ETV Bharat / state

ಮೈಸೂರು ಅರಮನೆಗೆ ಬರುವ ವಿದೇಶಿ ಪ್ರವಾಸಿಗರ ಸಂಖ್ಯೆಯಲ್ಲಿ ಭಾರಿ ಇಳಿಕೆ!

ಮೈಸೂರು ಅರಮನೆಗೆ ಕಳೆದ 5 ವರ್ಷಗಳಿಂದ ವಿದೇಶಿ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಮುಖವಾಗಿದ್ದು, ಪ್ರವಾಸೋದ್ಯಮವನ್ನೇ ನಂಬಿ ಬದುಕುವ ಇಲ್ಲಿನ ವ್ಯಾಪಾರಿಗಳು, ಗೈಡ್​​ಗಳು, ಟ್ರಾವೆಲ್ ಕಂಪನಿ ಏಜೆಂಟರು, ಹೋಟೆಲ್ ಮಾಲೀಕರು ಸೇರಿದಂತೆ ಹಲವರಿಗೆ ಈಗ ಆತಂಕ ಎದುರಾಗಿದೆ.

ಅರಮನೆಗೆ ಬರುವ ವಿದೇಸಿ ಪ್ರವಾಸಿಗರ ಸಂಖ್ಯೆಯಲ್ಲಿ ಭಾರಿ ಇಳಿಕೆ
author img

By

Published : Jun 27, 2019, 4:55 PM IST

ಮೈಸೂರು: ವಿಶ್ವ ವಿಖ್ಯಾತ ಮೈಸೂರು ಅರಮನೆಯ ವೀಕ್ಷಣೆಗೆ ಬರುವ ಬರುವ ವಿದೇಶಿ ಪ್ರವಾಸಿಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತಿದ್ದು, ಪ್ರವಾಸೋದ್ಯಮದ ಅಭಿವೃದ್ಧಿಗೆ ಹಿನ್ನಡೆ ಆಗುವ ಆತಂಕ ಎದುರಾಗಿದೆ.

ಮೈಸೂರು ಅರಮನೆಗೆ ಕಳೆದ 5 ವರ್ಷಗಳಿಂದ ವಿದೇಶಿ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಮುಖವಾಗಿದ್ದು, ಪ್ರವಾಸೋದ್ಯಮವನ್ನೇ ನಂಬಿ ಬದುಕುವ ಇಲ್ಲಿನ ವ್ಯಾಪಾರಿಗಳು, ಗೈಡ್​​ಗಳು, ಟ್ರಾವೆಲ್ ಕಂಪನಿ ಏಜೆಂಟರು, ಹೋಟೆಲ್ ಮಾಲೀಕರು ಸೇರಿದಂತೆ ಹಲವರಿಗೆ ಈಗ ಆತಂಕ ಎದುರಾಗಿದೆ.

ಅರಮನೆಗೆ ಬರುವ ವಿದೇಸಿ ಪ್ರವಾಸಿಗರ ಸಂಖ್ಯೆಯಲ್ಲಿ ಭಾರಿ ಇಳಿಕೆ

ಮುಖ್ಯವಾಗಿ ನೋಟ್ ಬ್ಯಾನ್ ಆದ ನಂತರ ಹೆಚ್ಚಾಗಿ ವಿದೇಶಿ ಪ್ರವಾಸಿಗರು ಮೈಸೂರಿಗೆ ಬರುವುದು ಕಡಿಮೆ ಆಗಿದೆ. ಜೊತೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೈಸೂರಿನ ಪ್ರವಾಸೋದ್ಯಮದ ಪ್ರಚಾರ ಇಲ್ಲ ಹಾಗೂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಇಲ್ಲಿ ಇಲ್ಲ. ಆದ್ದರಿಂದ ಹೆಚ್ಚಾಗಿ ವಿದೇಶಿ ಪ್ರವಾಸಿಗರು ಕೇರಳ ಹಾಗೂ ಗೋವಾಗೆ ಬಂದು ಹೊರಟು ಹೋಗುತ್ತಾರೆ. ಅಂತರ್​​ ರಾಜ್ಯ ವಾಹನಗಳಿಗೆ ಪ್ರವೇಶ ತೆರಿಗೆಯನ್ನು ಹೆಚ್ಚಿಸಿರುವುದು ಪ್ರಮುಖ ಕಾರಣಗಳಲ್ಲಿ ಒಂದು ಎನ್ನುತ್ತಾರೆ ಸ್ಥಳೀಯರು.

