ಮೈಸೂರು : ಶ್ರೀರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನದ ಕರಪತ್ರವನ್ನು ಸಾಹಿತಿ ಕೆ ಎಸ್ ಭಗವಾನ್ ಅವರಿಗೆ ನೀಡಲಾಯಿತು.
ರಾಮನ ಬಗ್ಗೆ ಹಲವಾರು ಬಾರಿ ವಿವಾದಾತ್ಮಕ ಹೇಳಿಕೆ ನೀಡಿ ಶ್ರೀರಾಮ ಮಂದಿರ ಏಕೆ ಬೇಡ? ಎಂಬ ಪುಸ್ತಕವನ್ನು ಬರೆದಿರುವ ಸಾಹಿತಿ ಕೆ ಎಸ್ ಭಗವಾನ್ ಮನೆಗೆ ಶ್ರೀರಾಮ ಮಂದಿರ ನಿಧಿ ಸಮರ್ಪಣಾ ತಂಡದ ಇಬ್ಬರು ಸದಸ್ಯರು ಭೇಟಿ ನೀಡಿ, ಶ್ರೀರಾಮ ಮಂದಿರ ನಿರ್ಮಾಣಕ್ಕೆ ಹಿಂದೂಗಳಿಂದ ವಂತಿಕೆ ಸಂಗ್ರಹ ಮಾಡುತ್ತಿದ್ದೇವೆ ಎಂಬ ಕರಪತ್ರವನ್ನು ನೀಡಿದ್ದಾರೆ.
ಇದಕ್ಕೆ ಸಂತೋಷ ವ್ಯಕ್ತಪಡಿಸಿದ ಭಗವಾನ್, ನಾನು ಶ್ರೀರಾಮ ಮಂದಿರ ನಿರ್ಮಾಣಕ್ಕೆ ಹಣ ನೀಡುವುದಿಲ್ಲ. ಬದಲಾಗಿ ಶಿವನ ದೇವಾಲಯ ನಿರ್ಮಾಣ ಮಾಡಿ ಹಣ ಕೊಡುತ್ತೇನೆ ಎಂದು ಹೇಳಿದ್ದೆ ಎಂದು ಸ್ಪಷ್ಟಪಡಿಸಿದರು.