ಮೈಸೂರು: ದಸರಾ-2021ರ ಉನ್ನತ ಮಟ್ಟದ ಸಮಿತಿಯ ಸಭೆಯು ಸೆಪ್ಟೆಂಬರ್ 3 ರಂದು ಮುಖ್ಯಮಂತ್ರಿಯವರ ನೇತೃತ್ವದಲ್ಲಿ ವಿಧಾನಸೌಧದಲ್ಲಿ ನಡೆಯಲಿದೆ. ನಾಡಹಬ್ಬ ಮೈಸೂರು ದಸರಾ-2021 ಆಚರಣೆ ಸಂಬಂಧ ಪೂರ್ವಭಾವಿಯಾಗಿ ಚರ್ಚಿಸಲು ಉನ್ನತ ಮಟ್ಟದ ಸಮಿತಿಯ ಸಭೆ ನಡೆಯಲಿದ್ದು, ಮೈಸೂರು ಜಿಲ್ಲಾಧಿಕಾರಿ ಸೇರಿದಂತೆ ಉನ್ನತ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಸರಳ ಅಥವಾ ಅದ್ದೂರಿ ದಸರಾ? :
ಕೋವಿಡ್ ಹಿನ್ನೆಲೆಯಲ್ಲಿ ಕಳೆದ ವರ್ಷ ದಸರಾವನ್ನು ಸರಳ ಹಾಗೂ ಸಾಂಪ್ರದಾಯಿಕವಾಗಿ ಅರಮನೆ ಆವರಣದಲ್ಲಿ ಆಚರಿಸಲಾಗಿತ್ತು. ಈ ಬಾರಿಯೂ ಕೋವಿಡ್ ಮೂರನೇ ಅಲೆಯ ಆತಂಕವಿರುವ ಕಾರಣ ಯಾವ ರೀತಿ ಆಚರಿಸಬೇಕು ಎಂಬ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಿ ತಿರ್ಮಾನ ತೆಗೆದುಕೊಳ್ಳುವ ಸಾಧ್ಯತೆಯಿದೆ.
14 ಆನೆಗಳ ಆಯ್ಕೆ:
ಈ ಬಾರಿ ದಸರಾದಲ್ಲಿ ಪಾಲ್ಗೊಳ್ಳಲು ಅರಣ್ಯ ಇಲಾಖೆಯು 4 ವಿವಿಧ ಆನೆ ಶಿಬಿರಗಳಿಂದ ಅಭಿಮನ್ಯು, ಗೋಪಾಲಸ್ವಾಮಿ, ವಿಜಯ, ವಿಕ್ರಮ , ಧನಂಜಯ, ಪ್ರಶಾಂತ, ಗೋಪಿ, ಹರ್ಷ, ಲಕ್ಷ್ಮಣ, ಕಾವೇರಿ, ಚೈತ್ರಾ ಸೇರಿ 14 ಆನೆಗಳನ್ನು ಆಯ್ಕೆ ಮಾಡಿದೆ. ಅದರಲ್ಲಿ 11 ಗಂಡು ಹಾಗೂ 3 ಹೆಣ್ಣು ಆನೆಗಳೂ ಸೇರಿವೆ. ಸರಳ ದಸರಾ ಆಚರಣೆ ನಿರ್ಧಾರವಾದರೆ, 5ರಿಂದ 7 ಆನೆಗಳು ಮಾತ್ರ ನಾಡಹಬ್ಬದಲ್ಲಿ ಭಾಗವಹಿಸಲಿವೆ.
ಇದನ್ನೂ ಓದಿ: ಒಂದು ತಿಂಗಳಲ್ಲೇ 'ಸಿಂಪಲ್ ಸಿಎಂ' ಹೆಗ್ಗಳಿಕೆಗೆ ಪಾತ್ರರಾದ ಮುಖ್ಯಮಂತ್ರಿ ಬೊಮ್ಮಾಯಿ