ETV Bharat / state

ವಿಷ್ಣು ಅಭಿಮಾನಿಗಳಿಗೆ ಗುಡ್ ನ್ಯೂಸ್.. ಸಂಜೆ ಅವಧಿಯಲ್ಲೂ ಸ್ಮಾರಕ ವೀಕ್ಷಣೆಗೆ ಅವಕಾಶ - ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ

ಡಾ ವಿಷ್ಣುವರ್ಧನ್ ಸ್ಮಾರಕದಲ್ಲಿ ಬೆಳಗ್ಗೆ 9 ರಿಂದ ಸಂಜೆ 5ರವರೆಗೆ ಸಾರ್ವಜನಿಕರಿಗೆ ವೀಕ್ಷಣೆಗೆ ಅವಕಾಶ.

ಡಾ ವಿಷ್ಣುವರ್ಧನ್ ಸ್ಮಾರಕ
ಡಾ ವಿಷ್ಣುವರ್ಧನ್ ಸ್ಮಾರಕ
author img

By

Published : Jan 31, 2023, 9:24 PM IST

ಮೈಸೂರು : ಮೈಸೂರು ತಾಲೂಕಿನ ಹೆಚ್ ಡಿ ಕೋಟೆ ರಸ್ತೆ, ಹಾಲಾಳು ಗ್ರಾಮದಲ್ಲಿ ನಿರ್ಮಾಣವಾಗಿರುವ ಡಾ ವಿಷ್ಣುವರ್ಧನ್ ಸ್ಮಾರಕ ಸಾರ್ವಜನಿಕ ವೀಕ್ಷಣೆಗೆ ಪ್ರತಿದಿನ (ಸಾರ್ವಜನಿಕ ರಜೆ ಸೇರಿದಂತೆ) ಬೆಳಗ್ಗೆ 9 ರಿಂದ ಸಂಜೆ 5ರವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಡಾ ವಿಷ್ಣುವರ್ಧನ್​ ಸ್ಮಾರಕ ಪ್ರತಿಷ್ಠಾನದ ಪ್ರಕಟಣೆಯಲ್ಲಿ ತಿಳಿಸಿದೆ. ಜನವರಿ 29 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉದ್ಘಾಟನೆಯ ಸಂಜೆ ವೇಳೆಯಲ್ಲಿ ಡಾ. ವಿಷ್ಣುಸ್ಮಾರಕ ನೋಡಲು ಹಾಗೂ ರಾತ್ರಿ ವೇಳೆಯಲ್ಲಿ ವಿದ್ಯುತ್ ದೀಪದ ವ್ಯವಸ್ಥೆ ಮಾಡದೇ ಇದ್ದುದರಿಂದ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿ, ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದರು.

ದೂರದ ಊರುಗಳಿಂದ ಡಾ. ವಿಷ್ಣು ಸ್ಮಾರಕ ನೋಡಲು ಬರುವ ಅಭಿಮಾನಿಗಳಿಗೆ, ಜಿಲ್ಲಾಡಳಿತ ಸರಿಯಾದ ವ್ಯವಸ್ಥೆ ಮಾಡಿಕೊಡಬೇಕು ಎಂದು ಒತ್ತಾಯ ಮಾಡಿದ ಹಿನ್ನೆಲೆ ಡಾ ವಿಷ್ಣುವರ್ಧನ ಸ್ಮಾರಕ ಪ್ರತಿಷ್ಠಾನ ಈ ನಿರ್ಧಾರ ಕೈಗೊಂಡಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ : ಋಷಿಕೇಶಕ್ಕೆ ತೆರಳಿದ 'ವಿರುಷ್ಕಾ' ದಂಪತಿ: ಸ್ವಾಮಿ ದಯಾನಂದ ಗಿರಿ ಆಶ್ರಮಕ್ಕೆ ಭೇಟಿ, ಪೂಜೆ

