ETV Bharat / state

ಧ್ರುವನಾರಾಯಣ್ ಉತ್ತರ ಕ್ರಿಯಾದಿ.. ಅಗಲಿದ ನಾಯಕನ ನೆನೆದ ಕಾಂಗ್ರೆಸ್ ಮುಖಂಡರು - ದಿ ಆರ್ ಧ್ರುವನಾರಾಯಣ್

ಮೈಸೂರು ನಗರದ ಕಾಂಗ್ರೆಸ್​ ಭವನದಲ್ಲಿ ದಿ ಆರ್ ಧ್ರುವನಾರಾಯಣ್ ಅವರಿಗೆ ನುಡಿ ನಮನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಧ್ರುವನಾರಾಯಣ್ ನೆನೆದು ಕಂಬನಿ ಮಿಡಿದ ಕಾಂಗ್ರೆಸ್ ಮುಖಂಡರು

author img

By

Published : Mar 21, 2023, 10:14 PM IST

Updated : Mar 21, 2023, 10:47 PM IST

ಧ್ರುವನಾರಾಯಣ್ ನೆನೆದು ಕಂಬನಿ ಮಿಡಿದ ಕಾಂಗ್ರೆಸ್ ಮುಖಂಡರು

ಮೈಸೂರು/ ಚಾಮರಾಜನಗರ: ಮಾಜಿ ಸಂಸದ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ದಿ ಆರ್ ಧ್ರುವನಾರಾಯಣ್ ಅವರೊಂದಿಗಿನ ಒಡನಾಟವನ್ನು ಅಂತರಾಳದಿಂದ ಸ್ಮರಿಸುತ್ತ, ಅವರೊಟ್ಟಿಗೆ ಕಳೆದ ದಿನಗಳನ್ನು ಒಡನಾಡಿಗಳು ಹಾಗೂ ಕಾಂಗ್ರೆಸ್ ಮುಖಂಡರು ಸ್ಮರಿಸಿ ಕಣ್ಣೀರು ಹಾಕಿದರು.

ಮೈಸೂರು ನಗರ ಹಾಗೂ ಜಿಲ್ಲಾ ಕಾಂಗ್ರೆಸ್​ನಿಂದ ಕಾಂಗ್ರೆಸ್ ಭವನದಲ್ಲಿ ಆಯೋಜಿಸಿದ್ದ ನುಡಿ ನಮನ ಕಾರ್ಯಕ್ರಮದಲ್ಲಿ ಹಲವು ಗಣ್ಯರು ಪಾಲ್ಗೊಂಡು ಧ್ರವನಾರಾಯಣ್ ಅವರಿಗೆ ನುಡಿ ನಮನ ಸಲ್ಲಿಸಿದರು. ಎಐಸಿಸಿ ಕಾರ್ಯದರ್ಶಿ ರೋಸಿ ಜಾನ್ ಮಾತನಾಡಿ, ಮೈಸೂರು, ಮಂಗಳೂರು ಚುನಾವಣಾ ಉಸ್ತುವಾರಿ ವಹಿಸಿಕೊಂಡು ಧ್ರುವನಾರಾಯಣ್ ಅವರೊಂದಿಗೆ ಕ್ಷೇತ್ರದಲ್ಲಿ ಪ್ರವಾಸ ಮಾಡಿದ್ದೇನೆ. ಎಲ್ಲ ಪಕ್ಷದವರೂ ಗೌರವಿಸುತ್ತಿದ್ದರು. ಜೆಂಟಲ್ ಮನ್ ರಾಜಕಾರಣಕ್ಕೆ ಮಾದರಿಯಾಗಿದ್ದರು. ಕಿರಿಯ ತಮ್ಮನಂತೆ ನೋಡಿಕೊಂಡರು. ತಳಮಟ್ಟದಿಂದ ಬೆಳೆದ ನಾಯಕರಾಗಿದ್ದರು ಎಂದರು.

