ETV Bharat / state

ಸತೀಶ್ ಜಾರಕಿಹೊಳಿಗೆ ಡಿಸಿಎಂ, ಪುಟ್ಟರಂಗಶೆಟ್ಟಿಗೆ ಸಚಿವ ಸ್ಥಾನ ನೀಡುವಂತೆ ಸಮುದಾಯಗಳ ಒತ್ತಾಯ

ಎಸ್.ಎಸ್ ಮಲ್ಲಿಕಾರ್ಜುನ್​ ಮತ್ತು ಸತೀಶ್ ಜಾರಕಿಹೊಳಿಗೆ ಡಿಸಿಎಂ, ಪುಟ್ಟರಂಗಶೆಟ್ಟಿಗೆ ಸಚಿವ ಸ್ಥಾನ ನೀಡಬೇಕೆಂದು ಆಯಾಯ ಸಮುದಾಯದ ಮುಖಂಡರು ಒತ್ತಾಯ ಮಾಡಿದ್ದಾರೆ.

Insist on DCM and ministership
ಡಿಸಿಎಂ ಸಚಿವ ಸ್ಥಾನಕ್ಕೆ ಒತ್ತಾಯ
author img

By

Published : May 17, 2023, 10:36 PM IST

Updated : May 17, 2023, 10:45 PM IST

ಮಾಜಿ ಸಚಿವ ಎಸ್ಎಸ್ ಮಲ್ಲಿಕಾರ್ಜುನ್‌ ರವರಿಗೆ ಡಿಸಿಎಂ ಸ್ಥಾನ ನೀಡವಂತೆ ಒತ್ತಾಯ.

ಮೈಸೂರು : ಚಾಮರಾಜನಗರದ ಕಾಂಗ್ರೆಸ್​ ಶಾಸಕ ಸಿ.ಪುಟ್ಟರಂಗಶೆಟ್ಟಿಯವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಜಿಲ್ಲಾ ಭಗೀರಥ ಉಪ್ಪಾರ ಸಂಘದ ಅಧ್ಯಕ್ಷ ಎಸ್.ಯೋಗೀಶ್​ ಉಪ್ಪಾರ ಮನವಿ ಮಾಡಿದರು. ರಾಜ್ಯಾದ್ಯಂತ 25 ರಿಂದ 30 ಲಕ್ಷ ಜನಸಂಖ್ಯೆ ಇರುವ ಉಪ್ಪಾರ ಸಮುದಾಯವು ಸಾಮಾಜಿಕವಾಗಿ ತೀರ ಹಿಂದುಳಿದಿದೆ. ಸಮಾಜದ ಏಕೈಕ ಶಾಸಕರಾಗಿ ಪುಟ್ಟರಂಗಶೆಟ್ಟಿ ಆಯ್ಕೆಯಾಗಿದ್ದು, ಸೂಕ್ತ ಸ್ಥಾನಮಾನ ನೀಡಬೇಕು. ಸಮುದಾಯದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಅಧಿಕಾರದಲ್ಲಿ ಇದ್ದಾಗ ಉಪ್ಪಾರ ಸಮುದಾಯಕ್ಕೆ ಯಾವುದೇ ಪ್ರಾತಿನಿಧ್ಯ ನೀಡಲಿಲ್ಲ. ನಾವೆಲ್ಲರೂ ಒಮ್ಮತದಿಂದ ಸಿದ್ದರಾಮಯ್ಯ ನೇತೃತ್ವ ಒಪ್ಪಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದ್ದೇವೆ. ಸಮಾಜದ ಮುಂಚೂಣಿ ನಾಯಕರನ್ನು ಗುರುತಿಸಿ ವಿಧಾನ ಪರಿಷತ್ ಸದಸ್ಯ ಸ್ಥಾನ ಹಾಗೂ ಮಂಡಳಿಗಳಲ್ಲಿ ಅಧ್ಯಕ್ಷ ಸ್ಥಾನಗಳನ್ನು ನೀಡಿ ಸಹಕರಿಸಬೇಕು ಎಂದರು. ಸುದ್ದಿಗೋಷ್ಠಿಯಲ್ಲಿ ಸಂಘದ ಕಾರ್ಯಾಧ್ಯಕ್ಷ ಕನಕನಗರ ಮಹದೇವು, ಉಪಾಧ್ಯಕ್ಷ ಕರಳಾಪುರ ನಾಗರಾಜು, ಗೌರವ ಸಲಹೆಗಾರ ಚಂದ್ರಪ್ಪ, ನಿರ್ದೇಶಕರಾದ ಕುಡ್ಲಾಪುರ ಎಂ.ರಾಜು, ಮಲ್ಲೇಶ್,ಮುಖಂಡ ಸೋಮಶಂಕರ್ ಇದ್ದರು.

