ಮೈಸೂರು: ಕಾಡಾನೆಗಳು ನಾಡಿಗೆ ಬರದಂತೆ ತಡೆಯಲು ರೈಲ್ವೆ ಬ್ಯಾರಿಕೇಡ್ ಹಾಕಲಾಗಿರುತ್ತದೆ. ಆದರೆ, ಇಂತಹ ರೈಲ್ವೆ ಬ್ಯಾರಿಕೇಡ್ ಅನ್ನು ಕಾಡಾನೆಗಳು ಮನುಷ್ಯರಂತೆ ಸರಾಗವಾಗಿ ದಾಟುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ರೀತಿ ದೃಶ್ಯಗಳು ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕಾಡಂಚಿನ ಗ್ರಾಮ, ಬಂಡಿಪುರ ರಾಷ್ಟ್ರೀಯ ಉದ್ಯಾನ ಹಾಗೂ ಕೊಡಗಿನ ಪ್ರದೇಶಗಳಲ್ಲಿ ಸಾಮಾನ್ಯವಾಗಿದೆ.
ಕಾಡಾನೆಗಳ ಹಾವಳಿಯನ್ನು ತಡೆಯಲು ಅರಣ್ಯ ಇಲಾಖೆ ಕಾಡಂಚಿನ ಪಕ್ಕದಲ್ಲಿ ಆನೆ ಕಂದಕಗಳನ್ನು ನಿರ್ಮಿಸಿ ಕಂದಕದ ಪಕ್ಕ ರೈಲ್ವೆ ಬ್ಯಾರಿಕೇಡ್ಗಳನ್ನು ಹಾಕುವ ಮೂಲಕ ನಾಡಿಗೆ ಬಾರದಂತೆ ತಡೆಗೊಡೆ ಹಾಕಿದ್ದಾರೆ.
ಆದರೆ, ಬುದ್ದಿವಂತ ಕಾಡಾನೆಗಳು ಮನುಷ್ಯರಿಗಿಂತ ನಾವೇನೂ ಕಡಿಮೆ ಇಲ್ಲವೆಂಬಂತೆ ರೈಲ್ವೆ ಬ್ಯಾರಿಕೇಡ್ ಗಳನ್ನು ಚಾಣಾಕ್ಷತನದಿಂದ ದಾಟಿ ನಾಡಿಗೆ ಬಂದು ಬೆಳೆಗಳನ್ನು ತಿಂದು ಮರಳಿ ಕಾಡಿಗೆ ಹೋಗುತ್ತಿವೆ. ಕುಶಾಲನಗರ ಸಮೀಪದ ಗ್ರಾಮಗಳಲ್ಲಿ ಈ ದೃಶ್ಯ ಕಂಡು ಬಂದಿದ್ದು, ಸ್ಥಳೀಯರು ತಮ್ಮ ಮೊಬೈಲ್ನಲ್ಲಿ ಈ ದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ.
ಓದಿ: ಆಮ್ಲಜನಕ ಸ್ವಾವಲಂಬನೆಗಾಗಿ ನೂತನ ಕೈಗಾರಿಕಾ ಉತ್ತೇಜನ ನೀತಿ; ಶೆಟ್ಟರ್