ಅಗ್ರಿಕಲ್ಚರ್​ ಬಿಎಸ್ಸಿ ಓದಿ ರಾಜಕಾರಣಕ್ಕೆ ಬಂದಾಗ ಪೋಷಕರ ಬೆಂಬಲವೂ ಇರಲಿಲ್ಲ. ಸರ್ಕಾರಿ ಕೆಲಸ ಗಿಟ್ಟಿಸಿದರೂ ರಾಜಕೀಯ ಕ್ಷೇತ್ರವನ್ನು ಆಯ್ಕೆ ಮಾಡಿದರು. ಭಾರತ್ ಜೋಡೊ ಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದರು. ಮತ್ತೊಬ್ಬರ ನೋವನ್ನು ಆಲಿಸುವ ಗುಣವಿತ್ತು. ಯಾರೊಂದಿಗೂ ಕೋಪ ಮಾಡಿಕೊಳ್ಳದ ಅಂಬೇಡ್ಕರ್​ ವಾದಿ ಎಂದು ತಿಳಿಸಿದರು.

ಪರರಿಗಾಗಿ ಕೆಲಸ ಮಾಡಿದರು-ಎಸ್​ ಜಿ ಸಿದ್ದರಾಮಯ್ಯ : ಹಿರಿಯ ಸಾಹಿತಿ ಪ್ರೊ ಎಸ್ ಜಿ ಸಿದ್ದರಾಮಯ್ಯ ಮಾತನಾಡಿ, ಆರ್. ಧ್ರುವನಾರಾಯಣ ಸಮುದಾಯ ಮತ್ತು ರಾಜಕೀಯ ನಿಷ್ಠೆ ಬೇರ್ಪಡಿಸಲಾಗದ ತಾತ್ವಿಕವಾಗಿ ಅಂತರ್ಗತವಾಗಿತ್ತು. ರಾಜಕೀಯ ಶೂನ್ಯ ಆವರಿಸಿತು. ಅವರ ನಿರ್ಗಮನ ದಿಗ್ಭ್ರಾಂತಿ. ಸ್ವಾರ್ಥಕ್ಕಾಗಿ ಬದುಕದೇ ಪರರಿಗಾಗಿ ಕೆಲಸ ಮಾಡಿದರು. ಅವರು ಕಣ್ಣು, ಕಿವಿ ಕಳೆದುಕೊಂಡಿರಲಿಲ್ಲ. ನೆನಪು ಮಾಸಿರಲಿಲ್ಲ. ಪ್ರತಿ ಮಾತಿನಲ್ಲಿ ಸಜ್ಜನಿಕೆ ವ್ಯಕ್ತವಾಗುತ್ತಿತ್ತು. ಮಾತು ಮೃದು, ನಿಲುವು ಕಠೋರವಾಗಿತ್ತು. ಹುಟ್ಟಿ ಬಂದ ಮೂಲ, ಚರಿತ್ರೆ ಅರ್ಥ ಮಾಡಿಕೊಂಡಿದ್ದರು. ಬಹುತ್ವದ ಸಮಾಜಕ್ಕೆ ಅನುಕೂಲವಾಗುವ ಕಡೆ ಇದ್ದರು ಎಂದರು.

ದಿ ಆರ್ ಧ್ರುವನಾರಾಯಣ್  ನುಡಿ ನಮನ ಕಾರ್ಯಕ್ರಮದಲ್ಲಿ ಕಾಂಗ್ರೆಸ್​ ಮುಖಂಡರು

ರಂಗಾಯಣದ ಮಾಜಿ ನಿರ್ದೇಶಕ ಹೆಚ್ ಜನಾರ್ಧನ್ (ಜನ್ನಿ) ಕವಿ ಕುವೆಂಪು ವಿಶ್ವಮಾನವ ಗೀತೆಯನ್ನು ಹಾಡಿದರು. ಮಹಿಳಾ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆ ಲತಾ ಸಿದ್ದಶೆಟ್ಟಿ, ಶಾಸಕರಾದ ತನ್ವೀರ್ ಸೇಠ್, ಡಾ. ಯತೀಂದ್ರ ಸಿದ್ದರಾಮಯ್ಯ, ಎಂಎಲ್ಸಿ ಡಾ. ತಿಮ್ಮಯ್ಯ, ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ. ಪುಷ್ಪಾ ಅಮರನಾಥ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಬಿ. ಜೆ ವಿಜಯ್​ ವರ್ಮಾ, ನಗರ ಕಾಂಗ್ರೆಸ್ ಅಧ್ಯಕ್ಷ ಆರ್​​. ಮೂರ್ತಿ, ಮಾಜಿ ಶಾಸಕರಾದ ರಮೇಶ್ ಬಂಡಿಸಿದ್ದೇ ಗೌಡ, ವಾಸು, ಸಂದೇಶ್ ನಾಗರಾಜ್, ಎ. ಆರ್. ಕೃಷ್ಣಮೂರ್ತಿ.

