ಮೈಸೂರು: ಕೊರೊನಾ ಸೋಂಕು ಭೀತಿಯಿಂದ ದೇಶಾದ್ಯಂತ ಲಾಕ್‌ಡೌನ್ ಇರುವ ಕಾರಣ ಬಡವರು, ನಿರ್ಗತಿಕರು ಹಾಗೂ ಆದಿವಾಸಿಗಳಿಗೆ ಟಿಬೆಟಿಯನ್ನರು ಆಹಾರದ ಕಿಟ್ಗಳನ್ನು ವಿತರಿಸಿದರು.
ಹುಣಸೂರು-ಹೆಚ್.ಡಿ.ಕೋಟೆ ತಾಲೂಕುಗಳಿಗೆ ಸಂಪರ್ಕ ಕಲ್ಪಿಸುವ ಹುಣಸೂರು ತಾಲೂಕಿನ ಗುರುಪುರ ಟಿಬೆಟಿಯನ್ ಕ್ಯಾಂಪ್‌ನ ಟಿಬೆಟಿಯನ್ನರು ತಾಲೂಕಿನ ಭೀಮನಹಳ್ಳಿ ಗಿರಿಜನ ಹಾಡಿ ನಿವಾಸಿಗಳಿಗೆ ಅಗತ್ಯ ಸಾಮಾಗ್ರಿಗಳನ್ನು ಒದಗಿಸಿದರು.
ಅಕ್ಕಿ, ಈರುಳ್ಳಿ, ಅಡುಗೆ ಎಣ್ಣೆ, ಬಿಸ್ಕೆಟ್, ಟೊಮೊಟೋ, ಟೂತ್ ಪೇಸ್ಟ್, ಹಾಲು, ಖಾರದ ಪುಡಿ ಹಾಗು ಬೇಳೆ ಸೇರಿದಂತೆ ಹಲವು ಪದಾರ್ಥಗಳು ಆಹಾರದ ಕಿಟ್‌ನಲ್ಲಿದ್ದವು.
ಸಾಮಾಜಿಕ ಅಂತರ ಕಾಯ್ದುಕೊಂಡು ಗಿರಿಜನರಿಗೆ ಆಹಾರದ ಕಿಟ್ ವಿತರಣೆ ಕಾರ್ಯ ನಡೆಯಿತು. ಭೀಮನಹಳ್ಳಿ ಹಾಡಿ, ಕುಂಟಾರಿಹಾಡಿ, ಮಂಜುಕುಪ್ಪೆ ಹಾಡಿ, ಹಳೆ ವರಂಚಿ ಹಾಡಿ ಸೇರಿದಂತೆ 16 ಹಾಡಿಗಳ ಆದಿವಾಸಿಗಳು ಇದರ ಪ್ರಯೋಜನ ಪಡೆದರು.