ETV Bharat / state

ಭೂಮಿ ನಕಲಿ ದಾಖಲೆ ಸೃಷ್ಟಿಸಿ ಪರಿಹಾರ ಪಡೆದ ಕೇಸ್​: 16 ಜನರ ವಿರುದ್ಧ ದೂರು ದಾಖಲು, ಸರ್ಕಾರ ಸಿಐಡಿ ತನಿಖೆಗೆ ಆದೇಶ - ಕರ್ನಾಟಕ ಭೂ ಸುಧಾರಣೆ ಕಾಯಿದೆ

ಭೂಮಿಯ ನಕಲಿ ದಾಖಲೆ ಕೊಟ್ಟು ಕೆಐಎಡಿಬಿಯಿಂದ ಕೋಟ್ಯಂತರ ರೂಪಾಯಿ ಪರಿಹಾರ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದಿನ ತಹಸೀಲ್ದಾರ್ ನವೀನ್ ಜೋಸೆಫ್ ಸೇರಿ 16 ಜನರ ವಿರುದ್ಧ ಸಿಐಡಿ ತನಿಖೆಗೆ ಸರ್ಕಾರ ಆದೇಶ. ನಂಜನಗೂಡು ತಹಸೀಲ್ದಾರ್ ಶಿವಮೂರ್ತಿ ಅವರಿಂದ ಠಾಣೆಯಲ್ಲಿ ದೂರು ದಾಖಲು.

File a complaint against 16 people
16 ಜನರ ವಿರುದ್ಧ ದೂರು ದಾಖಲು
author img

By

Published : Dec 29, 2022, 6:08 PM IST

ಮೈಸೂರು : ನಂಜನಗೂಡು ತಾಲೂಕು ಹಿಮ್ಮಾವಿನಲ್ಲಿ ಕೆಐಎಡಿಬಿ ಸ್ವಾಧೀನ ಪಡಿಸಿಕೊಂಡ ಭೂಮಿಗೆ ನಕಲಿ ದಾಖಲೆ ಸೃಷ್ಟಿಸಿ ಪರಿಹಾರ ಪಡೆದಿದ್ದ 9 ಮಂದಿ ಹಾಗೂ ದಾಖಲೆಗಳನ್ನು ಪರಿಶೀಲಿಸದೇ ಕರ್ತವ್ಯ ಲೋಪವೆಸಗಿದ್ದ 7 ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಮೈಸೂರು ಜಿಲ್ಲಾಧಿಕಾರಿಗಳು ಆದೇಶಿಸಿದ ಹಿನ್ನೆಲೆಯಲ್ಲಿ ನಂಜನಗೂಡು ಪಟ್ಟಣದ ಠಾಣೆಯಲ್ಲಿ ದೂರು ದಾಖಲಾಗಿದೆ.

ಕ್ರಿಮಿನಲ್ ಕೇಸ್ : ಈ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿಗೆ ತನಿಖೆ ಮಾಡುವಂತೆ ಆದೇಶ ಮಾಡಿದ್ದು, ಅದಕ್ಕೆ ಪೂರಕವಾಗಿ ನಂಜನಗೂಡು ತಾಲೂಕಿನ ಹಿಂದಿನ ತಹಸೀಲ್ದಾರ್ ನವೀನ್ ಜೋಸೆಫ್ ಸೇರಿದಂತೆ 16 ಮಂದಿ ವಿರುದ್ದ ಕ್ರಿಮಿನಲ್ ಕೇಸ್ ದಾಖಲಾಗಿದೆ. ನಂಜನಗೂಡು ಹಾಲಿ ತಹಸೀಲ್ದಾರ್ ಶಿವಮೂರ್ತಿ ನೀಡಿದ ದೂರಿನನ್ವಯ ಪೋಲಿಸರು ಭೂ ನ್ಯಾಯ ಮಂಡಳಿ ಹಿಂದಿನ ಅಧ್ಯಕ್ಷ ಕೃಷ್ಣಮೂರ್ತಿ, ಭೂ ನ್ಯಾಯ ಮಂಡಳಿ ಸದಸ್ಯ ಕಾರ್ಯದರ್ಶಿ ಆಗಿದ್ದ ನಂಜನಗೂಡು ತಾಲೂಕಿನ ಹಿಂದಿನ ತಹಸೀಲ್ದಾರ್ ನವೀನ್ ಜೋಸೆಫ್, ಹಿಂದಿನ ಅಧಿಕಾರಿಗಳಾದ ಆರ್ ಆರ್ ಟಿ ಶಿರಸ್ತೇದಾರ್ ರಮೇಶ್ ಬಾಬು, ರಾಜಸ್ವ ನಿರೀಕ್ಷಕ ಶಿವರಾಜು, ಗ್ರಾಮ ಲೆಕ್ಕಿಗ ವೆಂಕಟೇಶ್ ಕರ್ತವ್ಯದಲ್ಲಿ ಲೋಪ ಎಸಗಿರುವುದಕ್ಕೆ ಅವರ ವಿರುದ್ಧ ದೂರು ದಾಖಲಿಸಿದೆ.

