ಮೈಸೂರು: ಕೆ ಆರ್‌ನಗರದ ಪುರಸಭೆಯ ಮತ ಎಣಿಕೆ ಮುಗಿದಿದೆ. ಕಾಂಗ್ರೆಸ್ 14 ಸ್ಥಾನ ಗೆಲ್ಲುವ ಮೂಲಕ ದೊಡ್ಡ ಪಕ್ಷವಾಗಿ ಪುರಸಭೆಯ ಅಧಿಕಾರವನ್ನು ಹಿಡಿದಿದೆ. ಜಿದ್ದಾಜಿದ್ದಿನ ಕದನದಲ್ಲಿ ಸಚಿವ ಸಾ ರಾ ಮಹೇಶ್‌ಗೆ ಸ್ವಕ್ಷೇತ್ರದಲ್ಲೇ ಭಾರೀ ಹಿನ್ನೆಡೆಯಾಗಿದೆ.
ಮೈಸೂರು ಜಿಲ್ಲೆಯ ಕೆ ಆರ್‌ನಗರ ಪುರಸಭೆಯ 23 ವಾರ್ಡ್‌ಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 14 ಸ್ಥಾನ, ಜೆಡಿಎಸ್ 8 ಸ್ಥಾನ ಮತ್ತು ಬಿಜೆಪಿ 1 ಸ್ಥಾನಕ್ಕಷ್ಟೇ ತೃಪ್ತಿಪಟ್ಟುಕೊಂಡಿದೆ. ಕೆಆರ್‌ನಗರ ಕ್ಷೇತ್ರ ಪ್ರತಿನಿಧಿಸುವ ಸಚಿವ ಸಾ ರಾ ಮಹೇಶ್ ತಮ್ಮ ಸ್ವಕ್ಷೇತ್ರದಲ್ಲಿ ತೆನೆ ಹೊತ್ತ ಮಹಿಳೆಯನ್ನ ಗೆಲುವಿನ ದಡಕ್ಕೆ ತಂದು ನಿಲ್ಲಿಸಲಾಗಿಲ್ಲ. ಸಚಿವ ಮಹೇಶ್ ವಿರುದ್ಧ ಕಾಂಗ್ರೆಸ್ ಈ ಬಾರಿ ಸ್ಪಷ್ಟ ಬಹುಮತ ಪಡೆದಿದ್ದು, ಅಧಿಕಾರದ ಗದ್ದುಗೆಯನ್ನೇರಲಿದೆ. ಮೈಸೂರು ಜಿಲ್ಲೆಯ ಕೆಆರ್‌ನಗರದಲ್ಲಿ ಮತ ಎಣಿಕೆ ಮುಕ್ತಾಯವಾಗಿದೆ.