ETV Bharat / state

ಸಿನಿಮಾ ನೋಡಲು ಕೋವಿಡ್ ನೆಗೆಟಿವ್ ವರದಿ ಕಡ್ಡಾಯ: ಥಿಯೇಟರ್​ ಮಾಲೀಕರಿಂದ ತೀವ್ರ ವಿರೋಧ

ಸಿನಿಮಾ ನೋಡಲು ಕೋವಿಡ್ ನೆಗೆಟಿವ್ ವರದಿ ಕಡ್ಡಾಯ ಮಾಡಿರುವ ಮೈಸೂರು ಜಿಲ್ಲಾಧಿಕಾರಿ ಕ್ರಮಕ್ಕೆ ಥಿಯೇಟರ್​ ಮಾಲೀಕರಿಂದ ವಿರೋಧ ವ್ಯಕ್ತವಾಗಿದೆ.

Covid report Mandatory for theater in Mysur
ಸಿನಿಮಾ ನೋಡಲು ಕೋವಿಡ್ ವರದಿ ಕಡ್ಡಾಯ
author img

By

Published : Apr 8, 2021, 3:49 PM IST

ಮೈಸೂರು: ಮುಂದಿನ ಹತ್ತು ದಿನಗಳ ಕಾಲ ಸಿನಿಮಾ ನೋಡಲು ಬರುವವರಿಗೆ ಕೋವಿಡ್ ಪರೀಕ್ಷೆ ಕಡ್ಡಾಯ ಮಾಡಿರುವ ಜಿಲ್ಲಾಧಿಕಾರಿಯವರ ಕ್ರಮಕ್ಕೆ ಚಿತ್ರಮಂದಿರಗಳ ಮಾಲೀಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಏಪ್ರಿಲ್ 10ರಿಂದ 30ರವರೆಗೆ ಹಬ್ಬದ ರಜೆ ಇರುವುದರಿಂದ ಹೆಚ್ಚಿನ ಜನ ಸಿನಿಮಾ ಮಂದಿರಕ್ಕೆ ಬರಬಹುದು ಎಂಬ ಉದ್ದೇಶದಿಂದ ಈ 10 ದಿನಗಳ ಕಾಲ ಸಿನಿಮಾ ನೋಡಲು ಬರುವವರು ಕೋವಿಡ್ ನೆಗೆಟಿವ್ ವರದಿ ತರುವುದನ್ನು ಕಡ್ಡಾಯಗೊಳಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಇದಕ್ಕೆ ಚಿತ್ರಮಂದಿರಗಳ ಮಾಲೀಕರ ಸಂಘ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಓದಿ : ಕೋವಿಡ್​ ಉಲ್ಬಣ: ಮನೆ‌ ಮನೆಗೆ ತೆರಳಿ ಸರ್ವೇ ಕಾರ್ಯಕ್ಕೆ ಮುಂದಾದ ಬಿಬಿಎಂಪಿ

ಲಾಕ್​ಡೌನ್​ ಬಳಿಕ ಸಿನಿಮಾ ಮಂದಿರ ತೆರೆದು ಈಗ ತಾನೆ ಜನ ಥಿಯೇಟರ್​ ಕಡೆ ಬರಲು ಪ್ರಾರಂಭಿಸಿದ್ದಾರೆ. ಇದೀಗ ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ಸಿನಿಮಾ ನೋಡಲು ಬನ್ನಿ ಎಂದರೆ ಯಾರು ತಾನೆ ಬರುತ್ತಾರೆ. ಹಬ್ಬದ ದಿನಗಳಲ್ಲಿ‌ ಮತ್ತು ರಜಾ ದಿನಗಳಲ್ಲಿ ಸಿನಿಮಾ ನೋಡಲು ಹೆಚ್ಚು ಜನ ಬರುತ್ತಾರೆ. ಇಂತಹ ಸಂದರ್ಭದಲ್ಲಿ ಈ ರೀತಿಯ ಆದೇಶ ಸರಿಯಲ್ಲ. ಜಿಲ್ಲಾಧಿಕಾರಿಗಳು ಕೂಡಲೇ ಈ ಆದೇಶವನ್ನು ಮರುಪರಿಶೀಲನೆ ಮಾಡಿದರೆ ಒಳ್ಳೆಯದು ಎಂದು ಮೈಸೂರು ಚಿತ್ರಮಂದಿರ ಮಾಲೀಕರ ಸಂಘದ ಕಾರ್ಯದರ್ಶಿ ರಾಜಾ ರಾಮ್ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.