ETV Bharat / state

ಸಿಎಂ ಬೊಮ್ಮಾಯಿ ಮಾತನಾಡುವ ಬಸವಣ್ಣನಲ್ಲ, ಕೆಲಸ ಮಾಡುವ ಬಸವಣ್ಣ.. ಪ್ರತಾಪ್ ಸಿಂಹ

author img

By

Published : Apr 8, 2022, 12:52 PM IST

ಬಸವರಾಜ ಬೊಮ್ಮಯಿ ಅವರು ಮೈಸೂರು ಏರ್ಪೋರ್ಟ್ ವಿಸ್ತರಣೆಗೆ ಅನುದಾನ, ಕೆ.ಆರ್ ಆಸ್ಪತ್ರೆಗೆ ಅನುದಾನ, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡಬೇಕು ಎಂಬ ಕಾರಣಕ್ಕಾಗಿ ಅಭಿವೃದ್ಧಿ ಪರ ಕೆಲಸ ಮಾಡುತ್ತಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು..

ಪ್ರತಾಪ್ ಸಿಂಹ
ಪ್ರತಾಪ್ ಸಿಂಹ

ಮೈಸೂರು : ಕೋಡಿ ಮಠದ ಸ್ವಾಮೀಜಿ, ಹೆಚ್. ಡಿ.‌ ಕುಮಾರಸ್ವಾಮಿ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಯನ್ನ ಯಾರೂ ಗಂಭೀರವಾಗಿ ಪರಿಗಣಿಸಬೇಡಿ. ಅವರ ಹೇಳಿಕೆಗಳಲ್ಲಿ ಯಾವುದೇ ನಿಖರತೆ ಹಾಗೂ ಸ್ಪಷ್ಟತೆ ಇರುವುದಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು. ನಗರದ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು,‌ ಈ ಮೂವರ ಹೇಳಿಕೆ ಅಸ್ಪಷ್ಟವಾಗಿರುತ್ತವೆ. ಆದ್ದರಿಂದ ಜನರು ಕೂಡ ಇವರ ಹೇಳಿಕೆಯನ್ನ ಗಂಭೀರವಾಗಿ ಪರಿಗಣಿಸಬಾರದು ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.

ಮಾಧ್ಯಮಗಳ ಜೊತೆ ಸಂಸದ ಪ್ರತಾಪ್ ಸಿಂಹ ಮಾತನಾಡಿರುವುದು..

ಸಿಎಂ ದುಡಿಯುವ ಬಸವಣ್ಣ: ಸಿಎಂ ಬಸವರಾಜ ಬೊಮ್ಮಾಯಿ ಅವರು ಮೌನ ಮುರಿಯಬೇಕು ಎಂಬ ಪ್ರತಿಪಕ್ಷಗಳ ಟೀಕೆಗೆ ಉತ್ತರಿಸಿದ ಸಂಸದ ಪ್ರತಾಪ್ ಸಿಂಹ, ಬಸವರಾಜ ಬೊಮ್ಮಾಯಿ ಅವರು ಮಾತನಾಡುವ ಬಸವಣ್ಣನಲ್ಲ, ದುಡಿಯುವ ಬಸವಣ್ಣ. ಮೈಸೂರು ಏರ್ಪೋರ್ಟ್ ವಿಸ್ತರಣೆಗೆ ಅನುದಾನ, ಕೆ.ಆರ್ ಆಸ್ಪತ್ರೆಗೆ ಅನುದಾನ, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡಬೇಕು ಎಂಬ ಕಾರಣಕ್ಕಾಗಿ ಅಭಿವೃದ್ಧಿ ಪರ ಕೆಲಸ ಮಾಡುತ್ತಿದ್ದಾರೆ. ಸಿಎಂ ಬೊಮ್ಮಾಯಿ ಅವರು ದುಡಿಮೆಯೇ ತನ್ನ ಪರವಾಗಿ ಮಾತನಾಡುವ ಹಾಗೆ ಕೆಲಸ ಮಾಡುವ ಬಸವಣ್ಣ. ಪ್ರತಿ ನಿತ್ಯ ಕರ್ಕಶ ಧ್ವನಿಯಲ್ಲಿ ಕಾ ಕಾ ಎಂದು ಕೂಗುವವರಿಗೆ ಇದು ಅರ್ಥವಾಗುವುದಿಲ್ಲ ಎಂದು ಪ್ರತಿಪಕ್ಷಗಳಿಗೆ ಟಾಂಗ್ ನೀಡಿದರು.

ಹಿಜಾಬ್ ಸಮಸ್ಯೆ ಸೃಷ್ಟಿಸಿದ್ದೇ ಪ್ರತಿಪಕ್ಷಗಳು : ಹಿಜಾಬ್ ವಿಚಾರದಲ್ಲಿ ಪ್ರತಿಪಕ್ಷಗಳು ಯಾಕೆ ಆ ಸಮುದಾಯಕ್ಕೆ ಬುದ್ದಿ ಹೇಳಲಿಲ್ಲ. ಪ್ರತಿಪಕ್ಷ ಸಮವಸ್ತ್ರ ಎಲ್ಲರಿಗೂ ಕಡ್ಡಾಯ ಎಂದು ಹೇಳಿದ್ದರೆ ಈ ಸಮಸ್ಯೆಯೇ ಉದ್ಭವವಾಗುತ್ತಿರಲಿಲ್ಲ. ಅವರಿಗೆ ಇಲ್ಲಸಲ್ಲದ ಕಾನೂನಿನ ಕತೆ ಹೇಳಿಕೊಟ್ಟು ಗೊಂದಲ ಸೃಷ್ಟಿಗೆ ಕಾರಣರಾದರು.‌

ಆವತ್ತು ಗೊಂದಲ ಸೃಷ್ಟಿಸಿದವರು ಇವತ್ತು ಸರ್ವಜನಾಂಗದ ಸಾಮರಸ್ಯದ ಸಭೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯ, ಕುಮಾರಸ್ವಾಮಿಗೆ ಈ ವಿಚಾರದಲ್ಲೂ ಸ್ಪಷ್ಟತೆ ಇಲ್ಲ.‌ ಬಿಜೆಪಿ ವಿವಾದಗಳನ್ನ ಎಬ್ಬಿಸಿ ಹಿಂದೂಗಳ ಮತ ಪಡೆಯುವಂತೆ ಮಾಡುವ ಅವಶ್ಯಕತೆ ಇಲ್ಲ. ಹಿಂದೂ ಮತ್ತು ಮುಸ್ಲಿಂ ಮತ ವಿಭಜನೆ ಮತ್ತು ಕ್ರೋಢೀಕರಣ ಶುರು ಮಾಡಿದ್ದು ವಿಪಕ್ಷಗಳೇ ಹೊರತು ಬಿಜೆಪಿಯಲ್ಲ ಎಂದರು.

ಇದನ್ನೂ ಓದಿ: ಆವಾಸ್ ಯೋಜನೆಯಡಿಯಲ್ಲಿ ಮೂರು ಕೋಟಿ ಮನೆಗಳ ನಿರ್ಮಾಣ : ಪ್ರಧಾನಿ ಮೋದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.