ಸತೀಶ್ ಜಾರಕಿಹೊಳಿಗೆ ಡಿಸಿಎಂ ಸ್ಥಾನ : ಯಮನಕಮರಡಿ ಕ್ಷೇತ್ರದ ಶಾಸಕ ಸತೀಶ್ ಜಾರಕಿಹೊಳಿ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ರಾಜ್ಯ ನಾಯಕರ ಹಿತರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ದ್ಯಾವಪ್ಪ ನಾಯಕ ಮನವಿ ಮಾಡಿದರು. ಕಾಂಗ್ರೆಸ್​ನಲ್ಲಿ ನಮ್ಮ ಸಮುದಾಯದಿಂದ 15 ಶಾಸಕರು ಆಯ್ಕೆಯಾಗಿದ್ದಾರೆ. ಶೇ 70 ರಷ್ಟು ಮತ ಚಲಾವಣೆ ಮಾಡಿ ಪಕ್ಷ ಅಧಿಕಾರಕ್ಕೇರಲು ಸಹಕರಿಸಿದ್ದಾರೆ ಎಂದು ಹೇಳಿದರು.

ನಾಯಕ ಜನಾಂಗವು ಹೆಚ್ಚಾಗಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷದಲ್ಲಿದೆ. ಕಾಂಗ್ರೆಸ್ ಪಕ್ಷಕ್ಕೆ ಕಡಿಮೆ ಮತ ಚಲಾಯಿಸುತ್ತಾರೆ ಎಂದು ಅಪಪ್ರಚಾರ ನಡೆಸಿದರು. ಆದರೆ, ನಮ್ಮ ಸಮುದಾಯ ಈ ಬಾರಿ ಸತೀಶ್ ಜಾರಕಿಹೊಳಿಯವರ ನೇತೃತ್ವದಲ್ಲಿ ಇಡೀ ರಾಜ್ಯದಲ್ಲಿ ಹೆಚ್ಚು ಮತಗಳನ್ನು ಕಾಂಗ್ರೆಸ್ ಪಕ್ಷಕ್ಕೆ ನೀಡಿದೆ. ಬುದ್ಧ, ಬಸವ, ಅಂಬೇಡ್ಕರ್​ ಅನುಯಾಯಿಯಾದ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಸಮುದಾಯ ವಿಶ್ವಾಸವಿಟ್ಟಿದ್ದು, ಅವರನ್ನು ಪರಿಗಣಿಸಲೇಬೇಕು. ಮೈಸೂರು ಭಾಗದಿಂದ ಆಯ್ಕೆಯಾದ ಸಮುದಾಯದ ಏಕೈಕ ಶಾಸಕ ಅನಿಲ್ ಚಿಕ್ಕಮಾದು ಅವರನ್ನೂ ಸೇರಿ, 4 ಶಾಸಕರಿಗೆ ಸಚಿವ ಸ್ಥಾನ ನೀಡಬೇಕು. ಈ ಭಾಗದಿಂದ ಒಬ್ಬರಿಗೆ ವಿಧಾನ ಪರಿಷತ್ ಸ್ಥಾನ ನೀಡಬೇಕು ಎಂದು ಮನವಿ ಮಾಡಿದರು.

