ETV Bharat / state

ಎರಡು ಗುಂಪುಗಳ ನಡುವೆ ಗಲಾಟೆ: ಯುವಕನ ಹತ್ಯೆ - yuvabrigade worker killed in mysuru

ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದ್ದು ಯುವಕನನ್ನು ಹತ್ಯೆಗೈದಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

crime-youth-murdered-in-mysuru
ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಗಲಾಟೆ : ಯುವಕನ ಹತ್ಯೆ
author img

By

Published : Jul 10, 2023, 8:15 AM IST

Updated : Jul 10, 2023, 3:05 PM IST

ಮೈಸೂರು : ಎರಡು ಗುಂಪುಗಳ ನಡುವಿನ ಗಲಾಟೆ ಯುವಕನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ನರಸೀಪುರ ಪಟ್ಟಣದ ಶ್ರೀರಾಂಪುರ ಕಾಲೋನಿಯಲ್ಲಿ ಭಾನುವಾರ ತಡರಾತ್ರಿ ನಡೆದಿದೆ. ಕೊಲೆಯಾದ ಯುವಕನನ್ನು ನರಸೀಪುರ ಪಟ್ಟಣದ ಶ್ರೀರಾಂಪುರ ಕಾಲೋನಿ ನಿವಾಸಿ ವೇಣುಗೋಪಾಲ್ ನಾಯಕ್ (32) ಎಂದು ಗುರುತಿಸಲಾಗಿದೆ. ವೇಣುಗೋಪಾಲ್​ ಯುವ ಬ್ರಿಗೇಡ್​​ನ ಕಾರ್ಯಕರ್ತ ಎಂದು ತಿಳಿದುಬಂದಿದೆ.

ಶನಿವಾರ ಹನುಮ ಜಯಂತಿ ಆಚರಣೆ ವೇಳೆ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿತ್ತು. ಸ್ಥಳದಲ್ಲಿದ್ದ ಕೆಲವರು ಉಭಯ ಬಣಗಳನ್ನೂ ಸಮಾಧಾನಪಡಿಸಿದ್ದರು. ಇದಾದ ನಂತರ ಮತ್ತೆ ಗಲಾಟೆ ನಡೆದು ಓರ್ವನ ಕೊಲೆ ನಡೆದಿದೆ.

ಸ್ಥಳಕ್ಕೆ ಡಿವೈಎಸ್ ಪಿ. ಗೋವಿಂದರಾಜು, ನರಸೀಪುರ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದು, ತನಿಖೆ ಆರಂಭಿಸಿದ್ದಾರೆ. ಪೊಲೀಸರು ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದಾರೆ. ಮೃತದೇಹವನ್ನು ನರಸೀಪುರ ಸಾರ್ವಜನಿಕ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ನರಸೀಪುರ ಸಾರ್ವಜನಿಕ ಆಸ್ಪತ್ರೆಯ ಮುಂಭಾಗ ನೂರಾರು ಯುವಕರು ಜಮಾಯಿಸಿದ್ದರು.

ಆಸ್ಪತ್ರೆಗೆ ಚಕ್ರವರ್ತಿ ಸೂಲಿಬೆಲೆ ಭೇಟಿ : ನರಸೀಪುರ ಸಾರ್ವಜನಿಕ ಆಸ್ಪತ್ರೆಗೆ ಚಿಂತಕ ಚಕ್ರವರ್ತಿ ಸೂಲಿಬೆಲೆ ಭೇಟಿ ನೀಡಿದರು. ವೇಣುಗೋಪಾಲ್ ಕುಟುಂಬಕ್ಕೆ ಸಾಂತ್ವನ ಹೇಳಿದರು. ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸುವಂತೆ ಒತ್ತಾಯಿಸಿದರು. ಘಟನೆ ಸಂಬಂಧ ಟಿ.ನರಸೀಪುರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೆರವಣಿಗೆ ವೇಳೆ ಫೋಟೋ ವಿಚಾರವಾಗಿ ಶನಿವಾರ ಗಲಾಟೆಯಾಗಿತ್ತು. ಆಗ ನನ್ನ ಗಂಡ ಫೋಟೋ ತೆಗೆಯಿಸಿದ್ದರಿಂದ ಕೆಲವರು ಸಿಟ್ಟಾಗಿದ್ದರು. ಬಳಿಕ ಭಾನುವಾರ ಮಧ್ಯಾಹ್ನ ನನ್ನ ಗಂಡನನ್ನು ಕರೆದುಕೊಂಡು ಹೋಗಿ ಜಗಳವಾಡಿದ್ದರು. ನಂತರ ಸಂಜೆ ವೇಳೆ ರಾಜಿ ಸಂಧಾನದ ನೆಪದಲ್ಲಿ ಕರೆದೊಯ್ದು ಕೊಲೆ ಮಾಡಿದ್ದಾರೆ ಎಂದು ವೇಣುಗೋಪಾಲ್ ಪತ್ನಿ ಪೂರ್ಣಿಮಾ ಆರೋಪಿಸಿದ್ದಾರೆ.

ಇದನ್ನೂ ಓದಿ : Belagavi crime: ಬೆಳಗಾವಿಯಲ್ಲಿ ಡಬಲ್​​ ಮರ್ಡರ್.. ದುಷ್ಕರ್ಮಿಗಳಿಂದ ದಂಪತಿಯ ಬರ್ಬರ ಕೊಲೆ

ಟಿ. ನರಸೀಪುರ ಬಂದ್: ಯುವಬ್ರಿಗೇಡ್ ಕಾರ್ಯಕರ್ತನ ಕೊಲೆ ಪ್ರಕರಣ ಖಂಡಿಸಿ ಸ್ವಯಂ ಪ್ರೇರಿತ ಟಿ.ನರಸೀಪುರ ಬಂದ್​​ಗೆ ಕರೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಕೆಲ ಅಂಗಡಿಗಳು ಮುಚ್ಚಲಾಗಿತ್ತು. ಮುನ್ನೆಚ್ಚರಿಕಾ ಕ್ರಮವಾಗಿ ಅಹಿತಕರ ಘಟನೆ ಜರುಗದಂತೆ ಪೊಲೀಸರು ಬಿಗಿ ಬಂದೋಬಸ್ತ್ ಕಲ್ಪಿಸಿದ್ದಾರೆ.

ಇದನ್ನೂ ಓದಿ: ಮೈಸೂರು: ಮದುವೆಯಾಗುವುದಾಗಿ ನಂಬಿಸಿ 15ಕ್ಕೂ ಹೆಚ್ಚು ಮಹಿಳೆಯರಿಗೆ ವಂಚನೆ; ಆರೋಪಿ ಸೆರೆ

Last Updated : Jul 10, 2023, 3:05 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.