File a complaint against 16 people
16 ಜನರ ವಿರುದ್ಧ ದೂರು ದಾಖಲು

ಸುಳ್ಳು ದಾಖಲೆ ನೀಡಿ ಭೂ ಮಂಜೂರಾತಿ ಮಾಡಿಸಿಕೊಂಡಿರುವ ಪಿ. ಕೃಷ್ಣಾನಂದ ಗಿರಿ ಗೋಸ್ವಾಮಿ, ಭೀಷ್ಮ ಪಿತಾಮಹ ಅವರ ಪುತ್ರಿ ಶೋಭಾದೇವಿ, ಹೇಮಲತಾ, ನಿಷಾ ಶರ್ಮಾ, ಅಂಜನಾ ಶರ್ಮ, ವಿಜಯಲಕ್ಷ್ಮಿ, ಸುಳ್ಳು ವಂಶವೃಕ್ಷ ನೀಡಿ ಖಾತೆ ಮಾಡಿಸಿಕೊಂಡಿರುವ ಪ್ರತೀಪ್​ ಮಗ್ತು ಎಂಬುವವರ ವಿರುದ್ದ ದಂಡ ಸಂಹಿತೆ 406,409,420,465,468,471, 120ಬಿ,149,ಕರ್ನಾಟಕ ಲ್ಯಾಂಡ್, ರೆವಿನ್ಯೂ ಆಕ್ಟ್ 1964 ಸೆಕ್ಷನ್ 192 ರ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಭೂ ನ್ಯಾಯಮಂಡಳಿಯಲ್ಲಿ ಪ್ರಕರಣ ದಾಖಲು: ನಂಜನಗೂಡಿನ ತಾಲೂಕು ಚಿಕ್ಕಾಯ್ಯನ ಛತ್ರ ಹೋಬಳಿ ಹಿಮ್ಮವು ಗ್ರಾಮದ ಸರ್ವೆ ನಂಬರ್ 390 ರಿಂದ 422ರ ವರೆಗೆ ಮತ್ತು 424 ಜಮೀನುಗಳು ಮೂಲತಃ ಕೃಷ್ಣಾನಂದ ಗಿರಿ ಗೋಸ್ವಾಮಿ ಹೆಸರಿನಲ್ಲಿದೆ. ಕರ್ನಾಟಕ ಭೂ ಸುಧಾರಣೆ ಕಾಯಿದೆ ಜಾರಿಗೆ ಬಂದ ನಂತರ ಕೃಷ್ಣಾನಂದ ಗಿರಿ ಗೋಸ್ವಾಮಿಯವರು ಸರ್ಕಾರಕ್ಕೆ ಘೋಷಣಾ ಪತ್ರ ಸಲ್ಲಿಸಿದ್ದರು. ಅದರನ್ವಯ ಅವರ ಕುಟುಂಬಕ್ಕೆ ಜಮೀನು ನಿಗದಿ ಪಡಿಸುವ ಸಂಬಂಧ ಪ್ರಕರಣ ಭೂ ನ್ಯಾಯ ಮಂಡಳಿಯಲ್ಲಿ ದಾಖಲಾಗಿತ್ತು.

ಮಂಡಳಿಯು 1993 ಆಗಸ್ಟ್ 6ರಂದು ಕೃಷ್ಣಾನಂದ ಗಿರಿ ಗೋಸ್ವಾಮಿ, ಭೀಷ್ಮ ಪಿತಾಮಹ, ಶ್ರೀಮತಿ ಸತ್ಯಭಾಮ ಮತ್ತು ಕುಲ್ ದೀಪ್ ಪ್ರಕಾಶ್ ಅವರಿಗೆ , ತಲಾ 10ಯೂನಿಟ್ ನಂತೆ ಒಟ್ಟು 40ಯೂನಿಟ್ ಗಳನ್ನ ನಿಗದಿಪಡಿಸಿ ಆದೇಶ ಹೊರಡಿಸಿತ್ತು. ಈ ಆದೇಶವನ್ನು ರದ್ದು ಪಡಿಸಿದ ಹೈಕೋರ್ಟ್ ಮರು ವಿಚಾರಣೆ ನಡೆಸುವಂತೆ ಆದೇಶಿಸಿತ್ತು. ಭೂ ನ್ಯಾಯ ಮಂಡಳಿಯು ಮರು ವಿಚಾರಣೆ ನಡೆಸಿ , 1999 ಮೇ 28 ರಂದು ತನ್ನ ಹಿಂದಿನ ಆದೇಶವನ್ನು ಮತ್ತೆ ಹೊರಡಿಸಿತ್ತು.

