ETV Bharat / state

ಮೈಸೂರು: ಕೊಲೆ ಅಪರಾಧಿಗೆ ಜೀವಾವಧಿ ಶಿಕ್ಷೆ - etv bharat kannda

ಮಹಿಳೆಯನ್ನು ಹತ್ಯೆ ಮಾಡಿದ್ದ ಅಪರಾಧಿಗೆ ಹುಣಸೂರಿನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

crime-man-who-killed-a-woman-gets-life-imprisonment-in-mysuru
ಮೈಸೂರು: ಕೊಲೆ ಅಪರಾಧಿಗೆ ಜೀವಾವಧಿ ಶಿಕ್ಷೆ
author img

By

Published : Jul 28, 2023, 10:53 PM IST

ಮೈಸೂರು: ಹುಣಸೂರಿನಲ್ಲಿ ಮಹಿಳೆಯೊಬ್ಬಳನ್ನು ಕೊಲೆ ಮಾಡಿದ್ದ ವ್ಯಕ್ತಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಹುಣಸೂರಿನ ನರಸಿಂಹ ಸ್ವಾಮಿ ಬಡಾವಣೆ ನಿವಾಸಿ ಪ್ರವೀಣ್ ಕುಮಾರ್​ಗೆ ಹುಣಸೂರಿನಲ್ಲಿರುವ ಮೈಸೂರಿನ 8ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.

ಪ್ರಕರಣದ ವಿವರ: ಹುಣಸೂರು ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಮಂಜುನಾಥ ಬಡಾವಣೆಯ ನಿವಾಸಿ ರಾಮಕೃಷ್ಣಗೌಡ ಅವರು ತನ್ನ ಕುಟುಂಬದೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಅವರು ಆಯುರ್ವೇದಿಕ್ ವೆಸ್ಟೀಜ್ ಕಂಪನಿಯಲ್ಲಿ ಡಿಸ್ಟ್ರಿಬ್ಯೂಟರ್ ಆಗಿ ಕೆಲಸ ಮಾಡಿಕೊಂಡಿದ್ದರು. ಅದೇ ಕಂಪನಿಯಲ್ಲಿ ಹುಣಸೂರಿನ ನರಸಿಂಹ ಸ್ವಾಮಿ ಬಡಾವಣೆ ನಿವಾಸಿಯಾಗಿದ್ದ ಪ್ರವೀಣ್ ಕುಮಾರ್ ಕೆಲಸ ಮಾಡುತ್ತಿದ್ದ.

ಕೆಲಸದ ವಿಚಾರದಲ್ಲಿ ಆಗಾಗ್ಗೆ ಅಪರಾಧಿ ಪ್ರವೀಣ್ ಕುಮಾರ್, ರಾಮಕೃಷ್ಣ ಗೌಡರ ಮನೆಗೆ ಬಂದು ಊಟ ತಿಂಡಿ ಸೇವಿಸುತ್ತಿದ್ದ. ರಾಮಕೃಷ್ಣಗೌಡ ರವರು ಕೆಲಸದ ಮೇಲೆ ಬೇರೆ ಊರುಗಳಿಗೆ ಹೋದಾಗ ಪ್ರವೀಣ್ ಕುಮಾರ್ ರಾಮಕೃಷ್ಣ ಗೌಡರ ಮನೆಗೆ ಹೋಗಿ ಅವರ ಪತ್ನಿಯೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ. ಈ ವಿಚಾರವನ್ನು ತಿಳಿದ ರಾಮಕೃಷ್ಣಗೌಡ ಅವರು ಪ್ರವೀಣ್ ಕುಮಾರ್​ಗೆ ಅನೇಕ ಬಾರಿ ಬುದ್ಧಿವಾದ ಹೇಳಿದರೂ ಕೇಳದೇ ಪದೇ ಪದೆ ಈ ರೀತಿ ಮಾಡುತ್ತಿದ್ದರಿಂದ ರಾಮಕೃಷ್ಣಗೌಡ ತಮ್ಮ ಕಂಪನಿಯ ಹಿರಿಯರಿಗೆ ಈ ವಿಚಾರ ತಿಳಿಸಿ ಈ ಬಗ್ಗೆ ನ್ಯಾಯ ಪಂಚಾಯಿತಿ ಮಾಡಿ ಪ್ರವೀಣ್ ಕುಮಾರನನ್ನು ಕೆಲಸದಿಂದ ತೆಗೆಸಿದ್ದರು.

