ETV Bharat / state

ಬನ್ನಿ ಮಂಟಪಕ್ಕೆ ಪೂಜೆ ನೆರವೇರಿಸಿದ ಯದುವೀರ್, ಬೆಳ್ಳಿ ಪಲ್ಲಕ್ಕಿ ಬದಲಾಗಿ ಕಾರಿನಲ್ಲಿ ಆಗಮನ - ಮೈಸೂರು ದಸರಾ ಹಬ್ಬ

ದಸರಾ ಅಂಗವಾಗಿ ರಾಜವಂಶಸ್ಥ ಯದುವೀರ್ ಬನ್ನಿ ಮಂಟಪಕ್ಕೆ ಪೂಜೆ ಸಲ್ಲಿಸಿದರು.

ಬನ್ನಿ ಪೂಜೆ ನೆರವೇರಿಸಿದ ರಾಜವಂಶಸ್ಥ ಯದುವೀರ್ ಚಾಮರಾಜ ಒಡೆಯರ್
author img

By

Published : Oct 8, 2019, 2:25 PM IST

Updated : Oct 8, 2019, 5:22 PM IST

ಮೈಸೂರು: ಎಲ್ಲೆಡೆ ದಸರಾ ಹಬ್ಬ ಕಳೆಗಟ್ಟಿದ್ದು, ಆಕರ್ಷಕ ಜಂಬೂ ಸವಾರಿಗೆ ಕ್ಷಣಗಣನೆ ಶುರುವಾಗಿದೆ. ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಬನ್ನಿ ಪೂಜೆ ನೆರವೇರಿಸಿದರು.

ಬೆಳಗ್ಗೆಯಿಂದಲೇ ಅರಮನೆಯ ಆವರಣದಲ್ಲಿ ಪಟ್ಟದ ಆನೆ, ಕುದುರೆ, ಹಸುವಿಗೆ ಪೂಜೆ ಸಲ್ಲಿಸಿ, ನಂತರ ಉತ್ತರ ಪೂಜೆ ವಿಧಿ ವಿಧಾನಗಳು ಆರಂಭವಾಗಿದ್ದವು. ಜಟ್ಟಿ ಕಾಳಗದ ನಂತರ ಯದುವೀರ್ ವಿಜಯ ಯಾತ್ರೆ ನಡೆಸಿದರು.

ಬನ್ನಿ ಪೂಜೆ ನೆರವೇರಿಸಿದ ರಾಜವಂಶಸ್ಥ ಯದುವೀರ್ ಚಾಮರಾಜ ಒಡೆಯರ್

ಈ ಸಂದರ್ಭದಲ್ಲಿ ಭುವನೇಶ್ವರಿ ದೇವಾಲಯದ ಆವರಣದಲ್ಲಿರುವ ಬನ್ನಿ ಅಥವಾ ಶಮಿ ವೃಕ್ಷಕ್ಕೆ ಅರಮನೆಯ ಆಯುಧಗಳನ್ನು ತಂದು ಪೂಜೆ ಸಲ್ಲಿಸಲಾಯಿತು.

ಆದರೆ, ಈ ಬಾರಿ ಯದುವೀರ್ ಬೆಳ್ಳಿ ಪಲ್ಲಕ್ಕಿಯಲ್ಲಿ ಬದಲಾಗಿ ತಮ್ಮ ಐಷಾರಾಮಿ ಕಾರಿನಲ್ಲಿ ಬಂದು ಪೂಜೆ ಸಲ್ಲಿಸಿದರು. ‌ಈ ಪೂಜೆಯಲ್ಲಿ ಅರಮನೆ ಆನೆ, ಒಂಟೆ, ಕುದುರೆ, ಹಸುಗಳು ಹೆಜ್ಜೆ ಹಾಕಿದವು.

Intro:ಮೈಸೂರು: ಬನ್ನಿ ಪೂಜೆ ಮಾಡುವ ಮೂಲಕ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಇಂದು ವಿಜಯದಶಮಿಯನ್ನು ಪೂರ್ಣಗೊಳಿಸಿದರುBody:

.

ಇಂದು ಬೆಳಿಗ್ಗೆಯಿಂದಲೇ ಅರಮನೆಯ ಆವರಣದಲ್ಲಿ ಪಟ್ಟದ ಆನೆ, ಪಟ್ಟದ ಕುದರೆ, ಪಟ್ಟದ ಹಸು ಪೂಜೆ ಸಲ್ಲಿಸಿದ ನಂತರ ಉತ್ತರ ಪೂಜೆ ವಿಧಿ ವಿಧಾನಗಳು ಆರಂಭವಾಗಿ ಜಟ್ಟಿ ಕಾಳಗದ ನಂತರ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ವಿಜಯಾತ್ರೆ ನಡೆಸಿದರು. ಈ ಸಂದರ್ಭದಲ್ಲಿ ಭುವನೇಶ್ವರಿ ದೇವಾಲಯದ ಆವರಣದಲ್ಲಿರುವ ಬನ್ನಿ ಅಥವಾ ಶಮಿ ವೃಕ್ಷಕ್ಕೆ ಅರಮನೆಯ ಆಯುಧಗಳನ್ನು ತಂದು ಪೂಜೆ ಸಲ್ಲಿಸಲಾಯಿತು.
ಆದರೆ ಈ ಬಾರಿ ಮಹರಾಜ ಯದುವೀರ್ ಬೆಳ್ಳಕ್ಕಿಯ ಪಲ್ಲಕ್ಕಿಯಲ್ಲಿ ಬರೆದ ತಮ್ಮ‌ ಐಶರಾಮಿ ಕಾರಿನಲ್ಲಿ ಬಂದು ಪೂಜೆ ಸಲ್ಲಿಸಿದ್ದು ವಿಶೇಷವಾಗಿತ್ತು.‌ಈ ಪೂಜೆಯಲ್ಲಿ ಅರಮನೆ ಆನೆ, ಒಂಟೆ, ಕುದರೆ, ಹಸುಗಳು ಭಾಗವಹಿಸಿದ್ದು ಬೆಳ್ಳಿಯ ಪಲ್ಲಕ್ಕಿಯಲ್ಲಿ ಆಯುಧಗಳನ್ನು ತಂದು ಪೂಜೆ ಸಲ್ಲಿಸಲಾಯಿತು.
ಇಂದು ನಡೆದ ಪೂಜೆಗಳ ಬಗ್ಗೆ ಅರಮನೆ ಪುರೋಹಿತ ನಾರಾಯಣ ಶಾಸ್ತ್ರಿ ವಿವರಿಸಿದ್ದಾರೆ.Conclusion:
Last Updated : Oct 8, 2019, 5:22 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.