ETV Bharat / state

ಸಾರ್ವಜನಿಕರು ಅನಾವಶ್ಯಕವಾಗಿ ಸರ್ಕಾರಿ ಕಚೇರಿಗೆ ಬರಬೇಡಿ.. ಡಿಸಿ ಅಭಿರಾಮ್ ಜಿ.ಶಂಕರ್ - Abhiram G. Shankar Latest News

ಬೆಂಗಳೂರಿನಿಂದ ಮೈಸೂರಿಗೆ 1 ನಿಮಿಷಕ್ಕೆ 100ಕ್ಕೂ ಹೆಚ್ಚು ವಾಹನಗಳು ಬರುತ್ತಿವೆ. ಪ್ರತಿ ವಾಹನದ ವ್ಯಕ್ತಿಗಳನ್ನು ಸ್ಕ್ರೀನಿಂಗ್ ಮತ್ತು ಟೆಸ್ಟ್ ಮಾಡುವುದು ಸಾಧ್ಯವಾಗದ ವಿಚಾರ. ಸಾವಿರಾರು ಜನ ಬೆಂಗಳೂರಿನಿಂದ ಮೈಸೂರಿಗೆ ಹೋಗಿ ಬರುತ್ತಿದ್ದಾರೆ..

DC Abhiram G. Shankar
ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್
author img

By

Published : Jul 6, 2020, 2:40 PM IST

ಮೈಸೂರು : ಕೊರೊನಾ ಪಾಸಿಟಿವ್ ಸಂಖ್ಯೆ ಜಾಸ್ತಿಯಾಗುತ್ತಿರೋ ಹಿನ್ನೆಲೆ ಅನಾವಶ್ಯಕವಾಗಿ ಸರ್ಕಾರಿ ಕಚೇರಿಗಳಿಗೆ ಬರಬೇಡಿ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಸಾರ್ವಜನಿಕರು ಅನಾವಶ್ಯಕವಾಗಿ ಸರ್ಕಾರಿ ಕಚೇರಿಗೆ ಬರಬೇಡಿ.. ಡಿಸಿ ಅಭಿರಾಮ್ ಜಿ.ಶಂಕರ್

ಬಾಬು ಜಗಜೀವನನ ರಾಮ್ ಅವರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ನಮ್ಮ ಜಿಲ್ಲೆ ಹಾಗೂ ಇತರ ಜಿಲ್ಲೆಗಳಲ್ಲೂ ಹೆಚ್ಚಾಗುತ್ತಿವೆ. ಸಾವಿನ ಸಂಖ್ಯೆಯೂ ಸಹ ಹೆಚ್ಚಾಗುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ. ಈಗ ಗಡಿಯನ್ನು ಬಂದ್ ಮಾಡಬೇಕು ಎಂಬ ಮಾತು ಕೇಳಿ ಬರುತ್ತಿದೆ. ಅದು ಸಾಧ್ಯವಿಲ್ಲ. ಬೆಂಗಳೂರಿನಿಂದ ಮೈಸೂರಿಗೆ 1 ನಿಮಿಷಕ್ಕೆ 100ಕ್ಕೂ ಹೆಚ್ಚು ವಾಹನಗಳು ಬರುತ್ತಿವೆ. ಪ್ರತಿ ವಾಹನದ ವ್ಯಕ್ತಿಗಳನ್ನು ಸ್ಕ್ರೀನಿಂಗ್ ಮತ್ತು ಟೆಸ್ಟ್ ಮಾಡುವುದು ಸಾಧ್ಯವಾಗದ ವಿಚಾರ. ಇದರ ಜೊತೆಗೆ ಸಾವಿರಾರು ಜನ ಬೆಂಗಳೂರಿನಿಂದ ಮೈಸೂರಿಗೆ ಹೋಗಿ ಬರುತ್ತಿದ್ದಾರೆ. ಇವೆಲ್ಲಾ ನಮಗೆ ನಿಯಂತ್ರಣಕ್ಕೆ ಸಿಗುತ್ತಿಲ್ಲ.

ಇತ್ತ ಮಹಾನಗರ ಪಾಲಿಕೆ ಅಧಿಕಾರಿಗಳು ಹಗಲು-ರಾತ್ರಿ ಕೆಲಸ ಮಾಡುತ್ತಿದ್ದಾರೆ. ಗಡಿ ಬಂದ್ ಮಾಡಲು ಕಷ್ಟ. ಕಂದಾಯ ಕಚೇರಿಯನ್ನು ಮುಚ್ಚಲು ಸಾಧ್ಯವಿಲ್ಲ. ಯಾಕೆಂದರೆ, ಈಗಾಗಲೇ ಕೃಷಿ ಚಟುವಟಿಕೆಗಳು ಪ್ರಾರಂಭವಾಗಿವೆ. ಪೊಲೀಸ್​ ಅಧಿಕಾರಿಗಳಿಗೆ ಎಲ್ಲಾ ಕಡೆ ಪಾಸಿಟಿವ್ ಬರುತ್ತಿವೆ. ಅದಕ್ಕೆ ಒಂದು ಪತ್ರಿಕಾ ಪ್ರಕಟಣೆ ಹೊರಡಿಸಿದ್ದೇವೆ. ಸಾರ್ವಜನಿಕರು ಅನಗತ್ಯ ಸರ್ಕಾರಿ ಕಚೇರಿಗೆ ಬರಬೇಡಿ. ಅವರಿಗೂ ಕುಟುಂಬ ಇದೆ. ಇದನ್ನು ಗಮನಿಸಿ, ಸಾರ್ವಜನಿಕರು ಜವಾಬ್ದಾರಿ ಅರಿತು ವರ್ತಿಸಬೇಕೆಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.