ಮೈಸೂರು: ರಾಜ್ಯದಲ್ಲಿ ಜನತೆ ಕಷ್ಟದಲ್ಲಿದ್ದಾರೆ, ಜೂನ್ 7ರ ನಂತರ ಲಾಕ್ಡೌನ್ ವಿಸ್ತರಣೆ ಮಾಡುವುದು ಬೇಡ ಎಂದು ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ್ರು. ಲಕ್ಷಾಂತರ ಜನ ದಿನಗೂಲಿ ಜನರಿದ್ದು, ಅವತ್ತಿನ ದುಡಿಮೆಯಿಂದಲೇ ಊಟ ಮಾಡುತ್ತಿದ್ದಾರೆ. ಮತ್ತೆ ಲಾಕ್ಡೌನ್ ಮುಂದುವರಿಸಿದರೆ ಕಷ್ಟವಾಗಲಿದೆ. ಸಿಎಂ ಬಿಎಸ್ವೈಗೂ ಲಾಕ್ಡೌನ್ ವಿಸ್ತರಣೆ ಮಾಡದಂತೆ ಹೇಳುವೆ. ರಾಜ್ಯದಲ್ಲಿ ಕೊರೊನಾ ಸೋಂಕಿತರ ಹಾಗೂ ಸಾವಿನ ಸಂಖ್ಯೆ ಕಡಿಮೆಯಾಗುತ್ತಿದೆ. ಜೂನ್ 7 ಇನ್ನೂ ಎರಡು ದಿನ ಇರುವಾಗ ಯಾವ ತೀರ್ಮಾನ ಕೈಗೊಳ್ಳುತ್ತಾರೆ ನೋಡೋಣ ಎಂದು ತಿಳಿಸಿದರು.
11 ವಿಧಾನ ಸಭಾ ಕ್ಷೇತ್ರದ ಶಾಸಕರೊಂದಿಗೆ ಸಭೆ ನಡೆಸಿ, 'ವೈದ್ಯರ ನಡೆ ಹಳ್ಳಿಕಡೆ' ಅಭಿಯಾನದಡಿ 65-70 ರಷ್ಟು ಮನೆ ಮನೆ ಸರ್ವೆ ವಿಚಾರ ಚರ್ಚೆ ಮಾಡಲಾಗಿದೆ. ಡಿಎಚ್ಒ ಅವರು ಸರಿಯಾಗಿ ಮಾಹಿತಿ ನೀಡದ ಹಿನ್ನೆಲೆ ತರಾಟೆಗೆ ತೆಗೆದುಕೊಳ್ಳಲಾಗಿದೆ. ಇಲ್ಲಿ ಡಿಸಿ ಬಗ್ಗೆ ಪರ-ವಿರೋಧ ಚರ್ಚೆ ಮಾಡಿಲ್ಲ ಎಂದರು.