ಮೈಸೂರು: ಕೋವಿಡ್-19 ಹರಡದಂತೆ ದೇಶಾದ್ಯಂತ ಲಾಕ್ ಡೌನ್ ಜಾರಿಯಲ್ಲಿದ್ದರೂ ನಗರದಲ್ಲಿ ಅನಾವಶ್ಯಕವಾಗಿ ಸಂಚರಿಸುತ್ತಿದ್ದ 303 ವಾಹನಗಳನ್ನು ಸೀಜ್ ಮಾಡಲಾಗಿದೆ.
ಎನ್.ಆರ್. ವಿಭಾಗದಲ್ಲಿ 121, ದೇವರಾಜ ವಿಭಾಗದಲ್ಲಿ 36, ಕೆ.ಆರ್. ವಿಭಾಗದಲ್ಲಿ 58, ಸಂಚಾರ ವಿಭಾಗದಲ್ಲಿ 70 ಒಟ್ಟು 285 ಬೈಕ್, 8 ಕಾರುಗಳು, 10 ಆಟೋಗಳು ಸೇರಿ ಒಟ್ಟಾರೆ 303 ವಾಹನಗಳನ್ನು ಸೋಮವಾರ ವಶಪಡಿಸಿಕೊಳ್ಳಲಾಗಿದೆ.
ಅಲ್ಲದೇ ಕರ್ಫ್ಯೂ ನಿಯಮ ಉಲ್ಲಂಘಿಸಿದ ಐವರು ಕಾರು ಚಾಲಕರಿಗೆ ಸಿಸಿಟಿವಿ ಪರಿಶೀಲಿಸಿ ನೋಟಿಸ್ ನೀಡಲಾಗಿದ್ದು, ಮಂಗಳವಾರ ಸಂಜೆ 5 ಗಂಟೆಯೊಳಗೆ ಸಮಜಾಯಿಷಿ ನೀಡದಿದ್ದರೆ ಕ್ರಿಮಿನಲ್ ಕೇಸ್ ದಾಖಲು ಮಾಡಲಾಗುವುದು ಎಂದು ಡಿಸಿಪಿ ಡಾ. ಎ.ಎನ್. ಪ್ರಕಾಶ್ ಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.