ಎಸ್.ಎಸ್ ಮಲ್ಲಿಕಾರ್ಜುನ್​ ಡಿಸಿಎಂ ಮಾಡಲೇಬೇಕೆಂಬ ಕೂಗು : ಮಾಜಿ ಸಚಿವ ಎಸ್ಎಸ್ ಮಲ್ಲಿಕಾರ್ಜುನ್‌ ರವರಿಗೆ ಡಿಸಿಎಂ ಸ್ಥಾನ ನೀಡಬೇಕೆಂದು ಭಾರತ್ ಸೌಹಾರ್ದ ಸಂಘದ ವತಿಯಿಂದ ಮನವಿ ಮಾಡಲಾಯಿತು. ಮಧ್ಯ ಕರ್ನಾಟಕದ ಪ್ರಮುಖ ನಾಯಕರಾಗಿರುವ ಎಸ್ಎಸ್ ಮಲ್ಲಿಕಾರ್ಜುನ್‌, ಮಾಜಿ ಸಿಎಂ ಎಸ್ಎಂ ಕೃಷ್ಣ ಸರ್ಕಾರದಲ್ಲಿ ಕ್ರೀಡಾ ಯುವಜನ ಸೇವಾ ಇಲಾಖೆಯ ಮಂತ್ರಿ ಹಾಗೂ ಮಾಜಿ ಸಿಎಮ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ತೋಟಗಾರಿಕೆ ಎಪಿಎಂಸಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಆದರಿಂದ ಈ ಬಾರಿ ಅವರಿಗೆ ಡಿಸಿಎಂ ಸ್ಥಾನ ಕೊಡಬೇಕು ಎಂದು ಆಗ್ರಹಿಸಿದರು.

ಈ ವೇಳೆ ಭಾರತ್ ಸೌಹಾರ್ದ ಸಂಘದ ಕಾರ್ಯದರ್ಶಿ ಆಂಜನೇಯ ಗುರುಜೀ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ದೇಶಾದ್ಯಂತ ಕೋವಿಡ್ ಸಾಂಕ್ರಾಮಿಕ ರೋಗದಲ್ಲಿ ಎಲ್ಲ ವರ್ಗದವರಿಗೂ ತಮ್ಮ ಸ್ವಂತ ಖರ್ಚಿನಲ್ಲಿ ಉಚಿತ ವ್ಯಾಕ್ಸಿನ್ ನೀಡಿದ್ದರು. ಈ ಮೂಲಕ ಹಲವಾರು ಜನರ ಜೀವ ಕಾಪಾಡಿದ್ದರು. ಈ ಹಿಂದೆ ಸಿದ್ಧರಾಮಯ್ಯ ಹುಟ್ಟು ಹಬ್ಬವನ್ನು ಆಚರಿಸಿ 15 ಲಕ್ಷಕ್ಕೂ ಅಧಿಕ ಕಾರ್ಯಕರ್ತರನ್ನು ಸೇರಿಸಿ ಕಾಂಗ್ರೆಸ್‌ ಪಕ್ಷದ ಬಲವರ್ಧನೆಯನ್ನು ಮಾಡುವಲ್ಲಿ ಯಶಸ್ವಿಯಾಗಿದ್ದರು.

ಇನ್ನು ಅಭಿವೃದ್ಧಿ ಯೋಜನೆಗಳ ಹರಿಕಾರರಾಗಿರುವ ಇವರನ್ನು ಉಪಮುಖ್ಯಮಂತ್ರಿಯಾಗಿ ನೇಮಿಸಿದ್ದಲ್ಲಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅನುಕೂಲವಾಗುತ್ತದೆ ಎಂದು ಸಲಹೆ ನೀಡಿದರು. ಡಿಸಿಎಂ ಅಲ್ಲದೆ ದಾವಣಗೆರೆ ಉಸ್ತುವಾರಿ ಕೂಡ ವಹಿಸಬೇಕು ಎಂದು ಮನವಿ ಮಾಡಿದರು.

ಇದನ್ನೂ ಓದಿ : ತಪ್ಪು ಸರಿಪಡಿಸಿಕೊಂಡು ಮತ್ತೆ ಬಿಜೆಪಿ ಅಧಿಕಾರಕ್ಕೆ ಬರ್ತದೆ.. ಕಾರ್ಯಕರ್ತರು ಧೃತಿಗೆಡಬೇಕಿಲ್ಲ: ಶಾಸಕ ಚನ್ನಬಸಪ್ಪ

Last Updated : May 17, 2023, 10:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.