ಈ ವಿಚಾರವಾಗಿ ಪ್ರವೀಣ್​ ದ್ವೇಷವಿಟ್ಟುಕೊಂಡು ಪದೇ ಪದೆ ರಾಮಕೃಷ್ಣಗೌಡರ ಮನೆಗೆ ಹೋಗಿ ಯಾರೂ ಇಲ್ಲದ ಸಮಯದಲ್ಲಿ ಗಲಾಟೆ ಮಾಡುತ್ತಿದ್ದನು. 08-12-2017 ರಂದು ರಾಮಕೃಷ್ಣಗೌಡರ ಮನೆಯಲ್ಲಿ ಯಾರೂ ಇಲ್ಲದ ಸಮಯವನ್ನು ನೋಡಿಕೊಂಡು ಆರೋಪಿಯು ರಾಮಕೃಷ್ಣಗೌಡ ರವರ ಮನೆಗೆ ಹೋಗಿ, ಅವರ ಪತ್ನಿ ಜ್ಯೋತಿ ರವರೊಂದಿಗೆ ಅಸಭ್ಯವಾಗಿ ವರ್ತಿಸಿದಾಗ ಜ್ಯೋತಿ ಈ ಬಗ್ಗೆ ಆರೋಪಿ ಪ್ರವೀಣ್ ಕುಮಾರ್ ಅವರ ಮನೆಗೆ ಹೋಗಿ ಅವರ ತಂದೆ - ತಾಯಿಗೆ ನಿಮ್ಮ ಮಗ, ನಮ್ಮ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಬಂದು ನನಗೆ ತುಂಬಾ ತೊಂದರೆ ಮಾಡುತ್ತಾನೆ. ಅವನಿಗೆ ಸರಿಯಾಗಿ ಬುದ್ದಿ ಹೇಳಿ. ಇಲ್ಲದಿದ್ದರೆ ನಾನು ಪೊಲೀಸರಿಗೆ ದೂರು ಕೊಡುತ್ತೇನೆ ಎಂದು ಎಚ್ಚರಿಸಿ ಬಂದಿದ್ದರು.

09-12-2017 ರಂದು ಬೆಳಗ್ಗೆ ಸಮಯದಲ್ಲಿ ಜ್ಯೋತಿ ರವರು ಪ್ರವೀಣನ ಮನೆಯ ಹತ್ತಿರ ಹೋಗಿ ಗಲಾಟೆ ಮಾಡಿ ತಮ್ಮ ಮನೆಗೆ ಹಿಂದಿರುಗಿ ಬಂದಿದ್ದು, ಪ್ರವೀಣ್ ಈ ವಿಚಾರವನ್ನು ತಿಳಿದುಕೊಂಡು ಜ್ಯೋತಿರವರ ಮೇಲೆ ದ್ವೇಷವಿಟ್ಟುಕೊಂಡು ರಾಮಕೃಷ್ಣಗೌಡರ ಮನೆಗೆ ಹೋಗಿ ಅವರ ಮನೆಯ ಮಹಡಿಯ ಮೇಲೆ ಜ್ಯೋತಿಯನ್ನು ಕರೆದುಕೊಂಡು ಹೋಗಿ ಜಗಳ ತೆಗೆದು ಆಕೆಯು ಹಾಕಿಕೊಂಡಿದ್ದ ಚಿನ್ನದ ಮಾಂಗಲ್ಯ ಸರದಿಂದ ಕುತ್ತಿಗೆ ಬಿಗಿದು ಹಿಡಿದು ಕೊಲೆ ಮಾಡಿ ಅಲ್ಲಿಂದ ಪರಾರಿಯಾಗಿದ್ದ. ಈ ಕುರಿತು ಹುಣಸೂರು ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ತನಿಖೆ ನಡೆಸಿದ ಹುಣಸೂರು ಪಟ್ಟಣ ಪೊಲೀಸ್ ಠಾಣೆ ಪೊಲೀಸರು ಪ್ರವೀಣ್ ಕುಮಾರ್ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಹುಣಸೂರಿನ 8ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಪಾಟೀಲ್ ಮೋಹನಕುಮಾರ ಭೀಮನಗೌಡ ಅವರು ಪ್ರಕರಣದ ಪ್ರವೀಣ್ ಕುಮಾರ್ ಅಲಿಯಾಸ್ ಪ್ರವೀಣ್ ಮೇಲೆ ಹೊರಿಸಲಾದ ಆಪಾದನೆ ಸಾಬೀತಾಗಿದೆ ಎಂದು ಪರಿಗಣಿಸಿ‌, ಪ್ರವೀಣ್ ಕುಮಾರ್ ಅಲಿಯಾಸ್ ಪ್ರವೀಣ್​ಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಅದರೊಂದಿಗೆ 10 ಸಾವಿರ ರೂ. ದಂಡ ವಿಧಿಸಿದ್ದು, ದಂಡ ಪಾವತಿಸಲು ತಪ್ಪಿದಲ್ಲಿ ಮತ್ತೆ 3 ತಿಂಗಳ ಶಿಕ್ಷೆ ವಿಧಿಸಿ 28-07-2023 ರಂದು ತೀರ್ಪು ನೀಡಿದ್ದಾರೆ. ಈ ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕರಾದ ಕೆ.ಎಂ.ಸಿ.ಶಿವಶಂಕರಮೂರ್ತಿ ರವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.

ಇದನ್ನೂ ಓದಿ: ಬಾಗಲಕೋಟೆ: ಅತ್ಯಾಚಾರಿ ಅಪರಾಧಿಗೆ ಅಜೀವ ಜೀವಾವಧಿ ಶಿಕ್ಷೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.