ಆದೇಶ ರದ್ದು ಪಡಿಸಿದ್ದ ಹೈಕೋರ್ಟ್​: ಈ ಆದೇಶವನ್ನು ಕೂಡ ಹೈ ಕೋರ್ಟ್ 2006 ಡಿಸೆಂಬರ್ 18 ರಂದು ರದ್ದುಪಡಿಸಿ, ಮತ್ತೆ ಮರುವಿಚಾರಣೆ ನಡೆಸುವಂತೆ ಆದೇಶಿಸಿತ್ತು.ವಿಶೇಷವೆಂದರೆ ಈ ಪ್ರಕರಣವನ್ನ ಮತ್ತೆ ವಿಚಾರಣೆ ನಡೆಸಿದ ಭೂ ನ್ಯಾಯ ಮಂಡಳಿಯು, ಈ ಹಿಂದೆ ತಾನು ನಿಗದಿಪಡಿಸಿದ್ದ ಐವರ ಜತೆಗೆ ಭೀಷ್ಮ ಪಿತಾಮಹರ ಪುತ್ರಿಯರಾದ ಶೋಭಾದೇವಿ, ಹೇಮಲತಾ, ನಿಶಾ ಶರ್ಮ, ಅಂಜನಾ ಶರ್ಮ ಮತ್ತು ವಿಜಯಲಕ್ಷ್ಮಿ ಅವರಿಗೆ ತಲಾ 10ಯೂನಿಟ್ ನಂತೆ 90ಯೂನಿಟ್ ಗಳನ್ನು ಈ ಎಲ್ಲಾ 9 ಮಂದಿಗೆ ಮಂಜೂರು ಮಾಡಿತ್ತು. ಈ ಭೂಮಿಯನ್ನು ವಶಪಡಿಸಿಕೊಂಡಿದ್ದ ಕೆಐಎಡಿಬಿ ಇವರೆಲ್ಲರಿಗೂ ಭೂ ಪರಿಹಾರ ನೀಡಿತ್ತು.

ಲೆಕ್ಕ ನಿಯಂತ್ರಕರು ಆಕ್ಷೇಪ: 2015ರಲ್ಲಿ ಭಾರತ ಲೆಕ್ಕ ನಿಯಂತ್ರಕರು ಹಾಗೂ ಮಹಾ ಲೆಕ್ಕ ಪರಿಶೋಧಕರು ಅವರು ಆಕ್ಷೇಪ ವ್ಯಕ್ತಪಡಿಸಿ, ಅನರ್ಹ ವ್ಯಕ್ತಿಗಳಿಗೆ ಭೂ ಪರಿಹಾರ ನೀಡಲಾಗಿದೆ.ಎಂದು ತಿಳಿಸಿದ್ದರು, ಇದರನ್ವಯ ಈ ಪ್ರಕರಣವನ್ನ ಸಿ ಐ ಡಿ ತನಿಖೆಗೆ ಒಪ್ಪಿಸಿ ಸರಕಾರ ಇದೇ ಡಿಸೆಂಬರ್ 7ರಂದು ಆದೇಶ ಹೊರಡಿಸಿದೆ.
ಯಾವುದೇ ಪ್ರಕರಣವನ್ನ ಸಿಐಡಿ ತನಿಖೆ ನಡೆಸಬೇಕಾದರೆ, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಬೇಕಾಗುತ್ತದೆ. ಈ ಹಿನ್ನೆಲೆ ನಂಜನಗೂಡು ತಹಸೀಲ್ದಾರ್ ಶಿವಮೂರ್ತಿ ಅವರು ನಂಜನಗೂಡು ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಇದನ್ನೂಓದಿ:ಅಪ್ರಾಪ್ತರು ಕಾಲೇಜಿಗೆ ವಾಹನ ತಂದ್ರೆ ಪ್ರಾಂಶುಪಾಲರೇ ಹೊಣೆ.. ಪೋಷಕರು ಕಟ್ಟಬೇಕು ಭಾರೀ ದಂಡ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.