ಮೈಸೂರು: ನಾಲ್ವರು ಪೊಲೀಸರು ಸೇರಿದಂತೆ ಇಂದು 38 ಮಂದಿಗೆ ಕೊರೊನಾ ವಕ್ಕರಿಸಿದ್ದು, ಈ ಮೂಲಕ ಮೈಸೂರಿನಲ್ಲಿ ಈವರೆಗೆ ಒಟ್ಟಾರೆ ಕೊರೊನಾ ಪ್ರಕರಣಗಳ ಸಂಖ್ಯೆ 411ಕ್ಕೇರಿದೆ. ಸಂಪರ್ಕಿತರಿಂದ 15 ಮಂದಿಗೆ, ಐಎಲ್ಐ 9, ಎಸ್‌ಎಆರ್‌ಐ 4, ನಾಲ್ವರು ಪೊಲೀಸರು, ಓರ್ವ ಅಂತರ್ ರಾಜ್ಯ, ನಾಲ್ವರು ಅಂತರ್ ಜಿಲ್ಲೆ, ಓರ್ವ ಗರ್ಭಿಣಿ ಸೇರಿದಂತೆ 38 ಮಂದಿಗೆ ಕೊರೊನಾ ವಕ್ಕರಿಸಿದ್ದು, 21 ಮಂದಿ ಗುಣಮುಖರಾಗಿ ಕೋವಿಡ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
![mysore](https://etvbharatimages.akamaized.net/etvbharat/prod-images/kn-mys-04-corona-vis-ka10003_04072020203223_0407f_1593874943_631.jpg)
ಈವರೆಗೆ 22,995 ಮಂದಿಗೆ ಪರೀಕ್ಷೆ ಮಾಡಲಾಗಿದ್ದು, ಅದರಲ್ಲಿ 22,584 ಜನರ ವರದಿ ನೆಗೆಟಿವ್ ಬಂದಿದೆ. ಈವರೆಗೆ ಮೈಸೂರಿನಲ್ಲಿ ಒಟ್ಟಾರೆ 411 ಕೊರೊನಾ ಪ್ರಕರಣಗಳು ಕಾಣಿಸಿಕೊಂಡಿದ್ದು, ಅದರಲ್ಲಿ ಇಲ್ಲಿಯವರೆಗೆ 240 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 167 ಸಕ್ರಿಯ ಪ್ರಕರಣಗಳಿದ್ದು, ಕೊರೊನಾದಿಂದ ನಾಲ್ವರು ಮರಣ ಹೊಂದಿದ್ದಾರೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.