ಮೈಸೂರು: ಮೋದಿ ಸೂರ್ಯನ ಹಾಗೆ ಪ್ರಜ್ವಲಿಸುತ್ತಿರುವವರು. ಅವರನ್ನು ಟೀಕಿಸಿದರೆ ಆಕಾಶಕ್ಕೆ ಉಗಿದಂತೆ. ಅದು ತಿರುಗಿ ಉಗಿದವರ ಮೇಲೆಯೇ ಬೀಳುತ್ತದೆ ಎಂದು ಸಂಸದ ಪ್ರತಾಪಸಿಂಹ ಹೇಳಿದ್ದಾರೆ.
ಕೊರೊನಾ 2ನೇ ಅಲೆ ವ್ಯಾಪಕವಾಗಿ ಹರಡುತ್ತಿರುವುದರಿಂದ ಮೋದಿ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಟೀಕೆ ವ್ಯಕ್ತವಾಗುತ್ತಿರುವ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಮೋದಿ ಅವರು ದೇ ದೀಪ್ಯಮಾನವಾಗಿ ವಿರಾಜಿಸುತ್ತಿರುವ ಸೂರ್ಯನ ತರ. ಸೂರ್ಯ ನೋಡಿ ಉಗಿದರೆ, ಆ ಉಗುಳು ಅವರ ಮುಖಕ್ಕೆ ಬೀಳುತ್ತೆ ಎಂದರು.
ಉದ್ಯಮಿ ವಿಜಯಸಂಕೇಶ್ವರ್ ಅವರು ನಿಂಬೆಹಣ್ಣಿನ ರಸ ಕೊರೊನಾಗೆ ಚಿಕಿತ್ಸೆ ಅಂತ ಹೇಳಿಲ್ಲ. ಅವರ ಬಗ್ಗೆ ಹುಳುಕು ಹುಡುಕುವವರು ಹುಡುಕಲಿ. ಅವರು ಕನ್ನಡ ಪತ್ರಿಕೋದ್ಯಮದ ದಿಕ್ಕು ಬದಲಾಯಿಸಿದ ಧೀಮಂತ ವ್ಯಕ್ತಿ ಎಂದರು.