ETV Bharat / state

ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ, ಬಿಜೆಪಿಗರು ಆ ಪಕ್ಷಕ್ಕೆ ಹೋಗಲ್ಲ: ಅಶ್ವತ್ಥ ನಾರಾಯಣ್ - ಹೊಸ ಶಿಕ್ಷಣ ನೀತಿ

30 ರಿಂದ 40 ಬಿಜೆಪಿ ಶಾಸಕರು ಕಾಂಗ್ರೆಸ್​ಗೆ ಬರುತ್ತಾರೆ ಎಂಬ ಕಾಂಗ್ರೆಸ್​ ನಾಯಕರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಸಚಿವ ಅಶ್ವತ್ಥ​ ನಾರಾಯಣ್​, ಕಾಂಗ್ರೆಸ್​ ಎಂದಿಗೂ ಅಧಿಕಾರಕ್ಕೆ ಬರುವುದಿಲ್ಲ. ಬಿಜೆಪಿ ಪ್ರಸ್ತುತ ಇಂತಹ ಸಂದರ್ಭದಲ್ಲಿ ಯಾರೂ ಆ ಪಕ್ಷಕ್ಕೆ ಹೋಗುವುದಿಲ್ಲ ಎಂದು ಹೇಳಿದರು.

author img

By

Published : Oct 4, 2021, 9:31 PM IST

ಮೈಸೂರು: ಕಾಂಗ್ರೆಸ್​ನವರು ರಾಜ್ಯದಲ್ಲಿ ಎಂದೂ ಅಧಿಕಾರಕ್ಕೆ ಬರುವುದಿಲ್ಲ. ಎಂದೆಂದಿಗೂ ಭಾರತೀಯ ಜನತಾ ಪಾರ್ಟಿ ಪ್ರಸ್ತುತವಾಗಿರುತ್ತದೆ. ಯಾವ ಬಿಜೆಪಿ ಶಾಸಕರೂ ಕಾಂಗ್ರೆಸ್​ಗೆ ಹೋಗುವುದಿಲ್ಲ ಎಂದು ಸಚಿವ ಸಿ. ಎನ್​. ಅಶ್ವತ್ಥ ನಾರಾಯಣ್ ಹೇಳಿದರು.

ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಂದು ನಗರಕ್ಕೆ ಆಗಮಿಸಿದ್ದ ವೇಳೆ ಮಾಧ್ಯಮಗಳ ಜೊತೆ ಮಾತನಾಡಿ, 30 ರಿಂದ 40 ಬಿಜೆಪಿ ಶಾಸಕರು ಕಾಂಗ್ರೆಸ್​ಗೆ ಬರುತ್ತಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಕಾಂಗ್ರೆಸ್​ನವರಿಗೆ ಭಯ ಹುಟ್ಟಿದೆ. ನಾವು ಮತ್ತೆ ಅಧಿಕಾರಕ್ಕೆ ಬರುವುದಿಲ್ಲ. ನಮ್ಮ ಕಥೆ ಏನು ? ಪಕ್ಷ ಬಿಟ್ಟು ಈಗಲೇ ಎಲ್ಲಾದರೂ ಹಾರಿಬಿಡೋಣ ಎಂಬ ಮನಸ್ಥಿತಿ ಅವರಲ್ಲಿದೆ.

ರಾಷ್ಟ್ರ ಮಟ್ಟದಲ್ಲಿ ಪಕ್ಷ ಮೂರು ಭಾಗವಾಗಿ ಒಡೆದು ಹೋಗುತ್ತಿದೆ. ಎಲ್ಲ ರಾಜ್ಯಗಳಲ್ಲೂ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳುತ್ತಿದೆ. ನಾಯಕರು ಮುಖ್ಯಮಂತ್ರಿ ಪದವಿಗಾಗಿ ಹಗಲುಗನಸು ಕಾಣುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಯಾರೂ ಕೂಡ ಕಾಂಗ್ರೆಸ್ ಪಕ್ಷಕ್ಕೆ ಹೋಗುವುದಿಲ್ಲ ಎಂದರು.

ಮುಂದಿನ ಜನಾಂಗಕ್ಕೆ ಹೊಸ ಶಿಕ್ಷಣ ನೀತಿ ಪ್ರೇರಣೆ: ಪ್ರಾಥಮಿಕ ಹಂತದಿಂದಲೇ ರಾಷ್ಟ್ರೀಯ ಶಿಕ್ಷಣ ನೀತಿ ಆರಂಭಿಸಲು ಚಿಂತಿಸಲಾಗಿದೆ. ಆ ಮೂಲಕ 21ನೇ ಶತಮಾನಕ್ಕೆ ರಾಷ್ಟ್ರೀಯ ಶಿಕ್ಷಣ ನೀತಿ ಪ್ರೇರಣೆಯಾಗಲಿದೆ ಎಂದರು.

ಯುವಕರಿಗೆ ತರಬೇತಿ: ಕೋವಿಡ್ ನಿಂದ‌ ಸಂಕಷ್ಟಕ್ಕೆ ಸಿಲುಕಿ ಯುವ ಜನತೆ ಆತ್ಮಹತ್ಯೆಗೆ ಶರಣಾಗುತ್ತಿದ್ದು, ಇಂತಹ ಸಂದರ್ಭದಲ್ಲಿ ಇಲಾಖಾ ವತಿಯಿಂದ ಯುವಜನರಿಗೆ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ನೀಡಿ, ಆರ್ಥಿಕ ಸಹಾಯ ಮಾಡುವ ಜೊತೆಗೆ ಉದ್ಯೋಗ ಕಲ್ಪಿಸುವ ತರಬೇತಿ ನೀಡಿ ಯುವ ಜನರಿಗೆ ಬದುಕಲು ಎಲ್ಲ ರೀತಿಯ ಸಹಾಯ ಮಾಡಲಾಗುವುದು ಎಂದು ಸಚಿವರು ಇದೇ ಸಂದರ್ಭದಲ್ಲಿ ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.