ಮೈಸೂರು: ಜಿಲ್ಲೆಯಲ್ಲಿ ಕ್ವಾರಂಟೈನ್ನಲ್ಲಿ ಇರಿಸಿರುವ ವ್ಯಕ್ತಿಗಳ ಮನೆಗಳಿಗೆ ಔಷಧಿ ಸಿಂಪಡಿಸುವ ಪೌರಕಾರ್ಮಿಕರಿಗೆ ಮೈಸೂರು ಮಹಾನಗರ ಪಾಲಿಕೆಯಿಂದ ನೂತನ ಡ್ರೆಸ್ ನೀಡಲಾಗಿದೆ.
ನಗರದಲ್ಲಿ ಹೊರಗಡೆಯಿಂದ ಬಂದವರನ್ನು ಕ್ವಾರಂಟೈನ್ನಲ್ಲಿ ಇರಿಸಲಾಗಿದ್ದು, ಯಾರೂ ಸಹ ಹೊರಗೆ ಬಾರದ ಹಿನ್ನೆಲೆ ಮನೆಯ ಸುತ್ತ ಔಷಧಿ ಸಿಂಪಡಿಸಲಾಗಿದೆ. ನಗರದ ಎಲ್ಲಾ ಕ್ವಾರಂಟೈನ್ ಜೋನ್ಗಳಲ್ಲಿ ಕೆಲಸ ಮಾಡುವ ಇಬ್ಬಿಬ್ಬರಿಗೆ ಈ ಡ್ರೆಸ್ ನೀಡಲಾಗಿದೆ.