ಮೈಸೂರು: ಅಂತೂ ಇಂತೂ ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಚುನಾವಣೆಗೆ ಮುಹೂರ್ತ ನಿಗದಿಯಾಗಿದೆ. ಆ.25ರಂದು ಮೇಯರ್ ಚುನಾವಣೆ ನಡೆಯಲಿದೆ.
ಅಂದು 12ಗಂಟೆಗೆ ಮೈಸೂರು ಮಹಾನಗರ ಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಚುನಾವಣೆ ನಡೆಯಲಿದ್ದು, ಲೋಕಸಭಾ ಸದಸ್ಯರು, ವಿಧಾನಪರಿಷತ್ ಸದಸ್ಯರು, ನಗರಪಾಲಿಕೆ ಸದಸ್ಯರುಗಳಿಗೆ ಸಭೆಯ ತಿಳುವಳಿಕೆ ಪತ್ರವನ್ನು ಜಾರಿಗೊಳಿಸಲಾಗಿದೆ.
ಚುನಾವಣೆ ಆರಂಭವಾಗುವ ಎರಡು ಗಂಟೆಗಳ ಮುಂಚಿತವಾಗಿ ಬೆಳಗ್ಗೆ 8ರಿಂದ 10ರವರೆಗೆ ಮೇಯರ್ ಸ್ಥಾನದ ಆಕಾಂಕ್ಷಿಗಳು ನಾಮಪತ್ರ ಸಲ್ಲಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮೈಸೂರು ಮಹಾನಗರ ಪಾಲಿಕೆಯ ವಾರ್ಡ್ ನಂಬರ್ 36 ಅಭ್ಯರ್ಥಿಯಾಗಿದ್ದ ರುಕ್ಮಿಣಿ ಮಾದೇಗೌಡ ಚುನಾವಣೆ ಸಂದರ್ಭದಲ್ಲಿ ನಾಮಪತ್ರ ಸಲ್ಲಿಸುವಾಗ ಸುಳ್ಳು ಆಸ್ತಿ ವಿವರ ಸಲ್ಲಿಸಿದ್ದರಿಂದ ಪಾಲಿಕೆ ಸದಸ್ಯತ್ವ ರದ್ದು ಮಾಡಲಾಯಿತು. ಇದರಿಂದ ಮೇಯರ್ ಸ್ಥಾನಕ್ಕೂ ಕುತ್ತು ಬಂದಿತ್ತು.