ಮೈಸೂರು: ಶೂ ಒಳಗೆ ಅಡಗಿ ಕುಳಿತ್ತಿದ್ದ ಆಭರಣ ಹಾವು ರಕ್ಷಣೆ ಮಾಡಿ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ.
ದಟ್ಟಗಳ್ಳಿಯ ಕನಕದಾಸ ನಗರದ ಮನೆಯೊಂದರ ಮಾಲೀಕ ಶೂ ಹಾಕಿಕೊಳ್ಳಲು ಮುಂದಾಗ ಹಾವಿನ ಬಾಲ ಕಾಲಿಗೆ ತಾಗಿದೆ. ಇದರಿಂದ ಎಚ್ಚೆತ ಅವರು ಕೂಡಲೇ ಸ್ನೇಕ್ ಸೂರ್ಯ ಕಿರ್ತೀಗೆ ಕರೆ ಮಾಡಿದ್ದಾರೆ. ಸ್ಥಳಕ್ಕಾಗಮಿಸಿದ ಸೂರ್ಯಕೀರ್ತಿ, ಇಲಿ ತಿಂದು ಶೂ ಒಳಗೆ ಅವಿತುಕೊಂಡಿದ್ದ ಆಭರಣ ಹಾವು ರಕ್ಷಣೆ ಮಾಡಿದ್ದಾರೆ.
ಈ ಆಭರಣದ ಹಾವು ರಾತ್ರಿ ವೇಳ ಆಕ್ಟಿವ್ ಆಗಿರುತ್ತದೆ. ಇದು ವಿಷಕಾರಿಯಾಗಿರುವುದಿಲ್ಲ. ಇವುಗಳಿಗೆ ಕೋಪ ಜಾಸ್ತಿ ಇರುತ್ತದೆ. ಬೇಸಿಗೆಯಾಗಿರುವುದರಿಂದ ತಣ್ಣನೆ ಸ್ಥಳ ಹುಡುಕಿ ಅವುಗಳು ಬರುತ್ತವೆ.