ETV Bharat / state

ಮೈಸೂರಲ್ಲಿ ಹೆಚ್ಚಾಯ್ತು ಕೊರೊನಾ: ಸೀಲ್​​ಡೌನ್​ ಆಗಿರುವ ಏರಿಯಾಗಳೆಷ್ಟು ಗೊತ್ತಾ..?

ಕೊರೊನಾ ಪ್ರಕರಣದಿಂದ ಮುಕ್ತವಾಗಿದ್ದ ಮೈಸೂರು ಜಿಲ್ಲೆಯಲ್ಲಿ ಸೋಂಕು ಕಾಣಿಸಿಕೊಂಡ ಹಿನ್ನೆಲೆ ಹಲವು ನಗರಗಳನ್ನು ಸೀಲ್​​​ಡೌನ್​ ಮಾಡಲಾಗಿದೆ. ಅಲ್ಲದೆ ಪೊಲೀಸ್​ ಸಿಬ್ಬಂದಿಗೆ ಕೊರೊನಾ ಕಾಣಿಸಿಕೊಂಡಿದ್ದ ಹಿನ್ನೆಲೆ ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ಈ ಹಿನ್ನೆಲೆ ಹಲವು ಏರಿಯಾಗಳನ್ನು ಸೀಲ್​ಡೌನ್ ಮಾಡಲಾಗಿದೆ.

Corona increased in Mysuru: Do you know how many sealdown areas in mysuru
ಮೈಸೂರಲ್ಲಿ ಹೆಚ್ಚಾಯ್ತು ಕೊರೊನಾ: ಸೀಲ್​​ಡೌನ್​ ಆಗಿರುವ ಏರಿಯಾಗಳೆಷ್ಟು ಗೊತ್ತಾ..?
author img

By

Published : Jun 23, 2020, 7:44 PM IST

ಮೈಸೂರು: ನಗರದಲ್ಲಿ ಮತ್ತೆ ಕೊರೊನಾ ಪಾಸಿಟಿವ್​​ ಸಂಖ್ಯೆ ಹೆಚ್ಚಾಗುತ್ತಿದ್ದು, ಜನರಲ್ಲಿ ಆತಂಕವು ಹೆಚ್ಚಾಗಿದೆ. ಈ ಮಧ್ಯೆ ಸೋಂಕಿತ ಪ್ರದೇಶಗಳು ಸೀಲ್​​ಡೌನ್ ಮಾಡಾಗುತ್ತಿದೆ.

ಪ್ರಾರಂಭದಲ್ಲಿ ಜುಬಿಲಂಟ್ ಕಾರ್ಖಾನೆಯಿಂದ ಕೊರೊನಾ ಹಾಟ್​​​ಸ್ಪಾಟ್ ಆಗಿದ್ದ ಮೈಸೂರು, 40 ದಿನಗಳಲ್ಲಿ ಕೊರೊನಾ ಮುಕ್ತ ನಗರ ಆಗಿತ್ತು , ಆದರೆ 2ನೇ ಹಂತದಲ್ಲಿ ಈಗ ಮಹಾರಾಷ್ಟ್ರ, ತಮಿಳುನಾಡು, ಉತ್ತರ ಭಾರತದ ಕಡೆಯಿಂದ ಬಂದವರಲ್ಲಿ ಕೊರೊನಾ ಕಾಣಿಸಿಕೊಂಡಿದೆ.

ಮೈಸೂರಲ್ಲಿ ಹೆಚ್ಚಾಯ್ತು ಕೊರೊನಾ: ಸೀಲ್​​ಡೌನ್​ ಆಗಿರುವ ಏರಿಯಾಗಳೆಷ್ಟು ಗೊತ್ತಾ..?

ಜೊತೆಯಲ್ಲಿ ಕೊರೊನಾ ಹಾಟ್​ಸ್ಪಾಟ್ ಆಗಿರುವ ಬೇರೆ ಜಿಲ್ಲೆಗಳಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದ ಕೆಎಎಸ್​​​ಆರ್​ಪಿ ಪೋಲಿಸರಿಂದ ಮತ್ತೆ ಮೈಸೂರಿನಲ್ಲಿ ಕೊರೊನಾ ಸೋಂಕಿತ ಪ್ರಕರಣಗಳು ಜಾಸ್ತಿಯಾಗುತ್ತಿದ್ದು , ಈ ಹಿನ್ನೆಲೆ ಸೋಂಕಿತ ಪ್ರದೇಶಗಳನ್ನು ಸೀಲ್​​​ಡೌನ್ ಮಾಡಲಾಗುತ್ತಿದೆ.

ಸೀಲ್​ಡೌನ್ ಆದ ಪ್ರದೇಶಗಳು ಎಷ್ಟು?

ನಗರದಲ್ಲಿ ಮತ್ತೆ ಕೊರೊನಾ ಸೋಂಕಿತ ಪ್ರಕರಣಗಳು ಜಾಸ್ತಿಯಾದ ಹಿನ್ನೆಲೆ ಇಲ್ಲಿಯವರಗೆ ನಗರದ 12 ಏರಿಯಾಗಳಲ್ಲಿ ಪಾಲಿಕೆಯ ಆರೋಗ್ಯಾಧಿಕಾರಿಗಳು ಸೀಲ್​ಡೌನ್ ಮಾಡಿದ್ದಾರೆ. ಮೈಸೂರು ನಗರದ ಇಟ್ಟಿಗೆ ಗೂಡು, ರಾಮಕ್ರಷ್ಣ ನಗರ, ಶ್ರೀರಾಂಪುರ, ಟಿ.ಕೆ ಲೇಔಟ್, ಜೆ.ಪಿ.ನಗರ, ಕ್ರಷ್ಣ ವಿಲಾಸ ರಸ್ತೆ, ಜೆ.ಸಿ.ಲೇಔಟ್, ವಿಜಯ ನಗರ, ಗೋಕುಲಂ, ಪ್ರದೇಶದ ಹನ್ನೆರಡು ಏರಿಯಾಗಳನ್ನು ಸದ್ಯಕ್ಕೆ ಸೀಲ್​​ಡೌನ್​​ ಮಾಡಲಾಗಿದೆ ಎಂದು ಪಾಲಿಕೆ ಆರೋಗ್ಯಾಧಿಕಾರಿ ಡಾ. ನಾಗರಾಜ್ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.