ETV Bharat / state

ನಮ್ಮ ಸಮುದಾಯದಲ್ಲೊಬ್ಬರು ಸಿಎಂ ಆಗಬೇಕು: ಆರ್ ಧ್ರುವನಾರಾಯಣ್ - ಸಿಎಂ ಸ್ಥಾನಕ್ಕೆ ಸ್ಪರ್ಧೆ ಬಗ್ಗೆ ಆರ್ ಧ್ರುವನಾರಾಯಣ್ ಹೇಳಿಕೆ

ಪ್ರತಿಯೊಂದು ಸಮಾಜದಲ್ಲಿ ಆಸೆ ಇದ್ದೇ ಇರುತ್ತೆ. ಅದನ್ನು ತಪ್ಪು ಅಂತ ಹೇಳಲು ಸಾಧ್ಯವಿಲ್ಲ. ಒಟ್ಟಾರೆ ವರಿಷ್ಠರ ತೀರ್ಮಾನ ಅಂತಿಮ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್ ಹೇಳಿದರು.

ಆರ್  ಧ್ರುವನಾರಾಯಣ್
ಆರ್ ಧ್ರುವನಾರಾಯಣ್
author img

By

Published : Jul 20, 2022, 10:27 PM IST

ಮೈಸೂರು: ನಮ್ಮ ಸಮುದಾಯದಲ್ಲೊಬ್ಬರು ಮುಖ್ಯಮಂತ್ರಿಯಾಗಬೇಕು ಎಂಬ ಆಸೆ ನನಗೂ ಇದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್ ಹೇಳಿದರು.

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಕ್ಷ ಅಧಿಕಾರಕ್ಕೆ ಬಂದಾಗ ಹೈಕಮಾಂಡ್ ಅದನ್ನು ತೀರ್ಮಾನ ಮಾಡುತ್ತದೆ. ಎಲ್ಲ ಸಮುದಾಯದವರಿಗೂ ಅವರವರ ಮುಖಂಡರು ಮುಖ್ಯಮಂತ್ರಿ ಮಾಡಬೇಕು ಎಂಬ ಆಸೆ ಇದ್ದೇ ಇರುತ್ತದೆ. ಚುನಾವಣೆಯ ಮೂಲಕ ಅಧಿಕಾರಕ್ಕೆ ಬಂದಾಗ, ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ಎಲ್ಲರೂ ಬದ್ದರಾಗಿರುತ್ತಾರೆ ಎಂದರು.

ಆರ್ ಧ್ರುವನಾರಾಯಣ್ ಅವರು ಮಾತನಾಡಿರುವುದು

ಪ್ರತಿಯೊಂದು ಸಮಾಜದಲ್ಲಿ ಆಸೆ ಇದ್ದೇ ಇರುತ್ತೆ. ಅದನ್ನು ತಪ್ಪು ಅಂತ ಹೇಳಲು ಸಾಧ್ಯವಿಲ್ಲ. ಒಟ್ಟಾರೆ ವರಿಷ್ಠರ ತೀರ್ಮಾನ ಅಂತಿಮ. ಆಗ ಇಂತಹ ಪ್ರಶ್ನೆಗಳು ಅಪ್ರಸ್ತುತ. ಬಿಜೆಪಿ ಸರ್ಕಾರದ ಆಡಳಿತ ವೈಫಲ್ಯ ತೋರಿಸಬೇಕು. ಜನರಿಗೆ ಇದೆಲ್ಲ ತಿಳಿಸಬೇಕು. ಕಾಂಗ್ರೆಸ್ ಪಕ್ಷ ಹೋರಾಟ ಮಾಡುತ್ತಿರುವುದರಿಂದ ಬಿಜೆಪಿಗೆ ಹೊಡೆತ ಬೀಳುತ್ತಿದೆ ಎಂದು ತಿಳಿಸಿದರು.

