ಮೈಸೂರು: ದಸರಾ ಮಹೋತ್ಸವದ ನಿಮಿತ್ತ ಅಂಬಾವಿಲಾಸ ಅರಮನೆ ಆವರಣದ ಮುಂಭಾಗದ ಸಾಂಸ್ಕೃತಿಕ ವೇದಿಕೆಯಲ್ಲಿ ಸೆ. 26 ರಿಂದ ಅ.3ರವರೆಗೆ (7 ದಿನ) ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಅದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಮೈಸೂರು ದಸರಾದ ಪ್ರಮುಖ ಆಕರ್ಷಣೆ ಅಂಬಾವಿಲಾಸ ಅರಮನೆಯ ಮುಂಭಾಗದ ವೇದಿಕೆಯಲ್ಲಿ ನಡೆಯುವ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು. ಇದರಲ್ಲಿ ಸ್ಥಳೀಯ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಕಲಾವಿದರು ಭಾಗವಹಿಸುತ್ತಾರೆ. ಈ ಕಾರ್ಯಕ್ರಮ ದಸರಾದ ಪ್ರಮುಖ ಆಕರ್ಷಣೆಯಾಗಿದೆ.
ಕಾರ್ಯಕ್ರಮದ ವಿವರ ಇಲ್ಲಿದೆ:
ಸೆಪ್ಟೆಂಬರ್ 26: ಯದುನಾಥ್ ಮತ್ತು ಗುರುರಾಜ್ ತಂಡದಿಂದ ನಾದಸ್ವರ ಕಾರ್ಯಕ್ರಮ, ವೀರಭದ್ರ ಕುಣಿತ-ಕಿರಾಳು ಮಹೇಶ ಮತ್ತು ತಂಡದಿಂದ, ಸಪ್ತಸ್ವರ ಕಲಾ ತಂಡದಿಂದ ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮ, ಬೆಂಗಳೂರಿನ ಕ್ರಿಯೇಷನ್ ತಂಡದಿಂದ ನೃತ್ಯರೂಪಕ ಮತ್ತು ಎಚ್.ಆರ್. ಲೀಲಾವತಿ ಅವರಿಂದ ಸುಗಮ ಸಂಗೀತ ಕಾರ್ಯಕ್ರಮವಿದೆ. ಸೆ.26 ರ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ.
ಸೆಪ್ಟೆಂಬರ್ 27: ಕಂಸಾಳೆ ಮಹೇಶ್ ಮತ್ತು ತಂಡದಿಂದ ಕಂಸಾಳೆ, ಇಂದೂ ನಾಗರಾಜು ಮತ್ತು ಲಕ್ಷ್ಮಿ ನಾಗರಾಜು ತಂಡದಿಂದ ಭಕ್ತಿ ಸಂಗೀತ, ಲಯಾಭಿನಯ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ನೃತ್ಯರೂಪಕ-ಲಲಿತಾರ್ಣವ, ವಿದ್ವಾನ್ ಸಂದೀಪ್ ನಾರಾಯಣ್ ಅವರಿಂದ ಕರ್ನಾಟಕ ಶಾಸ್ತ್ರೀಯ ಕಾರ್ಯಕ್ರಮ ನಡೆಯಲಿದೆ.
ಸೆಪ್ಟೆಂಬರ್ 28: ಕರ್ನಾಟಕ ಕಲಾಶ್ರೀ ವಿದ್ವಾನ್ ಸಿ.ರಾಮದಾಸ್ ಅವರಿಂದ ಹಾರ್ಮೋನಿಯಂ ಕಾರ್ಯಕ್ರಮ, ಪಂಡಿತ್ ಗಣಪತಿ ಭಟ್ ಹಾಸಣಗಿ ದಾಸರ ಪದ ಪ್ರಸ್ತುತ ಕಾರ್ಯಕ್ರಮ, ಸತ್ಯನಾರಾಯಣರಾಜು ಮತ್ತು ತಂಡದಿಂದ ರಾತ್ರಿ ಭರತನಾಟ್ಯ, ಮುಂಬೈ ನ ಉಸ್ತಾದ್ ಫಜಲ್ ಖುರೇಷಿ ಅವರಿಂದ ತಬಲಾ ಕಾರ್ಯಕ್ರಮಗಳು ಜರುಗಲಿವೆ.
ಸೆಪ್ಟೆಂಬರ್ 29: ಪೊಲೀಸ್ ಬ್ಯಾಂಡ್, ಪಂಡಿತ್ ವೆಂಕಟೇಶ್ ಕುಮಾರ್ ಅವರಿಂದ ವಚನ ಗಾಯನ, ಮಧುಲಿತ ಮಹೋಪಾತ್ರ ಮತ್ತು ತಂಡದಿಂದ ಒಡಿಸ್ಸಿ ನೃತ್ಯ, ಬೆಂಗಳೂರಿನ ಚಕ್ರ ಫೋನಿಕ್ಸ್ ತಂಡದಿಂದ ವಿಶ್ವ ಸಂಗೀತ (ಕರ್ನಾಟಕ ವಾದ್ಯ ಸಂಗೀತಗಳ ಸಮ್ಮಿಲನ) ಕಾರ್ಯಕ್ರಮಗಳು ಇರಲಿವೆ.