2012-13ರಲ್ಲಿ 80,000 ವಿದೇಶಿ ಪ್ರವಾಸಿಗರು ಮೈಸೂರು ಅರಮನೆಗೆ ಭೇಟಿ ನೀಡಿದ್ದರು. ಆದ್ರೆ 2018-19ರಲ್ಲಿ ಕೇವಲ 48,000 ಜನ ವಿದೇಶಿ ಪ್ರವಾಸಿಗರು ಮಾತ್ರ ಭೇಟಿ ನೀಡಿದ್ದಾರೆ. ಅಂದರೆ ಶೇ. 40ರಷ್ಟು ವಿದೇಶಿ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ.

ವೆಬ್​ಸೈಟ್​ ಸ್ಥಗಿತ

ಸಾಮನ್ಯವಾಗಿ ವಿದೇಶಿ ಪ್ರವಾಸಿಗರು ವೆಬ್​ಸೈಟ್ ಮೂಲಕ​ ಮಾಹಿತಿ ತಿಳಿದುಕೊಂಡು ಪ್ರವಾಸಕ್ಕೆ ಸಜ್ಜಾಗುತ್ತಾರೆ.‌ ಆದ್ರೆ ಮೈಸೂರು ಪ್ರವಾಸಿ ತಾಣಗಳ ಕುರಿತು ಮಾಹಿತಿ ನೀಡಬೇಕಾದ ವೆಬ್​ಸೈಟ್​ ಸ್ಥಗಿತಗೊಂಡು ಹಲವು ತಿಂಗಳೇ ಆದರೂ ಈ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ. ಇನ್ನು ಅರಮನೆಯ ಪ್ರವೇಶಕ್ಕೆ ಆನ್​ಲೈನ್​ ಟಿಕೆಟ್ ಖರೀದಿ ಇಲ್ಲ. ವಿದೇಶಿ ಪ್ರವಾಸಿಗರು ಕ್ಯೂನಲ್ಲೇ ನಿಂತು ಟಿಕೆಟ್ ಖರೀದಿ ಮಾಡಬೇಕು. ಇದರಿಂದ ಅರಮನೆ ಪ್ರವೇಶಕ್ಕೆ ಅಷ್ಟೊಂದು ಆಸಕ್ತಿ ತೋರುತ್ತಿಲ್ಲ ಎನ್ನಲಾಗಿದೆ.

Intro:ಮೈಸೂರು: ವಿಶ್ವ ವಿಖ್ಯಾತ ಮೈಸೂರು ಅರಮನೆಯ ವೀಕ್ಷಣೆಗೆ ಬರುವ ಬರುವ ವಿದೇಶಿ ಪ್ರವಾಸಿಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಇಳಿಮುಖ ವಾಗುತ್ತಿದ್ದು ಪ್ರವಾಸೋದ್ಯಮದ ಅಭಿವೃದ್ಧಿಗೆ ಹಿನ್ನಡೆ ಆಗುವ ಆತಂಕ ಎದುರಾಗಿದೆ.