ದಲಿತ ಸಮಾಜಕ್ಕೆ ಒಳ್ಳೆಯ ಕೆಲಸ : ರಾಜಕೀಯ ಪಕ್ಷಗಳಲ್ಲಿ ಅವರವರ ಸಮಾಜ ಒಂದುಗೂಡಿಸುವುದು ತಪ್ಪಲ್ಲ. ಜಾತಿ ಆಧಾರದ ಮೇಲೆ ಚುನಾವಣೆಗಳು ನಡೆಯುತ್ತದೆ. ಆದ್ದರಿಂದ, ಆಯಾಯ ಸಮುದಾಯವರು ನಮ್ಮ ಪಕ್ಷದಲ್ಲಿ ಸಮಾಜ ಒಗ್ಗೂಡಿಸುವುದು ನಮ್ಮ ಕರ್ತವ್ಯವಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದಲೂ ದಲಿತ ಸಮಾಜಕ್ಕೆ ಒಳ್ಳೆಯ ಕೆಲಸ ಮಾಡಿಕೊಂಡೇ ಬಂದಿದೆ ಎಂದರು.

ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್ ಅವರು ಚಿತ್ರದುರ್ಗದಲ್ಲಿರುವ ಆದಿಜಾಂಬವ ಮಠಕ್ಕೆ ಸುಮ್ಮನೆ ಹೋಗಿದ್ದಾರಾ? ಕಷ್ಟ ಸುಖ ಹೇಳಲು ಹೋಗಿದ್ದರಾ? ಚುನಾವಣೆ ಹತ್ತಿರವಾಗುತ್ತಿದೆ. ಅದಕ್ಕೆ ಹೋಗಿದ್ದರು. ಇಂತಹ ವಿಚಾರದಲ್ಲಿ ಅವರು ನಿಸ್ಸೀಮರು ಎಂದು ವ್ಯಂಗ್ಯವಾಡಿದರು.

ಸಿಎಂ ಯಾರಾಗಬೇಕೆಂದು ಹೈಕಮಾಂಡ್ ತಿಳಿಸಲಿದೆ: ಕಾಂಗ್ರೆಸ್ ನಾಯಕರ ಪರ ಕಾರ್ಯಕರ್ತರಿಂದ ಮುಂದಿನ ಸಿಎಂ ಘೋಷಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಅಭಿಮಾನದಿಂದ ಕೂಗುತ್ತಾರೆ ಬೇಡ ಎನ್ನಲಾಗುತ್ತಾ? ಅತಿಯಾದ ಪ್ರೀತಿ, ವಿಶ್ವಾಸದಿಂದ ಕೂಗುತ್ತಾರೆ. ಅದನ್ನ ಸಂಪೂರ್ಣವಾಗಿ ಕಂಟ್ರೋಲ್ ಮಾಡಲು ಸಾಧ್ಯವಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರುವುದೊಂದೇ ಗುರಿ. ಪಕ್ಷ ಅಧಿಕಾರಕ್ಕೆ ಬಂದಾಗ ಸಿಎಂ ಯಾರಾಗಬೇಕೆಂದು ಹೈಕಮಾಂಡ್ ತಿಳಿಸಲಿದೆ ಎಂದರು.

ಇನ್ನೂ ಚುನಾವಣೆಯೇ ಬಂದಿಲ್ಲ. ಈ ವೇಳೆ ಘೋಷಣೆ ಕೂಗುವುದರಿಂದ ಪಕ್ಷಕ್ಕೆ ಸ್ವಲ್ಪ ಹಿನ್ನೆಡೆಯಾಗಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬರುವ ಲಕ್ಷಣಗಳಿವೆ. ಪಕ್ಷದ ರಾಜ್ಯಾಧ್ಯಕ್ಷರೇ ರಾಜ್ಯ ಕಾಂಗ್ರೆಸ್​ನಲ್ಲಿ ಯಾವುದೇ ಬಣಗಳಿಲ್ಲ ಎಂದು ಹೇಳಿದ್ದಾರೆ ಎಂದು ತಿಳಿಸಿದರು.

ಓದಿ: ಕುಂತವರು ನಿಂತವರು ಯಾರ್ಯಾರೋ ಸಿಎಂ ಹುದ್ದೆ ಕೇಳುತ್ತಿದ್ದಾರೆ: ಡಾ. ಹೆಚ್. ಸಿ ಮಹದೇವಪ್ಪ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.