ETV Bharat / state

ಶಿಥಿಲಗೊಂಡ ದೇವರಾಜ ಮಾರುಕಟ್ಟೆ ನೆಲಸಮಕ್ಕೆ ಪಾಲಿಕೆಯಿಂದ ಪ್ರಸ್ತಾವ - mysore latest news

ಪಾರಂಪರಿಕ ಕಟ್ಟಡವಾದ ದೇವರಾಜ ಮಾರುಕಟ್ಟೆ ಶಿಥಿಲಗೊಂಡು ಕೆಟ್ಟ ಪರಿಸ್ಥಿತಿಯಲ್ಲಿದ್ದು, ಇದನ್ನು ತುರ್ತಾಗಿ ಒಡೆದು ಬೇರೆ ಕಟ್ಟಡ ಕಟ್ಟಬೇಕು ಎಂದು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ಮೈಸೂರು ಮಹಾನಗರ ಪಾಲಿಕೆ ಸಿದ್ಧತೆ ನಡೆಸಿದೆ.

decision to demolish Devaraja market
ಶಿಥಿಲಗೊಂಡ ದೇವರಾಜ ಮಾರುಕಟ್ಟೆ ನೆಲಸಮಕ್ಕೆ ಪಾಲಿಕೆಯಿಂದ ಸರ್ಕಾರಕ್ಕೆ ಪ್ರಸ್ತಾವ
author img

By

Published : Feb 8, 2020, 1:35 PM IST

ಮೈಸೂರು: ಪಾರಂಪರಿಕ ಕಟ್ಟಡವಾದ ದೇವರಾಜ ಮಾರುಕಟ್ಟೆ ಶಿಥಿಲಗೊಂಡು ಕೆಟ್ಟ ಪರಿಸ್ಥಿತಿಯಲ್ಲಿದ್ದು, ಇದನ್ನು ತುರ್ತಾಗಿ ಒಡೆದು ಬೇರೆ ಕಟ್ಟಡ ಕಟ್ಟಬೇಕು ಎಂದು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ಮೈಸೂರು ಮಹಾನಗರ ಪಾಲಿಕೆ ಸಿದ್ಧತೆ ನಡೆಸಿದೆ.

ದೇವರಾಜ ಮಾರುಕಟ್ಟೆ

ಮೈಸೂರಿನ ಪಾರಂಪರಿಕ ಕಟ್ಟಡಗಳಲ್ಲಿ ಒಂದಾದ ದೇವರಾಜ ಮಾರುಕಟ್ಟೆ ಶಿಥಿಲಗೊಂಡಿದ್ದು, ಯಾವಾಗ ಬೇಕಾದರೂ ಬೀಳುವ ಸ್ಥಿತಿಯಲ್ಲಿದೆ. ಅದನ್ನು ಒಡೆದು ಬೇರೆ ಕಟ್ಟಡ ಕಟ್ಟುವುದನ್ನು ಬಿಟ್ಟರೆ ಬೇರೆ ದಾರಿಯೇ ಇಲ್ಲ ಎಂದು ಮೇಯರ್ ತಸ್ನೀಂ ತಿಳಿಸಿದ್ದಾರೆ. ಅಲ್ಲದೇ ಈ ಹಿಂದೆ ಮಾರುಕಟ್ಟೆಯಲ್ಲಿ ಅನೇಕ ವಿದ್ಯುತ್ ಅವಘಡಗಳು ಆಗಿವೆ, ಕೆಲವು ಭಾಗಗಳಲ್ಲಿ ಕಟ್ಟಡ ಕುಸಿದು ಹಾನಿ ಸಹ ಆಗಿದ್ದು ಶೀಘ್ರವೇ ಈ ಮಾರುಕಟ್ಟೆಯ ಮರು ನಿರ್ಮಾಣದ ಸಂಬಂಧ ಚರ್ಚೆ ಮಾಡಲಾಗುತ್ತದೆ ಎಂದರು.

ಈ ಬಗ್ಗೆ ಮಾತನಾಡಿದ ಮೇಯರ್ ತಸ್ನೀಂ, ಮುಂದಿನ ಕೌನ್ಸಿಲ್ ಸಭೆವರೆಗೂ ಕಾಯದೇ ಮುಂದಿನ ಸೋಮವಾರ ಮಾರುಕಟ್ಟೆಯನ್ನು ತುರ್ತಾಗಿ ಒಡೆದು ಬೇರೆ ಕಟ್ಟಿ ಎಂದು ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲಾಗುವುದು ಎಂದು ಹೇಳಿದರು. ದೇವರಾಜ ಮಾರುಕಟ್ಟೆಯ ಮಳಿಗೆದಾರರಿಗೆ ವ್ಯಾಪಾರಕ್ಕೆ ಎಲ್ಲಿ ಜಾಗ ನೀಡಬೇಕೆಂಬ ವಿಚಾರದ ಬಗ್ಗೆ ಸಲಹಾ ಸಮಿತಿಯ ಸಭೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮೇಯರ್ ಅಭಿಪ್ರಾಯಪಟ್ಟಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.