ್ಷಣೆ ಮಾಡಿದ್ದಾರೆ.
ಓದಿ:ಚಾಮುಂಡಿ ಬೆಟ್ಟದಲ್ಲಿ ಅಪರೂಪದ ಪುನುಗು ಬೆಕ್ಕು ರಕ್ಷಣೆ: ವಿಡಿಯೋ
ಅರಣ್ಯ ಇಲಾಖೆಯ ಸಮಯ ಪ್ರಜ್ಞೆಗೆ ಪರಿಸರ ಪ್ರೇಮಿಗಳು ಹಾಗೂ ವನ್ಯಜೀವಿ ಪ್ರಿಯರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.