ಸ್ಮಾರಕದಲ್ಲಿ ನೋಡಲು ಏನಿದೆ : 70ರ ದಶಕದಲ್ಲಿ ನಾಗರಹಾವು ಚಿತ್ರದ ಅದ್ಭುತ ಯಶಸ್ಸಿನ ಮೂಲಕ ರಾಷ್ಟ್ರ ಮಟ್ಟದಲ್ಲಿ ಬಹು ದೊಡ್ಡ ಕ್ರಾಂತಿ ಹಾಗೂ ಸಂಚಲನವನ್ನು ಸೃಷ್ಟಿ ಮಾಡಿದ, ಸುಮಾರು ನಾಲ್ಕು ದಶಕಗಳ ಕಾಲ ನಿರಂತರವಾಗಿ 200ಕ್ಕೂ ಹೆಚ್ಚು ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯ ಚಿತ್ರಗಳಲ್ಲಿ ನಟಿಸುವ ಮೂಲಕ, ಭಾರತೀಯ ಚಿತ್ರರಂಗದಲ್ಲಿ ಮಿಂಚಿದ ಡಾ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಮಾಡಲು ಪತ್ನಿ ಭಾರತಿ ವಿಷ್ಣುವರ್ಧನ್ ಹಾಗೂ ಕುಟುಂಬಸ್ಥರು ನಿರಂತರವಾಗಿ 13 ವರ್ಷದ ಹೋರಾಟದ ಫಲವಾಗಿ ಸುಂದರವಾದ ಸ್ಮಾರಕ ನಿರ್ಮಾಣವಾಗಿದೆ. ಹೆಚ್. ಡಿ ಕೋಟೆ ರಸ್ತೆ, ಉದ್ದೂರು ಕ್ರಾಸ್, ಹಾಲಾಳು ಗ್ರಾಮ, ಮೈಸೂರು ತಾಲೂಕು, ಮೈಸೂರು ಜಿಲ್ಲೆಯಲ್ಲಿ 5 ಎಕರೆ ಜಾಗವನ್ನು ನಿಗದಿಪಡಿಸಿ 11 ಕೋಟಿ ರೂ. ವೆಚ್ಚದಲ್ಲಿ ಸ್ಮಾರಕ ನಿರ್ಮಾಣ ಮಾಡಲಾಗಿದೆ.

ಡಾ ವಿಷ್ಣುವರ್ಧನ್ ಸ್ಮಾರಕ
ಡಾ ವಿಷ್ಣುವರ್ಧನ್ ಸ್ಮಾರಕ

ಇದನ್ನೂ ಓದಿ : ಇತಿಹಾಸ ಪ್ರಸಿದ್ಧ ಪುತ್ತೂರು ಕಂಬಳದಲ್ಲಿ ನಟಿ ಸಾನ್ಯಾ ಅಯ್ಯರ್​ಗೆ​​ ಕಿರುಕುಳ: ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಸ್ಪಷ್ಟನೆ

ಸ್ಮಾರಕ ನಿರ್ಮಾಣದ ಕಾಮಗಾರಿ ಪೂರ್ಣಗೊಳಿಸಿದೆ : ಕರ್ನಾಟಕ ರಾಜ್ಯ ಡಾ ವಿಷ್ಣುವರ್ಧನ್ ಪ್ರತಿಷ್ಠಾನ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಅವರು ಪೊಲೀಸ್​ ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ನಿಗಮದವರ ಮೂಲಕ ಸ್ಮಾರಕ ನಿರ್ಮಾಣದ ಕಾಮಗಾರಿಯನ್ನು ಪೂರ್ಣಗೊಳಿಸಿದೆ.

ಇದನ್ನೂ ಓದಿ : ಮತ್ತೆ ಕಾಫಿಡೇ ಅಲ್ಲಿ ಕೆಲಸ ಆರಂಭಿಸಿ, ಗ್ರಾಹಕರನ್ನು ಖುಷಿ ಪಡಿಸುತ್ತೇನೆ: ಆಸ್ಕರ್​ ನಾಮ ನಿರ್ದೇಶಿತ ನಟ

ಡಾ. ವಿಷ್ಣುವರ್ಧನ್ ಸ್ಮಾರಕ ಭವನವು ಅವರು ನಟಿಸಿರುವ ಚಲನಚಿತ್ರ ಹಾಗೂ ಅವರ ಜೀವನ ಚರಿತ್ರೆಯ ಸುಮಾರು 676 ಛಾಯಾಚಿತ್ರಗಳನ್ನು ಒಳಗೊಂಡ ಒಂದು ಬೃಹತ್ ಫೋಟೋ ಗ್ಯಾಲರಿ, ಸೆಲ್ಫಿ ಸ್ಟ್ಯಾಚು, ಡಾ. ವಿಷ್ಣುವರ್ಧನ್ ಅವರ ಪ್ರತಿಮೆ, 250 ಆಸನಗಳುಳ್ಳ ಥಿಯೇಟರ್, ನಾಟಕಗಳ ಮೇಕಪ್ ವೇದಿಕೆ, ಕಚೇರಿ, ಕ್ಯಾಂಟೀನ್, ಶೌಚಾಲಯಗಳನ್ನೊಳಗೊಂಡ ಹೊರಾಂಗಣ ಉದ್ಯಾನವನಗಳನ್ನು ಒಳಗೊಂಡಿದೆ.

ಇದನ್ನೂ ಓದಿ : ಕಿಚ್ಚ ಸುದೀಪ್ ಸಿನಿ ಪಯಣಕ್ಕೆ 27 ವಸಂತ..ಪ್ಯಾನ್​ ಇಂಡಿಯಾ ಸ್ಟಾರ್​ ಜರ್ನಿ ಇಲ್ಲಿದೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.