ಮೈಸೂರು: ಪ್ರತಿ ವರ್ಷ ಕೋಟಿ ಕೋಟಿ ಸುರಿಯುತ್ತಿದ್ದರೂ ಅರಣ್ಯಾಭಿವೃದ್ಧಿ ಮಾತ್ರ ಮರೀಚಿಕೆಯಾಗುತ್ತದೆ. ಅಭಿವೃದ್ಧಿ ಹೆಸರಲ್ಲಿ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ, ಕೈಗಾರಿಕೆ, ರೆಸಾರ್ಟ್ ನಿರ್ಮಾಣ ವ್ಯಾಪಕವಾಗಿ ನಡೆಯುತ್ತಿದೆ. ಇನ್ನು ಅಕ್ರಮವಾಗಿ ನಡೆಯುತ್ತಿರುವ ವ್ಯವಹಾರಗಳು ಲೆಕ್ಕವಿಲ್ಲದಷ್ಟಿವೆ.
ಇದನ್ನೂ ಓದಿ...ಮೈಸೂರಿನಿಂದ ಹಲವು ಜಿಲ್ಲೆಗಳಿಗೆ ಇಂದಿನಿಂದ ರೈಲು ಸಂಚಾರ ಆರಂಭ
ಪರಿಸರ ಹೋರಾಟಗಾರ್ತಿ ಭಾನು ಮೋಹನ್ ಮಾತನಾಡಿ, ಅರಣ್ಯ ಪ್ರದೇಶದ ಗಡಿ ಭಾಗದಲ್ಲಿ ಕೈಗಾರಿಕೆ, ರೆಸಾರ್ಟ್ಗಳು ಲೆಕ್ಕವಿಲ್ಲದಷ್ಟು ತಲೆ ಎತ್ತಿವೆ. ಅವುಗಳಿಗೆ ರಾಜಕಾರಣಿಗಳ ಪ್ರಭಾವ ಇರುತ್ತದೆ. ಸಂಘ-ಸಂಸ್ಥೆಗಳು, ಸ್ಥಳೀಯರು, ಪರಿಸರ ಹೋರಾಟಗಾರರು ಇದರ ವಿರುದ್ಧ ಎಷ್ಟೇ ಹೋರಾಡಿದರೂ ನ್ಯಾಯ ದೊರಕುತ್ತಿಲ್ಲ. ಹೀಗಾದರೆ ಪರಿಸರ ಉಳಿಸುವುದು ಹೇಗೆ ಎಂದು ಪ್ರಶ್ನಿಸಿದರು.
ಮಲೆನಾಡು, ಚಾಮರಾಜನಗರ ಭಾಗದಲ್ಲಿ ದಟ್ಟವಾಗಿದ್ದ ಕಾಡು ಈಗ ಮಾಯವಾಗಿದೆ. ಅದಕ್ಕೆ ಕಾರಣ ಒತ್ತುವರಿ. ಕಾಡಂಚಿನ ವ್ಯಾಪ್ತಿಯಲ್ಲಿ ಬರುವ ಜಮೀನುಗಳ ಮಾಲೀಕರು ಒತ್ತುವರಿ ಮಾಡಿಕೊಳ್ಳುತ್ತಿರುವ ಕಾರಣ ಪರಿಸರ ಅವನತಿಯತ್ತ ಸಾಗುತ್ತಿದೆ. ಇನ್ನು ಕೆಲವೆಡೆ ಶ್ರೀಗಂಧ ಮರಗಳ ಕಳ್ಳತನ ಹೆಚ್ಚಾಗಿದೆ. ಬೇಸಿಗೆ ಸಮಯದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಗಿಡ-ಮರಗಳ ಜೊತೆಗೆ ಪ್ರಾಣಿ-ಪಕ್ಷಿಗಳು ಬೆಂದು ಹೋಗುತ್ತವೆ ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ...ಮೈಸೂರು : ಹಣಕಾಸಿನ ವಿಷಯಕ್ಕೆ ವೆಸ್ಲಿ ಚರ್ಚ್ನ ಸಭಿಕರು- ಭೋದಕರ ನಡುವೆ ಗಲಾಟೆ
ಒತ್ತುವರಿ ಹೆಚ್ಚಾದಂತೆಲ್ಲಾ ನದಿ, ಕೆರೆಗಳು ಮುಚ್ಚಿ ಮಾಯವಾಗುತ್ತಿವೆ. ಕಾಡಿಗೆ ಬೆಂಕಿ ಬಿದ್ದ ಸಂದರ್ಭದಲ್ಲಿ ಆ ಜಾಗದಲ್ಲಿ ನೀರಿನ ವ್ಯವಸ್ಥೆಯೇ ಇರುವುದಿಲ್ಲ. ಸರ್ಕಾರಕ್ಕೆ ಅಗ್ನಿಶಾಮಕ ಠಾಣೆ ನಿರ್ಮಿಸಲು ಪ್ರಸ್ತಾವನೆ ಕಳುಹಿಸಿದ್ದೇವೆ ಎಂದು ಅರಣ್ಯ ಇಲಾಖೆ ಮಾಹಿತಿ ನೀಡುತ್ತದೆ. ಅರಣ್ಯ ಪ್ರದೇಶಗಳ ಅಭಿವೃದ್ಧಿಗೆ ಕೋಟ್ಯಂತರ ರೂ. ಅನುದಾನ ಬಿಡುಗಡೆ ಮಾಡುತ್ತದೆ. ಆದರೆ ಆ ಅನುದಾನದ ಸದುಪಯೋಗ ಅಷ್ಟಕ್ಕಷ್ಟೇ ಎನ್ನುತ್ತಾರೆ ಅವರು.