ಮೈಸೂರು: ಮೈಸೂರು ಸಂಸ್ಥಾನದ ಮಹಾರಾಜ ಜಯಚಾಮರಾಜ ಒಡೆಯರ್ ಅವರ ಜನ್ಮ ಶತಮಾನೋತ್ಸವ ಸಮಾರಂಭಕ್ಕೆ ದರ್ಬಾರ್ ಹಾಲ್ನಲ್ಲಿ ಅದ್ಧೂರಿ ಚಾಲನೆ ನೀಡಲಾಯಿತು.
ಮೈಸೂರು ಸಂಸ್ಥಾನದ ಆಧುನಿಕ ನಿರ್ಮಾತೃ ಶ್ರೀ ಜಯಚಾಮರಾಜ ಒಡೆಯರ್ ಅವರ ಜನ್ಮ ಶತಮಾನೋತ್ಸವಕ್ಕೆ ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲ ಗೋಪಾಲಕೃಷ್ಣ ಗಾಂಧಿ ಚಾಲನೆ ನೀಡಿದ್ರು.
ಈ ಜನ್ಮ ಶತಮಾನೋತ್ಸವ ವರ್ಷ ಪೂರ್ತಿ ತಿಂಗಳಿಗೊಂದು ಕಾರ್ಯಕ್ರಮ ನಡೆಸಲಾಗುವುದು. ಈ ಕಾರ್ಯಕ್ರಮದಲ್ಲಿ ರಾಜಮಾತೆ ಪ್ರಮೋದಾದೇವಿ ಅವರು ಜಯಚಾಮರಾಜ ಒಡೆಯರ್ ಅವರ ಸಾಧನೆಯ ಪ್ರಮುಖ ವಿಚಾರಗಳನ್ನು ಪ್ರಸ್ತಾಪಿಸಿದಾಗ ಭಾವುಕರಾದರು.
ನಂತರ ಪ್ರಮುಖ ಅತಿಥಿಗಳಾದ ಗೋಪಾಲಕೃಷ್ಣ ಗಾಂಧಿ ಅಂದಿ ಮಹಾರಾಜರ ಸಾಧನೆಗಳು ಅವರ ದೂರದೃಷ್ಠಿ ಹಾಗೂ ದೇಶಕ್ಕೆ ಜಯಚಾಮರಾಜ ಒಡೆಯರ್ ಅವರ ಕೊಡುಗೆ ಅಪಾರ ಎಂದು ಬಣ್ಣಿಸಿದರು.
ಈ ಕಾರ್ಯಕ್ರಮಕ್ಕೆ ರಾಜಸ್ಥಾನ, ಗುಜರಾತ್, ಮುಂಬೈ, ದೆಹಲಿ ಸೇರಿದಂತೆ ಹಲವು ರಾಜಮನೆತನಗಳ ಪ್ರಮುಖರು ಈ ಅಪರೂಪದ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಈ ಸಮಾರಂಭದಲ್ಲಿ ಯದುವೀರ್ ದಂಪತಿ ತಮ್ಮ ಪುತ್ರನೊಂದಿಗೆ ರಾಜಮನೆತನಗಳ ಪ್ರಮುಖ ಸಾಲಿನಲ್ಲಿ ಕುಳಿತಿದ್ದು ಆಕರ್ಷಣೆಯ ಕೇಂದ್ರಬಿಂದುವಾಗಿತ್ತು. ಈ ಜನ್ಮ ಶತಮಾನೋತ್ಸವ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಜಯಚಾಮರಾಜ ಒಡೆಯರ್ ಅವರ ಪ್ರಶಸ್ತಿಯನ್ನು ನೀಡಲಾಯಿತು.
ಅದರಲ್ಲಿ ಪ್ರಮುಖವಾಗಿ ಸಮಾಜ ಸೇವಾ ಕ್ಷೇತ್ರದಲ್ಲಿ ಸುಧಾಮೂರ್ತಿ, ನಟನಾ ಕ್ಷೇತ್ರದಲ್ಲಿ ಬಿ.ಸರೋಜಾದೇವಿ ಸೇರಿದಂತೆ 9 ಜನರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.