Body:ದೇಶದಲ್ಲೇ ಅತಿ ಹೆಚ್ಚು ವಿದೇಶಿ ಪ್ರವಾಸಿಗರನ್ನು ಸೆಳೆಯುವ ಸ್ಥಳ ಎಂದು ಪ್ರಖ್ಯಾತಿಯಾಗಿದ್ದ ಮೈಸೂರು ಅರಮನೆ ಕಳೆದ ೫ ವರ್ಷಗಳಿಂದ ಇಲ್ಲಿಗೆ ಬರುವ ವಿದೇಶಿ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗುತ್ತಿದ್ದು ಪ್ರವಾಸೋದ್ಯಮವನ್ನೇ ನಂಬಿ ಬದುಕುವ ಇಲ್ಲಿನ ವ್ಯಾಪಾರಿಗಳು, ಗೈಡ್ ಗಳು, ಟ್ರಾವೆಲ್ ಕಂಪನಿ ಏಜೆಂಟರು, ಹೋಟೆಲ್ ಮಾಲೀಕರು ಸೇರಿದಂತೆ ಪ್ರವಾಸೋದ್ಯಮದ ಅವಲಂಬಿತವಾಗಿ ಬದುಕು ನಡೆಸುವ ಇಲ್ಲಿನ ಜನರಿಗೆ ಈಗ ಆತಂಕ. ಎದುರಾಗಿದೆ ಮುಖ್ಯವಾಗಿ ನೋಟ್ ಬ್ಯಾನ್ ಆದ ನಂತರ ಹೆಚ್ಚಾಗಿ ವಿದೇಶಿ ಪ್ರವಾಸಿಗರು ಮೈಸೂರಿಗೆ ಬರುವ ಸಂಖ್ಯೆ ಕಡಿಮೆ ಆಗಿದೆ.
ಜೊತೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಮೈಸೂರಿನ ಪ್ರವಾಸೋದ್ಯಮದ ಪ್ರಚಾರ ಇಲ್ಲ ಹಾಗೂ ಅಂತರರಾಷ್ಟ್ರೀಯ ಮಟ್ಟದ ವಿಮಾನ ನಿಲ್ದಾಣವು ಇಲ್ಲಿ ಇಲ್ಲ ಆದ್ದರಿಂದ ಹೆಚ್ಚಾಗಿ ವಿದೇಶಿ ಪ್ರವಾಸಿಗರು ಕೇರಳ ಹಾಗೂ ಗೋವಾಗೆ ಬಂದು ಹೊರಟು ಹೋಗುತ್ತಾರೆ. ಮುಖ್ಯವಾಗಿ ಅಂತರರಾಜ್ಯ ವಾಹನಗಳಿಗೆ ಪ್ರವೇಶ ತೆರಿಗೆಯನ್ನು ಹೆಚ್ವಿಸಿರುವುದು ಪ್ರಮುಖ ಕಾರಣಗಳಲ್ಲಿ ಒಂದು ಎನ್ನುತ್ತಾರೆ ಮೈಸೂರು ಟ್ರಾವೆಲ್ ಏಜೆಂಟ್ ಒಬ್ಬರು.

೨೦೧೨-೧೩ ರಲ್ಲಿ ೮೦,೦೦೦ ವಿದೇಶಿ ಪ್ರವಾಸಿಗರು ಮೈಸೂರು ಅರಮನೆಗೆ ಭೇಟಿ ನೀಡಿದ್ದರು, ಆದರೆ ೨೦೧೮-೧೯ ರಲ್ಲಿ ಕೇವಲ ೪೮,೦೦೦ ಜನ ವಿದೇಶಿ ಪ್ರವಾಸಿಗರು ಮಾತ್ರ ಭೇಟಿ ನೀಡಿದ್ದಾರೆ ಅಂದರೆ ಶೇಕಡಾ ೪೦% ರಷ್ಟು ವಿದೇಶಿ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ.

ವೆಬ್ಸೈಟ್ ಸ್ಥಗಿತ:- ಸಾಮನ್ಯವಾಗಿ ವಿದೇಶಿ ಪ್ರವಾಸಿಗರು ವೆಬ್ಸೈಟ್ ಮಾಹಿತಿ ತಿಳಿದುಕೊಂಡು ಪ್ರವಾಸಕ್ಕೆ ಸಜ್ಜಾಗುತ್ತಾರೆ.‌ಆದರೆ ಮೈಸೂರು ಪ್ರವಾಸಿ ತಾಣಗಳ ಕುರಿತು ಮಾಹಿತಿ ನೀಡಬೇಕಾದ ವೆಬ್ಸೈಟ್ ಕೆಟ್ಟು ಹಲವು ತಿಂಗಳೇ ಆದರೂ ಈ ಬಗ್ಗೆ ಯಾರು ತಲೆಕೆಡಿಸಿಕೊಳ್ಳುತ್ತಿಲ್ಲ. ಇನ್ನೂ ಅರಮನೆಯ ಪ್ರವೇಶಕ್ಕೆ ಆನ್ಲೈನ್ ಟಿಕೆಟ್ ಖರೀದಿ ಇಲ್ಲ ವಿದೇಶಿ ಪ್ರವಾಸಿಗರು ಕ್ಯೂನಲ್ಲೇ ನಿಂತು ಟಿಕೆಟ್ ಖರೀದಿ ಮಾಡಬೇಕು ಇದರಿಂದ ಅರಮನೆ ಪ್ರವೇಶಕ್ಕೆ ಅಷ್ಟೊಂದು ಆಸಕ್ತಿ ತೋರುತ್ತಿಲ್ಲ ಎನ್ನಲಾಗಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.