ಮೈಸೂರು: ನಟ ದರ್ಶನ್ ಸಬ್ ರಿಜಿಸ್ಟ್ರಾರ್ ಕಚೇರಿಗೆ ಬರುತ್ತಿದ್ದಂತೆ ಅಭಿಮಾನಿಗಳು ಜೈಕಾರ ಕೂಗಿ 'ದರ್ಶನ' ಪಡೆಯಲು ಮುಗಿಬಿದ್ದರು. ತಿ.ನರಸೀಪುರ ತಾಲೂಕಿನಲ್ಲಿರುವ ಸಬ್ ರಿಜಿಸ್ಟ್ರಾರ್ ಕಚೇರಿಗೆ ನಟ ದರ್ಶನ್ ಯಾವುದೋ ಆಸ್ತಿ ನೋಂದಣಿ ವಿಚಾರಕ್ಕೆ ಬಂದಿದ್ದರು. ದರ್ಶನ್ ಬರುತ್ತಿದ್ದ ವಿಷಯ ತಿಳಿದು ಅಭಿಮಾನಿಗಳು ಸಬ್ ರಿಜಿಸ್ಟ್ರಾರ್ ಆಫೀಸ್ ಮುಂದೆ ಜಮಾಯಿಸಿದ್ದಾರೆ.
ಈ ವೇಳೆ ದರ್ಶನ್, ಅಭಿಮಾನಿಗಳತ್ತ ಕೈ ಬೀಸಿ ತೆರಳಿದ್ದಾರೆ. ದರ್ಶನ್ ಸಬ್ ರಿಜಿಸ್ಟ್ರಾರ್ ಆಫೀಸ್ ಗೆ ಬಂದು ಹೋಗುವವರೆಗೂ ಸಾರ್ವಜನಿಕರನ್ನ ಒಳ ಬಿಡದೇ, ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದರು.
ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ 'ದೊಡ್ಮನೆ ಆಸ್ತಿ' ವಿಚಾರವಾಗಿ ವಾಕ್ಸಮರ ನಡೆದಿತ್ತು. ಈ ವಿಚಾರವಾಗಿ ಬೆಂಗಳೂರಿಗೆ ತೆರಳಿದ್ದ ದರ್ಶನ್, ಇಂದು ಮೈಸೂರಿನ ಸಬ್ರಿಜಿಸ್ಟ್ರಾರ್ ಕಚೇರಿಗೆ ಆಗಮಿಸಿದ್ದರು.