ಆರ್​. ಧರ್ಮಸೇನಾ, ಸುನಿತಾ ವೀರಪ್ಪಗೌಡ ಕಾಂಗ್ರೆಸ್ ಮುಖಂಡರಾದ ಹರೀಶ್​ ಗೌಡ ಡಿ. ರವಿಂಶಂಕರ್​, ಸಾಹಿತಿ ಪ್ರೊ. ಕಾಳೇಗೌಡ ನಾಗವಾರ, ಪತ್ರಕರ್ತರಾದ ಕೆ.ದೀಪಕ್, ಟಿ. ಗುರುರಾಜ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ಮಾಜಿ ಮೇಯರ್ ಪುರುಷೋತ್ತಮ್, ಅಯೂಬ್ ಖಾನ್, ಶಿವ ನಾಗಪ್ಪ, ಲೋಕೇಶ್ ರಾವ್, ಎಂ ಶಿವಣ್ಣ, ಹುಣಸೂರು ಬಸವಣ್ಣ, ಲತಾ ಸಿದ್ದು ಶೆಟ್ಟಿ, ಶ್ರೀಮತಿ ಪುಷ್ಪಲತಾ ಚಿಕ್ಕಣ್ಣ, ಪುಷ್ಪವಲ್ಲಿ, ಸುನಂದ್ ಕುರ್ಮಾ, ಎಡತಲೆ ಮಂಜುನಾಥ್, ಶಿವಪ್ರಸಾದ್, ಈಶ್ವರ್ ಚಕ್ಕಡಿ, ಗಿರೀಶ್, ಅಶೋಕ್ ಇನ್ನಿತರರು ಉಪಸ್ಥಿತರಿದ್ದರು.

ಧ್ರುವನಾರಾಯಣ ಉತ್ತರ ಕ್ರಿಯಾದಿ: ವಿಪಕ್ಷ ನಾಯಕ ಸಿದ್ದರಾಮಯ್ಯ ಭಾಗಿ, ಕಂಬನಿ: ಇತ್ತೀಚೆಗೆ ಅಗಲಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ಅವರ 11ನೇ ದಿನದ ಕಾರ್ಯ ಚಾಮರಾಜನಗರ ತಾಲೂಕಿನ ಹೆಗ್ಗವಾಡಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆಯಿತು. ವಿಪಕ್ಷ ನಾಯಕ ಸಿದ್ದರಾಮಯ್ಯ ಭಾಗಿಯಾಗಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಧ್ರುವನಾರಾಯಣ ಒಳ್ಳೆಯ ಮನುಷ್ಯ, ನೀವೆಲ್ಲಾ ದೊಡ್ಡವರಿದ್ದೀರಿ, ಧೈರ್ಯವಾಗಿರಿ, ನೀವೇ ಕುಗ್ಗಿದರೆ ಚಿಕ್ಕವರನ್ನು ಸಮಾಧಾನ ಮಾಡುವವರು ಯಾರು..? ಎಂದು ಧ್ರುವ ಸಹೋದರಿಯರಿಗೆ ಸಾಂತ್ವನದ ಮಾತುಗಳನ್ನು ಹೇಳಿದರು. ಧ್ರುವ ಅವರ ಭಾವಚಿತ್ರಕ್ಕೆ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರುಗಳು, ಪದಾಧಿಕಾರಿಗಳು ಪುಷ್ಪ ನಮನ‌ ಸಲ್ಲಿಸಿದರು.

ಇದನ್ನೂ ಓದಿ : ಸಕಲ ಸರ್ಕಾರಿ ಗೌರವದೊಂದಿಗೆ ಮಾಜಿ ಸಂಸದ ಧ್ರುವನಾರಾಯಣ್ ಅಂತ್ಯಕ್ರಿಯೆ: ಸಿಎಂ ಬಸವರಾಜ ಬೊಮ್ಮಾಯಿ

Last Updated : Mar 21, 2023, 10:47 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.