ETV Bharat / state

ಮೈಸೂರು: ಕಚುವಿನಹಳ್ಳಿ ಅರಣ್ಯ ಪ್ರದೇಶದಲ್ಲಿ ಗಂಡು ಹುಲಿ ಸಾವು - Nagarhole National Park

ಕಚುವಿನಹಳ್ಳಿ ಅರಣ್ಯ ಪ್ರದೇಶದಲ್ಲಿ ಗಂಡು ಹುಲಿಯೊಂದು ಸಾವನ್ನಪ್ಪಿದ್ದು, ಮೃತ ಹುಲಿಯ ದೇಹದ ಮಾದರಿಗಳನ್ನು ಸಿಸಿಎಂಬಿಗೆ ಕಳುಹಿಸಿಕೊಡಲಾಗಿದೆ.

ಹುಲಿ
tiger
author img

By

Published : Sep 18, 2021, 7:19 AM IST

ಮೈಸೂರು: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಗಂಡು ಹುಲಿಯೊಂದು ಮೃತಪಟ್ಟಿರುವ ಘಟನೆ ನಡೆದಿದೆ.

ಹುಣಸೂರು ವನ್ಯಜೀವಿ ವಲಯದ ಕಚುವಿನಹಳ್ಳಿ ಶಾಖೆಯ ಸಿಬ್ಬಂದಿ ಸಾಕಾನೆಗಳ ಸಹಾಯದಿಂದ ಕೂಂಬಿಂಗ್ ಕಾರ್ಯಾಚರಣೆ ಮಾಡುವಾಗ ಕಚುವಿನಹಳ್ಳಿ ಶಾಖೆಯ ಕಲ್ಲಾರಕೆರೆ ಹಿಂಭಾಗದಲ್ಲಿ ಹುಲಿ ಮೃತಪಟ್ಟಿರುವುದನ್ನ ನೋಡಿ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

tiger
ಹುಲಿ ಕಳೆಬರ

ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಮೃತ ಹುಲಿಯ ದೇಹದ ಮಾದರಿಗಳನ್ನು ಸಿಸಿಎಂಬಿಗೆ ಕಳುಹಿಸಿಕೊಟ್ಟಿದ್ದಾರೆ. ಅಲ್ಲಿಂದ ವರದಿ ಬಂದ ನಂತರ ಹುಲಿ ಸಾವಿಗೆ ನಿಖರ ಕಾರಣ ತಿಳಿಯಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.