ಮೈಸೂರು: ಗಿರಿಜನರ ಸಮಸ್ಯೆ ಆಲಿಸಲು ಹಾಗೂ ಡಾ.ಮುಜಾಫರ್ ಅಸಾದಿ ಬಗ್ಗೆ ಚರ್ಚಿಸಲು ಉಪ ಲೋಕಾಯುಕ್ತ ಬಿ.ಎಸ್. ಪಾಟೀಲ ಅವರು ಹಾಡಿಗೆ ತೆರಳಿ ಗಿರಿಜನರ ಸಂಕಷ್ಟಗಳನ್ನು ಕಣ್ಣಾರೆ ಕಂಡು ಬೇಸರ ವ್ಯಕ್ತಪಡಿಸಿದರು.
ಹೆಚ್.ಡಿ.ಕೋಟೆ ತಾಲೂಕಿನ ಸೊಳ್ಳೆಪುರ ಹಾಡಿಗೆ ಭೇಟಿ ನೀಡಿದ ಬಿ.ಎಸ್.ಪಾಟೀಲ, ಡಾ.ಮುಜಾಫರ್ ಆಸಾದಿ ವರದಿ ವಿಳಂಬದಿಂದ ಗಿರಿಜನರಿಗೆ ಆಗುತ್ತಿರುವ ಅನ್ಯಾಯ, ಬುಡಕಟ್ಟು ಅರಣ್ಯ ಹಕ್ಕು ಕಾಯ್ದೆ ಅನುಷ್ಠಾನ ವಿಳಂಬ, ಕಾಡು ಕುರುಬ, ಬೆಟ್ಟ ಕುರುಬ ಪಂಗಡದವರಿಗೆ ವಿಶೇಷ ಅನುದಾನದಲ್ಲಿ ಗುಂಪು ನಿರ್ಮಾಣ ಬಗ್ಗೆ, ವಿಶ್ರಾಂತಿ ಗೃಹ ನಿರ್ಮಿಸಿಕೊಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಭರವಸೆ ನೀಡಿದರು.
ಆದಿವಾಸಿ ಯುವಕ ಹಾಗೂ ಯುವತಿಯರಿಗೆ ಉದ್ಯೋಗ ಅವಕಾಶಕ್ಕೆ ಬೇಕಾದ ಕೌಶಲ್ಯ ತರಬೇತಿ, ಮದ್ಯದಂಗಡಿ, ಗಾಂಜಾ, ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
![deputy Lokayukta BS Patel visits](https://etvbharatimages.akamaized.net/etvbharat/prod-images/kn-mys-04-bspateela-hadi-vis-ka10003_17042021181108_1704f_1618663268_891.jpg)
ಇದೇ ಮೊದಲ ಬಾರಿಗೆ ಉಪಲೋಕಾಯುಕ್ತರು ಹಾಡಿಗೆ ತೆರಳಿ, ಸಮಸ್ಯೆಗಳನ್ನು ಆಲಿಸಿದ್ದಕ್ಕೆ ಗಿರಿಜನರು, ಬಿ.ಎಸ್. ಪಾಟೀಲರ ಸರಳತೆ ಮೆಚ್ಚುಗೆ ವ್ಯಕ್ತಪಡಿಸಿದರು.