ಮೈಸೂರು: ಸಾಮಾಜಿಕ ಜಾಲತಾಣಗಳಲ್ಲಿ ಬರುವ ಮಾಹಿತಿಯನ್ನು ನಂಬಿ, ಮನೆಯಲ್ಲಿ ಸ್ವಯಂ ಚಿಕಿತ್ಸೆ ಮಾಡಿಕೊಳ್ಳಬೇಡಿ. ಡಾಕ್ಟರ್ಗಳ ಸಲಹೆ ಪಡೆಯಿರಿ ಎಂದು ಕೋವಿಡ್ ಸ್ವಯಂ ಚಿಕಿತ್ಸೆ ಬಗ್ಗೆ ಡಾಕ್ಟರ್ ಅಯ್ಯಪ್ಪ ಎಚ್ಚರಿಕೆ ನೀಡಿದ್ದಾರೆ.
ಕೋವಿಡ್ ಭಯ ಈಗ ರೋಗಕ್ಕಿಂತ ಹೆಚ್ಚಾಗಿದ್ದು. ಇಂತಹ ಸಂದರ್ಭದಲ್ಲಿ ಕೊರೊನಾ ಸೋಂಕಿನ ಬಗ್ಗೆ ಯಾವ ರೀತಿ ಎಚ್ಚರಿಕೆ ವಹಿಸಬೇಕು ಎಂಬ ಬಗ್ಗೆ ಮಾಹಿತಿಯನ್ನು ಕೋವಿಡ್ ಕೇರ್ ಸೆಂಟರ್ನ ಡಾ. ಅಯ್ಯಪ್ಪ ಈ ಟಿವಿ ಭಾರತದ ಜೊತೆ ಹಂಚಿ ಕೊಂಡಿದ್ದಾರೆ.
ಕೋವಿಡ್ನ ಎರಡನೇ ಅಲೆಯಲ್ಲಿ ಹೆಚ್ಚಿನ ಜನಕ್ಕೆ ಸೋಂಕು ಹರಡುತ್ತಿದ್ದು, ಎಲ್ಲಾ ವಯಸ್ಸಿನ ಜನರಿಗೂ ಸೋಂಕು ಹರಡುತ್ತಿದೆ. ಇದರ ಜೊತೆಗೆ ಮರಣದ ಸಂಖ್ಯೆಯು ಸಹ ಹೆಚ್ಚಾಗುತ್ತಿದೆ. ಇದಕ್ಕೆ ಕಾರಣವೆಂದರೆ ಸೋಂಕು ಕಂಡ ತಕ್ಷಣ ಮನೆಯಲ್ಲೇ ಸ್ವಯಂ ಚಿಕಿತ್ಸೆ ಪಡೆದುಕೊಂಡು ಶೀತ, ಕೆಮ್ಮು,ನೆಗಡಿ, ಮೈ- ಕೈ, ನೋವು ಕಾಣಿಸಿಕೊಂಡ 8 ದಿನಗಳ ನಂತರ ಆಸ್ಪತ್ರೆಗೆ ಬರುವುದು.
ಇದು ಸಾವಿಗೆ ಕಾರಣವಾಗುತ್ತಿದೆ. ಮೊದಲು ಕೋವಿಡ್ ಲಕ್ಷಣ ಕಾಣಿಸಿಕೊಂಡ ತಕ್ಷಣ ಪರೀಕ್ಷೆ ಮಾಡಿಸಿಕೊಳ್ಳಬೇಕು. ಪರೀಕ್ಷೆ ವರದಿಯಲ್ಲಿ ಪಾಸಿಟಿವ್ ಬಂದರೆ ವೈದ್ಯರ ಸಲಹೆ ಮೇರೆಗೆ ಆಸ್ಪತ್ರೆಗೆ ದಾಖಲಾಗಬೇಕು ಅಥವಾ ಮನೆಯಲ್ಲಿ ಯಾವ ರೀತಿ ಚಿಕಿತ್ಸೆ ಪಡಯಬೇಕು ಎಂಬ ಸಲಹೆ ಪಡೆಯಬೇಕು. ಅದನ್ನು ಬಿಟ್ಟು ಸೋಷಿಯಲ್ ಮೀಡಿಯಾದಲ್ಲಿ ಬರುವ ಮಾಹಿತಿಗಳನ್ನು ಅನುಸರಿಸಿ ಸ್ವಯಂ ಚಿಕಿತ್ಸೆ ಪಡೆಯಬಾರದು. ಇದ್ದರಿಂದ ಅಪಾಯ ಹೆಚ್ಚು ಎಂದು ಅವರು ತಿಳಿಸಿದ್ದಾರೆ.