ETV Bharat / state

ಪತ್ನಿಯ ತಿಥಿ ದಿನವೇ ಪತಿಯೂ ಕೋವಿಡ್​ಗೆ ಬಲಿ: ಅನಾಥರಾದ ಮಕ್ಕಳು - ಗಂಗೋತ್ರಿ ಲೇಔಟ್​ ಮೈಸೂರು

ಪತ್ನಿ ಮೃತಪಟ್ಟ ಕೆಲವೇ ದಿನಗಳ ಅಂತರದಲ್ಲಿ ಪತಿಯೂ ಕೋವಿಡ್ ಸೋಂಕಿಗೆ ಬಲಿಯಾದ ಘಟನೆ ಮೈಸೂರಿನಲ್ಲಿ ನಡೆದಿದ್ದು, ದಂಪತಿಯ ಇಬ್ಬರು ಮಕ್ಕಳು ಅನಾಥರಾಗಿದ್ದಾರೆ.

Couple died due to Covid in Mysuru
ದಂಪತಿ ಸಾವು
author img

By

Published : May 30, 2021, 12:47 PM IST

ಮೈಸೂರು: ಪತ್ನಿಯ ತಿಥಿ ದಿನವೇ ಪತಿಯೂ ಕೋವಿಡ್​ಗೆ ಬಲಿಯಾದ ಹೃದಯವಿದ್ರಾವಕ ಘಟನೆ ನಗರದ ಗಂಗೋತ್ರಿ ಲೇಔಟ್​ನಲ್ಲಿ ನಡೆದಿದ್ದು, ದಂಪತಿಯ ಇಬ್ಬರು ಮಕ್ಕಳು ಅನಾಥರಾಗಿದ್ದಾರೆ.

ಕೆ.ಸುಷ್ಮಾ (37) ಡಿ. ಪ್ರಸನ್ನ (44) ಮೃತ ದಂಪತಿ. ಸುಷ್ಮಾ ಹಾಸನ ಸರ್ಕಾರಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿದ್ದರು. ಪತಿ ಪ್ರಸನ್ನ ಮೈಸೂರು ವಿವಿಯ ತೋಟಗಾರಿಕೆ ವಿಭಾಗದ ತಾತ್ಕಾಲಿಕ ವಾಹನ ಚಾಲಕನಾಗಿದ್ದರು.

ತಿಂಗಳ ಹಿಂದೆ ದಂಪತಿಗೆ ಕೋವಿಡ್​ ಸೋಂಕು ತಗುಲಿತ್ತು. ಹೀಗಾಗಿ ಇಬ್ಬರೂ ಹೋಂ ಕ್ವಾರಂಟೈನ್​ಗೆ ಒಳಗಾಗಿದ್ದರು. ಕ್ರಮೇಣ ಸೋಂಕು ಉಲ್ಬಣಗೊಂಡು ಸುಷ್ಮಾ ಮೃತಪಟ್ಟಿದ್ದರು. ಬಳಿಕ ಪತಿ ಪ್ರಸನ್ನ, ಮೇಟಗಳ್ಳಿ ಕೋವಿಡ್ ಆರೈಕೆ ಕೇಂದ್ರಕ್ಕೆ ದಾಖಲಾಗಿದ್ದರು. ದುಖಃದ ಸಂಗತಿಯೆಂದರೆ ಪತ್ನಿ ಮೃತಪಟ್ಟು ಅವರ ತಿಥಿ ದಿನವೇ ಪತಿ ಪ್ರಸನ್ನ ಕೂಡ ಇಹಲೋಕ ತ್ಯಜಿಸಿದ್ದಾರೆ. ದಂಪತಿಯ ಸಾವಿನಿಂದ ಅವರ 14 ಮತ್ತು 12 ವರ್ಷದ ಇಬ್ಬರು ಮಕ್ಕಳು ಅನಾಥರಾಗಿದ್ದಾರೆ.

ಓದಿ : ಮೈಸೂರು: ವರದಕ್ಷಿಣೆ ಕಿರುಕುಳ ತಾಳಲಾರದೆ ಗೃಹಿಣಿ ನೇಣಿಗೆ ಶರಣು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.