ETV Bharat / state

ಡಿಸಿಪಿ ಡಾ. ಎ.ಎನ್.ಪ್ರಕಾಶ್‌ಗೌಡ ಪುನಃ ಮೈಸೂರಿಗೆ ವರ್ಗಾವಣೆ - ಡಿಸಿಪಿ ಎಂ.ಮುತ್ತುರಾಜ್ ವರ್ಗಾವಣೆ

ಮೈಸೂರು ನಗರ ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿಯಾಗಿ ಡಾ. ಎ.ಎನ್.ಪ್ರಕಾಶ್‌ಗೌಡ ಅವರು ಮತ್ತೆ ವರ್ಗಾವಣೆಯಾಗಿದ್ದು, ಡಿಸಿಪಿಯಾಗಿದ್ದ ಎಂ.ಮುತ್ತುರಾಜ್ ಅವರನ್ನು ಸ್ಥಳ ನಿಯುಕ್ತಿಗೊಳಿಸದೇ ರಾಜ್ಯ ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

DCP Dr. AN Prakashgowda, DCP M Muthuraj
ಡಿಸಿಪಿ ಡಾ. ಎ.ಎನ್.ಪ್ರಕಾಶ್‌ಗೌಡ, ಡಿಸಿಪಿ ಎಂ.ಮುತ್ತುರಾಜ್
author img

By

Published : Feb 13, 2020, 11:42 PM IST

ಮೈಸೂರು: ನಗರ ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿಯಾಗಿ ಡಾ. ಎ.ಎನ್.ಪ್ರಕಾಶ್‌ಗೌಡ ಅವರು ಮತ್ತೆ ವರ್ಗಾವಣೆಯಾಗಿದ್ದು, ಡಿಸಿಪಿಯಾಗಿದ್ದ ಎಂ.ಮುತ್ತುರಾಜ್ ಅವರನ್ನು ಸ್ಥಳ ನಿಯುಕ್ತಿಗೊಳಿಸದೇ ರಾಜ್ಯ ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಸಿಎಟಿ ಆದೇಶದ ಪತ್ರವನ್ನು ರಾಜ್ಯ ಸರ್ಕಾರದ ಕಾರ್ಯದರ್ಶಿಗಳಿಗೆ ರವಾನೆ ಮಾಡಲಾಗಿದ್ದು, ಸಿಎಟಿ ಆದೇಶದಂತೆ ಪ್ರಕಾಶ್‌ಗೌಡ ಅವರು ಮತ್ತೆ ಮೈಸೂರಿಗೆ ವರ್ಗಾವಣೆಯಾಗಿದ್ದಾರೆ. ಈ ಹಿಂದೇ ಡಿಸಿಪಿ ಮುತ್ತುರಾಜ್ ಸ್ಥಳಕ್ಕೆ ಪ್ರಕಾಶ್ ಗೌಡರನ್ನ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ಸರ್ಕಾರದ ಆದೇಶ ಪ್ರಶ್ನಿಸಿ ಸಿಎಟಿ ಮೊರೆ ಹೋಗಿದ್ದ ಡಿಸಿಪಿ ಮುತ್ತುರಾಜ್ ಅವರು ಜ. 2019 ಡಿಸೆಂಬರ್ 19ರಂದು ಸಿಎಟಿ ಮೊರೆ ಹೋಗಿ ವರ್ಗಾವಣೆ ಆದೇಶಕ್ಕೆ ತಡೆಯಾಜ್ಞೆ ತಂದಿದ್ದರು.

ಹಾಸನದ ಎಸ್‌ಪಿಯಾಗಿದ್ದ ಪ್ರಕಾಶ್‌ಗೌಡ ಅವರನ್ನು ಮೈಸೂರು ನಗರ ಡಿಸಿಪಿಯಾಗಿ ವರ್ಗಾವಣೆ ಮಾಡಿದಾಗ ಅಧಿಕಾರ ಸ್ವೀಕಾರಿಸಿದಾಗ, ಮುತ್ತುರಾಜ್ ಅವರು ಸಿಎಟಿಗೆ ಮೊರೆ ಹೋಗಿದ್ದ ಪರಿಣಾಮ ರಾಜ್ಯ ಸರ್ಕಾರ ಒಂದೇ ದಿನದಲ್ಲಿ ಮತ್ತೆ ವರ್ಗಾವಣೆ ಮಾಡಿತ್ತು. ಆದರೆ ಸ್ಥಳ ನಿಯುಕ್ತಿಗೊಳಿಸಿರಲಿಲ್ಲ.ಇದೀಗ ಮತ್ತೆ ಡಿಸಿಪಿಯಾಗಿ ಮೈಸೂರಿಗೆ ವರ್ಗಾವಣೆ ಮಾಡಲಾಗಿದೆ. ಮುತ್ತುರಾಜ್ ಅವರಿಗೆ ಸ್ಥಳ ನಿಯುಕ್ತಿ ಮಾಡಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.