ಸೆಪ್ಟೆಂಬರ್ 30: ಜ್ಞಾನಮೂರ್ತಿ ಮತ್ತು ತಂಡದಿಂದ ಭಕ್ತಿ ಸಂಗೀತ, ಡಾ.ಸುಕನ್ಯಾ ಪ್ರಭಾಕರ್ ಮತ್ತು ತಂಡದವರಿಂದ ವಾದ್ಯಗಳಲ್ಲಿ ಒಡೆಯರ ಕೃತಿಗಳನ್ನು ಪ್ರಸ್ತುತಪಡಿಸುವುದು. ಕೂಚಿಪುಡಿ ನೃತ್ಯ ಪ್ರದರ್ಶನ - ರೂಪಾ ರಾಜೇಶ ಮತ್ತು ತಂಡದವರಿಂದ, ಕೋಲ್ಕತ್ತಾದ ವಿದುಷಿ ಕೌಶಿಕಿ ಚಕ್ರವರ್ತಿ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಪ್ರಸ್ತುತ ಪಡಿಸಲಿದ್ದಾರೆ.
ಅಕ್ಟೋಬರ್ 1: ಪನ್ನಗ ವಿಜಯಕುಮಾರ್, ವೇದವ್ಯಾಸ ಸೇವಾ ಟ್ರಸ್ಟ್ ಅವರಿಂದ ಜಾನಪದ ಗಾಯನ, ಟಿ.ಎಸ್.ನಾಗಾಭರಣ, ಬೆನಕ ತಂಡದಿಂದ ರಂಗಗೀತೆಗಳು, ಪೊಲೀಸ್ ಬ್ಯಾಂಡ್ ಮಾಸ್ ಬ್ಯಾಂಡ್, ಬೆಂಗಳೂರಿನ ಮನೋ ಮ್ಯೂಸಿಕ್ ಲೈನ್ಸ್- ಸಿತಾರ್ ಸಿಂಪೋನಿ ಕಾರ್ಯಕ್ರಮ ನಡೆಯಲಿದೆ.
ಅಕ್ಟೋಬರ್ 2: ಅಕ್ಟೋಬರ್ 2 ರಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯ ವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ನಂತರ ಸಂಜೆ 6ರಿಂದ ಕಂಬದ ರಂಗಯ್ಯ ನೇತೃತ್ವದಲ್ಲಿ ವಿವಿಧ ಕಲಾವಿದರಿಂದ ಜನಪದ ಸಂಗೀತ ಕಾರ್ಯಕ್ರಮ, ಕಿರುತೆರೆ ಕಲಾವಿದೆ ರೂಪಿಕಾ ಮತ್ತು ವಂದನಾ ಸಾರಥ್ಯದಲ್ಲಿ ನವಶಕ್ತಿ ವೈಭವ ನೃತ್ಯರೂಪಕ ಕಾರ್ಯಕ್ರಮ, ಮನೋಜ್ ವಶಿಷ್ಠ ಮತ್ತು ಅರುಂಧತಿ ವಶಿಷ್ಠ ತಂಡದಿಂದ ಸಂಗೀತ ವೈವಿಧ್ಯವಿದೆ ಕಾರ್ಯಕ್ರಮಗಳು ಜರುಗಲಿವೆ.
ಅಕ್ಟೋಬರ್ 3: ವಿಶೇಷ ವ್ಯಕ್ತಿಗಳು ಹಾಗೂ ಅಂಗವಿಕಲರಿಂದ ಕಾರ್ಯಕ್ರಮ, ಗಡುಬಗೆರೆ ಮುನಿರಾಜು ಅವರಿಂದ ಜನಪದ ಸಂಗೀತ, ಸ್ಥಳೀಯ ಕಲಾವಿದರಿಂದ ಪಾರಂಪರಿಕ ನೃತ್ಯ ಸಮ್ಮಿಲನ, ಮುಂಬೈನ ಪದ್ಮಶ್ರೀ ಅನುಪ್ ಜಲೋಟ ಅವರಿಂದ ಗಜಲ್ ಕಾರ್ಯಕ್ರಮ ಸೇರಿದಂತೆ ಸತತ 7 ದಿನಗಳ ಕಾಲ ಸಾಂಸ್ಕೃತಿಕ ಕಲಾ ಕಾರ್ಯಕ್ರಮಗಳು ನಡೆಯಲಿವೆ. ಗಣಪತಿ ಭಟ್ ಹಾಸಣಗಿ, ಕರ್ನಾಟಕ ವಾದ್ಯ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ.
ಇದನ್ನೂ ಓದಿ: ಮೈಸೂರು: ವೃಶ್ಚಿಕ ಲಗ್ನದಲ್ಲಿ ರತ್ನಖಚಿತ ಸಿಂಹಾಸನ ಜೋಡಣೆ ಕಾರ್ಯ ಪೂರ್ಣ