ETV Bharat / state

ಬಾಗಿಲು ತೆರೆದ ದೇಗುಲುಗಳು:​ ಚಾಮುಂಡೇಶ್ವರಿ, ನಂಜುಂಡೇಶ್ವರನ ದರ್ಶನಕ್ಕೆ ಭಕ್ತಾದಿಗಳಿಗೆ ಅವಕಾಶ

author img

By

Published : Jul 5, 2021, 1:11 PM IST

ಕಳೆದ ಎರಡು ತಿಂಗಳಿಂದ ಬಂದ್ ಆಗಿದ್ದ ದೇವಾಲಯಗಳು ಇಂದು ಬಾಗಿಲು ತೆರೆದಿವೆ. ಈ ಹಿನ್ನೆಲೆಯಲ್ಲಿ ನಂಜುಂಡೇಶ್ವರ ಮತ್ತು ಚಾಮುಂಡೇಶ್ವರಿಯ ದರ್ಶನ ಪಡೆಯಲು ಭಕ್ತರು ಆಗಮಿಸಿದ್ದಾರೆ.

mysore
ದರ್ಶನಕ್ಕೆ ಭಕ್ತಾದಿಗಳಿಗೆ ಅವಕಾಶ

ಮೈಸೂರು: ಇಂದಿನಿಂದ ರಾಜ್ಯದಲ್ಲಿ ಅನ್​ಲಾಕ್​ 3.O ಜಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿ ಹಾಗೂ ನಂಜುಂಡೇಶ್ವರನ ದರ್ಶನಕ್ಕೆ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ. ದೇವರ ದರ್ಶನ ಪಡೆಯಲು ಭಕ್ತಾದಿಗಳು ಆಗಮಿಸುತ್ತಿದ್ದಾರೆ.

ಕಳೆದ ಎರಡು ತಿಂಗಳಿಂದ ಬಂದ್ ಆಗಿದ್ದ ದೇವಾಲಯಗಳ ಬಾಗಿಲು ತೆರೆದಿರುವುದರಿಂದ ದೇವರ ದರ್ಶನ ಪಡೆಯಲು ಭಕ್ತಾದಿಗಳು ಮುಗಿಬಿದ್ದಿದ್ದಾರೆ. ಕೇವಲ ದೇವರ ದರ್ಶನಕ್ಕಷ್ಟೇ ಅವಕಾಶ ನೀಡಲಾಗಿದ್ದು, ಯಾವುದೇ ಪೂಜೆಗಳಿಗೆ ಅವಕಾಶಗಳಿಲ್ಲ.

ದರ್ಶನಕ್ಕೆ ಭಕ್ತಾದಿಗಳಿಗೆ ಅವಕಾಶ

ಮೊದಲ ದಿನವಾಗಿರುವುದರಿಂದ ಕಡಿಮೆ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ನಂಜುಂಡೇಶ್ವರನ ದರ್ಶನ ಪಡೆಯಲು ಭಾನುವಾರ, ಸೋಮವಾರ, ಹುಣ್ಣಿಮೆ ದಿನ ಭಕ್ತಾದಿಗಳು ಹೆಚ್ಚಾಗಿ ಆಗಮಿಸುತ್ತಾರೆ‌. ಆದರೆ, ಅನ್​ಲಾಕ್​ನ ಮೊದಲ ದಿನ ಭಕ್ತಾದಿಗಳ ಸಂಖ್ಯೆ ಕಡಿಮೆ ಇದೆ. ದೇವಾಲಯದ ಹೊರಭಾಗದಲ್ಲಿ ಈಡುಗಾಯಿ ಹೊಡೆದು ಭಕ್ತಾದಿಗಳು ಪೂಜೆ ಮಾಡಿಕೊಂಡು ಹೋಗುತ್ತಿದ್ದಾರೆ.

ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ1 ಗಂಟೆವರಗೆ ಮತ್ತು ಸಂಜೆ 4 ರಿಂದ 7 ಗಂಟೆವರೆಗೆ ದರ್ಶನಕ್ಕೆ ಅವಕಾಶವಿದೆ. ಮುಡಿ ಸೇವೆ, ವಿಶೇಷ ಪೂಜೆಗಳಿಗೆ ಅವಕಾಶವಿಲ್ಲ ನೀಡಿಲ್ಲ.

ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭಕ್ತರ ಎಂಟ್ರಿ: ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭಕ್ತಾದಿಗಳು ದೇವಿ ದರ್ಶನ ಪಡೆಯಲು ಆಗಮಿಸುತ್ತಿದ್ದು, ಕೊರೊನಾ ನಿಯಮ ಪಾಲನೆ ಮಾಡುವಂತೆ ಸೂಚನೆ ನೀಡಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.