ETV Bharat / state

ಮೈಸೂರು ಅತ್ಯಾಚಾರ ಪ್ರಕರಣ: ಬಂಧಿತರು ತಮಿಳುನಾಡಿನ ಕೂಲಿ ಕಾರ್ಮಿಕರು - ಡಿಜಿಪಿ ಸೂದ್‌ - ಮೈಸೂರು ಅತ್ಯಾಚಾರ ಪ್ರಕರಣ

ರಾಜ್ಯವನ್ನ ಬೆಚ್ಚಿ ಬೀಳಿಸಿದ್ದ ಮೈಸೂರು ಅತ್ಯಾಚಾರ ಪ್ರಕರಣದಲ್ಲಿ ಐವರನ್ನು ಬಂಧಿಸಲಾಗಿದೆ. ಆರೋಪಿಗಳು ತಮಿಳುನಾಡಿನ ಮೂಲದವರು ಎಂದು ಡಿಜಿ ಪ್ರವೀಣ್ ಸೂದ್ ಮಾಹಿತಿ ನೀಡಿದ್ದಾರೆ.

Mysore gangrape case
ಡಿಜಿ, ಐಜಿಪಿ ಪ್ರವೀಣ್ ಸೂದ್
author img

By

Published : Aug 28, 2021, 1:16 PM IST

Updated : Aug 28, 2021, 4:23 PM IST

ಮೈಸೂರು: ಮೈಸೂರಿನಲ್ಲಿ ಅತ್ಯಾಚಾರ ಪ್ರಕರಣದಲ್ಲಿ ಬಂಧಿತರಾಗಿರುವ ಐವರು ಆರೋಪಿಗಳು ತಮಿಳುನಾಡಿನ ತಿರುಪುರ್​​ ಮೂಲದವರಾಗಿದ್ದು, ಚಾಲಕ, ಕಾರ್ಪೆಂಟರ್‌ ಹಾಗೂ ಕೂಲಿ ಕಾರ್ಮಿಕರಾಗಿದ್ದಾರೆ ಎಂದು ಡಿಜಿ-ಐಜಿಪಿ ಪ್ರವೀಣ್ ಸೂದ್ ಸ್ಪಷ್ಟಪಡಿಸಿದ್ದಾರೆ.

ಮೈಸೂರು ಅತ್ಯಾಚಾರ ಪ್ರಕರಣ ಸಂಬಂಧ ಪೊಲೀಸ್ ಮಹಾನಿರ್ದೇಶಕ ಪ್ರವೀನ್ ಸೂದ್ ಸುದ್ದಿಗೋಷ್ಠಿ

ಪ್ರಕರಣ ಸಂಬಂಧ ನಗರದಲ್ಲಿ ಸುದ್ದಿಗೋಷ್ಠಿ ನೆಡಸಿದ ಅವರು, ಪ್ರಕರಣದಲ್ಲಿ ಐವರನ್ನು ಈಗಾಗಲೇ ಬಂಧಿಸಲಾಗಿದೆ. ಓರ್ವ ತಲೆಮರೆಸಿಕೊಂಡಿದ್ದಾನೆ. ಓರ್ವ ಅಪ್ರಾಪ್ತನಾಗಿರುವ ಸಾಧ್ಯತೆ ಇದೆ ಆದೆ ಆತನ ವಯಸ್ಸಿನ ಬಗ್ಗೆ ಖಚಿತತೆ ಇಲ್ಲ ಎಂದು ಹೇಳಿದ್ದಾರೆ.

ಆರೋಪಿಗಳು ಮೈಸೂರಿನಲ್ಲಿ ಕೆಲಸ ಮಾಡುತ್ತಿದ್ದವರು. ಆಗಾಗ ಮೈಸೂರಿಗೆ ಕೆಲಸಕ್ಕೆಂದು ಬಂದು ಮತ್ತೆ ಪಾವಾಸಾಗುತ್ತಿದ್ದರು. ಆದರೆ ಈ ಬಾರಿ ವಾಪಾಸಾಗುವಾಗ ಈ ಕೃತ್ಯ ಎಸಗಿದ್ದಾರೆ. ಕೆಲವರು ಕ್ರಿಮಿನಲ್ ಕೇಸ್​​​ನಲ್ಲಿ ಭಾಗಿಯಾಗಿರುವ ಮಾಹಿತಿ ಇದೆ. ಇದು ಪ್ಲಾನ್ ಮಾಡಿ ಎಸಗಿದ್ದ ಕೃತ್ಯವೇ ಎಂದು ಈಗಲೇ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ. ಘಟನಾ ಸ್ಥಳದಲ್ಲಿದ್ದ ಸಂತ್ರಸ್ತೆ ಹಾಗೂ ಆಕೆಯ ಸ್ನೇಹಿತನಿಂದ 3 ಲಕ್ಷ ಬೇಡಿಕೆ ಇಟ್ಟಿದ್ದು, ಹಣ ನೀಡದ ಕಾರಣ ಅತ್ಯಾಚಾರ ನಡೆಸಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದರು.

ಸಂತ್ರಸ್ತೆ ಈಗಲೂ ಶಾಕ್​ನಲ್ಲಿದ್ದು, ಆಕೆಯಿಂದ ಮಾಹಿತಿ ಪಡೆಯಲು ಸಾಧ್ಯವಾಗಿಲ್ಲ. ಆಕೆಯ ಸ್ನೇಹಿತನು ಕೂಡ ಪ್ರಜ್ಞಾಹೀನನಾಗಿದ್ದು ಆತನಿಂದಲೂ ಸಂಪೂರ್ಣ ಮಾಹಿತಿ ದೊರೆತಿಲ್ಲ. ಆದರೆ ನಮ್ಮ ತನಿಖೆ, ತಾಂತ್ರಿಕ ಹಾಗೂ ವೈಜ್ಞಾನಿಕ ಸಾಕ್ಷ್ಯಗಳ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದರು.

ಜೊತೆಗೆ ಕಾರ್ಯಾಚರಣೆಯಲ್ಲಿ ಭಾಗಿಯಾದ ಪೊಲೀಸರ ತಂಡಕ್ಕೆ 5 ಲಕ್ಷ ಬಹುಮಾನ ಘೋಷಿಸಿದ್ದಾರೆ.

Last Updated : Aug 28, 2021, 4:23 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.